ಬೇತು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಮಕ್ಕಿ ಶಾಸ್ತಾವು ದೇವಸ್ಥಾನಕ್ಕೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಸೋಮವಾರ ಭೇಟಿ ನೀಡಿ ಕೆರೆಯ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿಗೆ ಸಮೀಪದ ಬೇತು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಮಕ್ಕಿ ಶಾಸ್ತಾವು ದೇವಸ್ಥಾನಕ್ಕೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಸೋಮವಾರ ಭೇಟಿ ನೀಡಿ ಕೆರೆಯ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸ್ಥಳೀಯರ ಕೋರಿಕೆ ಮೇರೆಗೆ ದೇವಸ್ಥಾನದ ಕೆರೆಗೆ ಭೇಟಿ ನೀಡಿ, ಪುರಾತನವಾದ ಕೆರೆಯು ಶಿಥಿಲಾವಸ್ಥೆಗೆ ತಲುಪಿರುವುದನ್ನು ಪರಿಶೀಲಿಸಿದರು. ಭಕ್ತರ ಹಾಗೂ ಸಮಿತಿಯವರ ದುರಸ್ತಿ ಕೋರಿಕೆಯನ್ನು ಮನ್ನಿಸಿದ ಶಾಸಕರು ಅಧಿಕಾರಿಗಳೊಂದಿಗೆ ಮಾತನಾಡಿ ಈ ಕೆರೆಯ ಪುನರ್ ನಿರ್ಮಾಣಕ್ಕೆ ತಗಲುವ ವೆಚ್ಚಗಳ ಬಗ್ಗೆ

ಮಾಹಿತಿ ನೀಡುವಂತೆ ಸೂಚಿಸಿದರು. ಮಾಹಿತಿ ಬಂದೊಡನೆ ಕೆರೆಯ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕರು ತಿಳಿಸಿದರು.

ಈ ಸಂದರ್ಭ ನಾಪೋಕ್ಲು ಪಂಚಾಯಿತಿ ಅಧ್ಯಕ್ಷರಾದ ವನಜಾಕ್ಷಿ ರೇಣುಕೇಶ್, ಸದಸ್ಯರಾದ ಕೆ ಎ ಇಸ್ಮಾಯಿಲ್, ಮಾಚೇಟಿರ ಕುಸು ಕುಶಾಲಪ್ಪ, ಕುಲ್ಲೇಟಿರ ಅರುಣ್ ಬೇಬ, ಹೇಮಾವತಿ, ಸಾಬಾ, ಪಾತಾಂಡ ಕಟ್ಟಿ, ಎಳ್ತಂಡ ಶಾಂತಿ, ದೇವಸ್ಥಾನದ ಅಧ್ಯಕ್ಷ ಕುಟ್ಟಜೆಟ್ಟಿರ ಶಾಮ್, ಪದಾಧಿಕಾರಿಗಳು ಗ್ರಾಮಸ್ಥರಾದ ಕೊಂಡಿರ ಗಣೇಶ್, ಸುಬ್ರಮಣಿ ಜುಬಾ, ರಾಜಪ್ಪ, ಕಾಳೇಯಂಡ ಅಪ್ಪಯ್ಯ (ಅಪ್ಪಿ), ಬೊಳ್ಯಪಂಡ ಜಾನ್, ಚೋಕಿರ ಪೊನ್ನಪ್ಪ, ಸಜಿತ್ , ರೋಷನ್, ರಮೇಶ್, ಅರ್ಚಕ ದಿವಾಕರ ವಿವಿಧ ಸಂಘ ಸಂಸ್ಥೆಗಳ ಹಾಗೂ ಪಕ್ಷಗಳ ಪದಾಧಿಕಾರಿಗಳು ಸದಸ್ಯರು ಕಾರ್ಯಕರ್ತರು ಉಪಸ್ಥಿತರಿದ್ದರು.