ಆದಾಯ ಸೃಷ್ಟಿಸಲು ಅಗತ್ಯ ಕ್ರಮಕ್ಕೆ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ

| Published : Jan 04 2025, 12:30 AM IST

ಆದಾಯ ಸೃಷ್ಟಿಸಲು ಅಗತ್ಯ ಕ್ರಮಕ್ಕೆ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಹೊಂದಿರುವ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಜನಸಾಂದ್ರತೆ ಹೆಚ್ಚಾಗುತ್ತಿದ್ದು, ಮೂಲ ಸೌಕರ್ಯ ಕಲ್ಪಿಸಲು ಹೆಚ್ಚಿನ ಪ್ರಮುಖ ಆದ್ಯತೆ ನೀಡಬೇಕು. ಅಲ್ಲದೇ ಪುರಸಭೆ ವ್ಯಾಪ್ತಿಯಿಂದ ಹೊರಗುಳಿದಿರುವ ಕೈಗಾರಿಕೆ, ವಾಣಿಜ್ಯ, ವಾಣಿಜ್ಯೇತರ ಕಟ್ಟಡಗಳನ್ನು ವ್ಯಾಪ್ತಿಗೆ ತರುವ ಮೂಲಕ ಆದಾಯ ಸೃಷ್ಟಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಪುರಸಭೆ ಸಭಾಭವನದಲ್ಲಿ ನಡೆದ 2025-26 ನೇ ಸಾಲಿನ ಆಯವ್ಯಯ (ಬಜೆಟ್) ಪೂರ್ವಭಾವಿ ಸಭೆಯಲ್ಲಿ ಸದಸ್ಯರು ಸರ್ವಾನುಮತದ ತೀರ್ಮಾನ ಕೈಗೊಂಡರು.

ಬ್ಯಾಡಗಿ: ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಹೊಂದಿರುವ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಜನಸಾಂದ್ರತೆ ಹೆಚ್ಚಾಗುತ್ತಿದ್ದು, ಮೂಲ ಸೌಕರ್ಯ ಕಲ್ಪಿಸಲು ಹೆಚ್ಚಿನ ಪ್ರಮುಖ ಆದ್ಯತೆ ನೀಡಬೇಕು. ಅಲ್ಲದೇ ಪುರಸಭೆ ವ್ಯಾಪ್ತಿಯಿಂದ ಹೊರಗುಳಿದಿರುವ ಕೈಗಾರಿಕೆ, ವಾಣಿಜ್ಯ, ವಾಣಿಜ್ಯೇತರ ಕಟ್ಟಡಗಳನ್ನು ವ್ಯಾಪ್ತಿಗೆ ತರುವ ಮೂಲಕ ಆದಾಯ ಸೃಷ್ಟಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಪುರಸಭೆ ಸಭಾಭವನದಲ್ಲಿ ನಡೆದ 2025-26 ನೇ ಸಾಲಿನ ಆಯವ್ಯಯ (ಬಜೆಟ್) ಪೂರ್ವಭಾವಿ ಸಭೆಯಲ್ಲಿ ಸದಸ್ಯರು ಸರ್ವಾನುಮತದ ತೀರ್ಮಾನ ಕೈಗೊಂಡರು.

ಕನಿಷ್ಠ 1.50 ಕೋಟಿ ಆದಾಯ ಕುಂಠಿತ:ವಿಷಯದ ಕುರಿತು ಗಮನ ಸೆಳೆದ ಸದಸ್ಯ ಬಸವರಾಜ ಛತ್ರದ, ಪುರಸಭೆ ವ್ಯಾಪ್ತಿಯನ್ನು 5 ಕಿ.ಮೀ. ವಿಸ್ತರಿಸುವಂತೆ ಸರ್ಕಾರದ ಸ್ಪಷ್ಟ ನಿರ್ದೇಶನವಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೇವಲ ಅರ್ಧ ಕಿ.ಮೀ. ಅಂತರದಲ್ಲಿರುವ ವಾಣಿಜ್ಯ, ವಸತಿ ಮತ್ತು ಕೈಗಾರಿಕೆ ಕಟ್ಟಡಗಳನ್ನು ತೆರಿಗೆ ವ್ಯಾಪ್ತಿಯಿಂದ ಕೈಬಿಡಲಾಗಿದೆ. ಕನಿಷ್ಠ ತರೇದಹಳ್ಳಿ, ಮಲ್ಲೂರ, ಗುಮ್ಮನಹಳ್ಳಿ ಗ್ರಾಮದ ವಾಣಿಜ್ಯ, ವಾಣಿಜ್ಯೇತರ ಮತ್ತು ಕೈಗಾರಿಕೆ (ಕೋಲ್ಡ್ ಸ್ಟೋರೇಜ್, ಪೌಡರ್ ಫ್ಯಾಕ್ಟರಿ) ಕಟ್ಟಡಗಳಿಗೆ ತೆರಿಗೆ ಆಕರಣೆ ವ್ಯಾಪ್ತಿಗೆ ತರಲೇಬೇಕು, ಇದರಿಂದ ಮಾಲೀಕರ ಆಸ್ತಿ ಮೌಲ್ಯವು ಸಹ 10 ಪಟ್ಟು ಹೆಚ್ಚಾಗಲಿದೆ. ಇದರಿಂದ ಕನಿಷ್ಠ ರು.1.50 ಕೋಟಿಗೂ ಅಧಿಕ ಆದಾಯ ಪುರಸಭೆಗೆ ಬರಲಿದೆ. ಪುರಸಭೆ ವ್ಯಾಪ್ತಿಗೆ ಸೇರಿಸಿಕೊಳ್ಳುವಂತೆ ಖುದ್ದಾಗಿ ಮಾಲೀಕರೇ ಮನವಿ ಮಾಡಿದರೂ ತಾಂತ್ರಿಕ ಕಾರಣ ನೆಪವನ್ನಿಟ್ಟುಕೊಂಡು ಮುಂದೂಡಲಾಗುತ್ತಿದೆ. ಕೂಡಲೇ ಕೆಲ ಸರ್ವೇ ನಂಬರಗಳನ್ನು ನಮ್ಮ ವ್ಯಾಪ್ತಿಗೆ ತರುವ ಮೂಲಕ ಬಜೆಟ್‌ನಲ್ಲಿ ತೆರಿಗೆ ಆಕರಣೆಗೆ ಅವಕಾಶ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಮೂಲ ಸೌಕರ್ಯಕ್ಕೆ ಆದ್ಯತೆ: ಪಟ್ಟಣದಲ್ಲಿ ಮೂಲ ಸೌಕರ್ಯ ಕಲ್ಪಿಸುವಲ್ಲಿ ನಾವೆಲ್ಲರೂ ವಿಫಲವಾಗಿದ್ದೇವೆ. ಹೀಗಾಗಿ ಸಾರ್ವಜನಿಕರಿಂದ ಮುಜಗುರಕ್ಕೊಳಗಾಗುತ್ತಿರುವ ಪ್ರಸಂಗಗಳು ನಡೆದಿವೆ. ಜನಸಂಖ್ಯೆ 40 ಸಾವಿರ ತಲುಪುತ್ತಿದೆ. ಅಂತರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಹೊಂದಿರುವ ಬ್ಯಾಡಗಿ ಪ್ರಸ್ತುತ ಒಟ್ಟು ವಿಸ್ತೀರ್ಣ 4.5 ಕಿಮೀ.ನಷ್ಟಾಗಿದೆ. ಸ್ವಚ್ಛತೆ ಸೇರಿದಂತೆ ರಸ್ತೆ, ಚರಂಡಿ, ಕುಡಿಯುವ ನೀರು ಹಾಗೂ ಶೌಚಾಲಯಗಳು ನಮ್ಮ ಪುರಸಭೆಯ ಗೌರವ ಹೆಚ್ಚಿಸಲಿವೆ. ಹೀಗಾಗಿ ಯಾವುದೇ ಕಾರಣಕ್ಕೂ ಪ್ರಸಕ್ತ ಬಜೆಟ್‌ನಲ್ಲಿ ಮೂಲ ಸೌಕರ್ಯಕ್ಕೆ ಪ್ರಮುಖ ಆದ್ಯತೆ ನೀಡುವಂತೆ ಸಲಹೆ ನೀಡಿದರು.

ಕ್ರೀಡಾನಿಧಿ 10 ಲಕ್ಷಕ್ಕೆ ಹೆಚ್ಚಿಸಿ

ಉಪಾಧ್ಯಕ್ಷ ಸುಭಾಸ ಮಾಳಗಿ ಮಾತನಾಡಿ, ಈ ಬಾರಿಯ ಆಯವ್ಯಯದಲ್ಲಿ ಕ್ರೀಡಾನಿಧಿಯನ್ನು 4ರಿಂದ 10 ಲಕ್ಷಕ್ಕೆ ಹೆಚ್ಚಳ ಮಾಡಿ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು. ಕಬಡ್ಡಿ, ಲಂಗಡಿ, ಕರಾಟೆ, ಖೋಖೋ ಸೇರಿದಂತೆ ಪಟ್ಟಣದಲ್ಲಿ ಸಾಕಷ್ಟು ಉದಯೋನ್ಮುಖ ಕ್ರೀಡಾಪಟುಗಳಿದ್ದಾರೆ. ಅವರ ಕ್ರೀಡಾ ಭವಿಷ್ಯಕ್ಕೆ ಪುರಸಭೆ ಇಲ್ಲಿಯವರೆಗೂ ಯಾವುದೇ ಅನುದಾನ ನೀಡಿರುವುದಿಲ್ಲ. ದಿನಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸುವ ಮೂಲಕ ಪ್ರಸಕ್ತ ವರ್ಷವಾದರೂ ಕ್ರೀಡಾಪಟುಗಳನ್ನು ಗುರ್ತಿಸುವ ಕೆಲಸವಾಗಬೇಕಾಗಿದೆ ಎಂದರು.

ಪ್ರಿಪೇಯ್ಡ್ ಪಾರ್ಕ ನಿರ್ಮಿಸಿ: ಸದಸ್ಯ ಈರಣ್ಣ ಬಣಕಾರ ಮಾತನಾಡಿ, ಪಟ್ಟಣದ ಹೊರವಲಯದಲ್ಲಿ ಪ್ರಿಪೇಯ್ಡ್ ಪಾರ್ಕ ನಿರ್ಮಿಸಬೇಕಲ್ಲದೇ ಪಟ್ಟಣದ ಎಲ್ಲಾ ಪಾರ್ಕಗಳನ್ನು ಆದ್ಯತೆ ಮೇರೆಗೆ ಅಭಿವೃದ್ಧಿಪಡಿಸಬೇಕು. ಇದಕ್ಕಾಗಿ ಅವಶ್ಯವಿರುವ ಅನುದಾನವನ್ನು ಪ್ರಸಕ್ತ ಬಜೆಟ್‌ನಲ್ಲಿ ಮೀಸಲಿಡುವಂತೆ ಸಲಹೆ ನೀಡಿದ ಅವರು, ಮಳಿಗೆ ಬಾಡಿಗೆ ಎಸ್‌ಎಎಸ್ ಹಾಗೂ ನೀರಿನ ತೆರಿಗೆಗಳನ್ನು ಕಡ್ಡಾಯ ವಸೂಲಿಗೆ ಕ್ರಮಕೈಗೊಳ್ಳುವಂತೆ ಸಲಹೆ ನೀಡಿದರು.

ವೇದಿಕೆಯಲ್ಲಿ ಸ್ಥಾಯಿ ಸಮಿತಿ ಸದಸ್ಯ ಚಂದ್ರಣ್ಣ ಶೆಟ್ಟರ ಉಪಸ್ಥಿತರಿದ್ದರು. ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಫಕ್ಕೀರಮ್ಮ ಛಲವಾದಿ, ಕಲಾವತಿ ಬಡಿಗೇರ, ಹನುಮಂತ ಮ್ಯಾಗೇರಿ, ಸರೋಜಾ ಉಳ್ಳಾಗಡ್ಡಿ, ಜಮೀಲಾ ಹರ‍್ಕಲ್, ಮೆಹಬೂಬ್ ಅಗಸನಹಳ್ಳಿ, ಗಾಯತ್ರಿ ರಾಯ್ಕರ, ಕಮಲವ್ವ ಕುರಕುಂದಿ, ಮಹ್ಮದ್‌ರಫೀಕ್ ಮುದಗಲ್, ವಿನಯ್ ಹಿರೇಮಠ, ಕವಿತಾ ಸೊಪ್ಪಿನಮಠ, ರೇಷ್ಮಾಬಾನು ಶೇಖ್, ಮಲ್ಲಮ್ಮ ಪಾಟೀಲ ಸೇರಿದಂತೆ ಪುರಸಭೆ ಸಿಬ್ಬಂದಿಗಳು ಉಪಸ್ಥಿತರಿದ್ದರು.ಕೋಟ್:

ವಿಶೇಷ ಅನುದಾನದಡಿ ಕಾರ್ಯಕ್ರಮಗಳು

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿಶೇಷ ಅನುದಾನದಲ್ಲಿ ಕೆರೆಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿದ್ದು, ಪ್ರಸಕ್ತ ಬಜೆಟ್‌ನಲ್ಲಿ ಡಿಪಿಆರ್ ಹಣ ಮೀಸಲಿಡುವ ಕುರಿತು ನಿರ್ಧರಿಸಲಾಗಿದೆ.

ವಿನಯಕುಮಾರ ಹೊಳೆಯಪ್ಪಗೋಳ ಮುಖ್ಯಾಧಿಕಾರಿಫೋಟೋ-03ಬಿವೈಡಿ5-ಬ್ಯಾಡಗಿ: ಪುರಸಭೆ ಸಭಾಭನದಲ್ಲಿ ಜರುಗಿದ 2025-26 ನೇ ಸಾಲಿನ ಆಯವ್ಯಯದ ಪೂರ್ವಭಾವಿ ಸಭೆಯ ದೃಶ್ಯ.