ಹೆಬ್ರಿ ಗೋಪಾಲ ಭಂಡಾರಿ ಸೇವಾ ಟ್ರಸ್ಟ್‌ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ

| Published : Oct 06 2025, 01:01 AM IST

ಹೆಬ್ರಿ ಗೋಪಾಲ ಭಂಡಾರಿ ಸೇವಾ ಟ್ರಸ್ಟ್‌ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಹೆಬ್ರಿ ಗೋಪಾಲ ಭಂಡಾರಿ ಸೇವಾ ಟ್ರಸ್ಟ್‌ ಅಧ್ಯಕ್ಷರಾಗಿ ನೀರೆ ಕೃಷ್ಣ ಶೆಟ್ಟಿ ಅವರನ್ನು ಚೈತನ್ಯ ಯುವ ವೃಂದದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಹೆಬ್ರಿ ಗೋಪಾಲ ಭಂಡಾರಿ ಸೇವಾ ಟ್ರಸ್ಟ್‌ ಅಧ್ಯಕ್ಷರಾಗಿ ನೀರೆ ಕೃಷ್ಣ ಶೆಟ್ಟಿ ಅವರನ್ನು ಚೈತನ್ಯ ಯುವ ವೃಂದದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಕಾರ್ಯದರ್ಶಿಯಾಗಿ ದೀಪಾ ಭಂಡಾರಿ ಚಾರ, ಕೋಶಾಧಿಕಾರಿಯಾಗಿ ಎಚ್.‌ ಜನಾರ್ದನ್‌ ಹೆಬ್ರಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಾಜೇಶ ಭಂಡಾರಿ ಹುತ್ತುರ್ಕೆ ಚಾರ, ವಾದಿರಾಜ ಶೆಟ್ಟಿ ಚಾರ, ನವೀನ್‌ ಕೆ. ಅಡ್ಯಂತಾಯ, ಪತ್ರಕರ್ತ ಸುಕುಮಾರ್‌ ಮುನಿಯಾಲ್‌, ಗೋಪಿನಾಥ ಭಟ್‌ ಮುನಿಯಾಲು, ಮೋಹನದಾಸ ನಾಯಕ್‌ ಶಿವಪುರ, ಜಗದೀಶ ಹೆಗ್ಡೆ ಕಡ್ತಲ, ಜಗನ್ನಾಥ ಕುಲಾಲ್‌ ಶಿವಪುರ, ಬೈಕಾಡಿ ಮಂಜುನಾಥ ರಾವ್‌ ಶಿವಪುರ, ಪ್ರಕಾಶ ಪೂಜಾರಿ ಮಾತಿಬೆಟ್ಟು, ಜಾನ್‌ ಟೆಲ್ಲಿಸ್‌ ಅಜೆಕಾರು, ರಾಘವೇಂದ್ರ ನಾಯ್ಕ್‌ ಹಾಗೂ ಅಜೀವ ಸದಸ್ಯರನ್ನು ನೇಮಕ ಮಾಡಲಾಗಿದೆ. ಟ್ರಸ್ಟ್‌ ಪ್ರಥಮ ಸಭೆ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಗೋಪಾಲ ಭಂಡಾರಿ ಮನೆಯಲ್ಲಿ ನಡೆಯಿತು. ಸಮಿತಿ ಪದಾಧಿಕಾರಿಗಳು, ಸದಸ್ಯರು, ಗೋಪಾಲ ಭಂಡಾರಿಯವರ ಪತ್ನಿ ಪ್ರಕಾಶಿನಿ ಭಂಡಾರಿ, ರಾಜೇಶ ಭಂಡಾರಿ, ಶ್ವೇತ ಕುಮಾರ್‌ ಮತ್ತಿತರರಿದ್ದರು.