ಡಿಸಿಸಿ ಬ್ಯಾಂಕ್‌ನಿಂದ ರೈತರಿಗೆ ಅಗತ್ಯ ಸೌಲಭ್ಯ: ಅಮರ ಖಂಡ್ರೆ

| Published : Feb 11 2024, 01:45 AM IST

ಸಾರಾಂಶ

ಭಾತಂಬ್ರಾ ಗ್ರಾಮದ ಪಿಕೆಪಿಎಸ್ ವತಿಯಿಂದ ಆಯೋಜಿಸಿದ್ದ 500 ಮೆಟ್ರಿಕ್‌ ಟನ್‌ ಗೋದಾಮು ಕಟ್ಟಡಕ್ಕೆ ಬೀದರ್ ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಅಮರಕುಮಾರ ಖಂಡ್ರೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಭಾಲ್ಕಿ

ಬೀದರ್ ಡಿಸಿಸಿ ಬ್ಯಾಂಕ್ ಮೂಲಕ ರೈತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಬೀದರ್ ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಅಮರಕುಮಾರ ಖಂಡ್ರೆ ಹೇಳಿದರು.

ತಾಲೂಕಿನ ಭಾತಂಬ್ರಾ ಗ್ರಾಮದ ಪಿಕೆಪಿಎಸ್ ವತಿಯಿಂದ ಶನಿವಾರ ಆಯೋಜಿಸಿದ್ದ 500 ಮೆಟ್ರಿಕ್‌ ಟನ್‌ ಗೋದಾಮು ಕಟ್ಟಡ ಅಡಿಗಲ್ಲು ಪೂಜೆ ನೆರವೇರಿಸಿ ಮಾತನಾಡಿದ ಅವರು, ಸದ್ಯ ಡಿಸಿಸಿ ಬ್ಯಾಂಕ್‌ನಲ್ಲಿ ಆಗಿರುವ ನ್ಯೂನತೆಗಳನ್ನು ಸರಿಪಡಿಸುವ ಪ್ರಯತ್ನ ಮಾಡುತ್ತೇನೆ. ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ರೈತರಿಗೆ ಸಾಲ ಸೇರಿ ಮತ್ತಿತರ ಸೌಲಭ್ಯಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಪಿಕೆಪಿಎಸ್ ಅಧ್ಯಕ್ಷ ಸತೀಶಕುಮಾರ ಬಿರಾದಾರ ಮಾತನಾಡಿ, ಸಂಘದ ಎಲ್ಲ ನಿರ್ದೇಶಕರು ಮತ್ತು ಗ್ರಾಮದ ಪ್ರಮುಖರ ಸಹಕಾರದೊಂದಿಗೆ ಸಂಘವನ್ನು ಲಾಭದತ್ತ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿದ್ದೇನೆ. ಮುಂಬರುವ ದಿನಗಳಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣ, ಪೆಟ್ರೋಲ್ ಪಂಪ್ ತೆರೆಯುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಅಶೋಕಕುಮಾರ ಸೋನಜಿ, ಗ್ರಾಪಂ ಅಧ್ಯಕ್ಷ ವಿಜಯಕುಮಾರ ಗಾಮಾ, ಪಿಕೆಪಿಎಸ್ ನಿರ್ದೇಶಕರಾದ ಗುಂಡಪ್ಪ ರಾಮಶೆಟ್ಟೆ, ವಿಜಯಕುಮಾರ ಉಚಾಟೆ, ಮಹೇಶ ಬಿರಾದಾರ, ವೆಂಕಟ ಠಾಕೂರ, ಭಾನುದಾಸ ಜಾಧವ, ಗ್ರಾಪಂ ಸದಸ್ಯರಾದ ಜೈರಾಜ ಪಾಟೀಲ್, ಮಹಾಂತೇಶ ಪಾಟೀಲ್, ಸೇರಿದಂತೆ ಹಲವರು ಇದ್ದರು.

ಉಪಾಧ್ಯಕ್ಷ ಚಂದ್ರಕಾಂತ ಕುಟಮಲಗೆ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿದರೆ ಸಿಇಓ ಶೈಲಜಾ ಕನಶೆಟ್ಟೆ ವಂದಿಸಿದರು.