ಮೂರು ತಲೆಮಾರಿಂದ ಕಾಂಗ್ರೆಸ್‌ಗೆ ದುಡಿದವರ ನಿರ್ಲಕ್ಷ್ಯ: ಕಾಂಗ್ರೆಸ್ ಮುಖಂಡ ಅಂಚಿಪುರದ ದೊಡ್ಡಿ ಶಿವರಾಜು

| Published : Aug 10 2024, 01:36 AM IST

ಮೂರು ತಲೆಮಾರಿಂದ ಕಾಂಗ್ರೆಸ್‌ಗೆ ದುಡಿದವರ ನಿರ್ಲಕ್ಷ್ಯ: ಕಾಂಗ್ರೆಸ್ ಮುಖಂಡ ಅಂಚಿಪುರದ ದೊಡ್ಡಿ ಶಿವರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಮೂರು ತಲೆಮಾರುಗಳಿಂದ ನಮ್ಮ ಕುಟುಂಬ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದರೂ ಸೂಕ್ತ ಸ್ಥಾನಮಾನ ಕೊಡದೆ ನಮ್ಮನ್ನು ಕಡೆಗಣಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಅಂಚಿಪುರದ ದೊಡ್ಡಿ ಶಿವರಾಜು ಆರೋಪಿಸಿದರು. ಕನಕಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಕನಕಪುರ: ಕಳೆದ ಮೂರು ತಲೆಮಾರುಗಳಿಂದ ನಮ್ಮ ಕುಟುಂಬ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದರೂ ಸೂಕ್ತ ಸ್ಥಾನಮಾನ ಕೊಡದೆ ನಮ್ಮನ್ನು ಕಡೆಗಣಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಅಂಚಿಪುರದ ದೊಡ್ಡಿ ಶಿವರಾಜು ಆರೋಪಿಸಿದರು.

ಅಚ್ಚಲು ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ತಂದೆ, ನನ್ನ ಸಹೋದರ ಮತ್ತು ನಾನು ಕಳೆದ ಮೂರು ತಲೆಮಾರುಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇವೆ. ಆದರೂ ನಮ್ಮ ಕುಟುಂಬದಿಂದ ಸದಸ್ಯರಾಗಿ ಆಯ್ಕೆಯಾದವರಿಗೆ ಈವರೆಗೂ ಅಧ್ಯಕ್ಷ ಸ್ಥಾನ ಕೊಡದೆ ಸ್ಥಳೀಯ ಮುಖಂಡರು ಕಡೆಗಣಿಸಿದ್ದಾರೆ ಎಂದು ದೂರಿದರು.

ನಮ್ಮ ಕುಟುಂಬದ ಸದಸ್ಯರು ನಾಲ್ಕು ಬಾರಿ ಗ್ರಾಪಂ ಸದಸ್ಯರಾಗಿ ಆಯ್ಕೆಯಾಗಿ ಉತ್ತಮ ಕೆಲಸ ಮಾಡಿದ್ದು ಕಾಂಗ್ರೆಸ್ ಪಕ್ಷಕ್ಕಾಗಿ ನಿಷ್ಠೆ ಪ್ರಾಮಾಣಿಕತೆಯಿಂದ ದುಡಿದಿದ್ದೇವೆ. ಈ ಬಾರಿ ನನ್ನ ಪತ್ನಿ ಸವಿತಾ ನಾಲ್ಕನೇ ಬಾರಿಗೆ ಅಂಚಿಪುರ ದೊಡ್ಡಿ ಕ್ಷೇತ್ರದಿಂದ ಗ್ರಾಪಂ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನ ನೀಡುವಂತೆ ಮಾಜಿ ಸಂಸದರು ಮತ್ತು ಸ್ಥಳೀಯ ಮುಖಂಡರಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದೆ. ಆದರೆ ನಮ್ಮನ್ನು ಕಡೆಗಣಿಸಿ ನಿನ್ನೆ ಮೊನ್ನೆ ಪಕ್ಷಕ್ಕೆ ಬಂದವರಿಗೆ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷಕ್ಕಾಗಿ ಹಲವಾರು ವರ್ಷಗಳಿಂದ ದುಡಿದಿದ್ದರೂ ನಮ್ಮನ್ನು ಗುರುತಿಸದೆ ಹೊಸಬರಿಗೆ ಮಣೆ ಹಾಕಿರುವುದು ನಮಗೆ ಬೇಸರ ತರಿಸಿದೆ. ಇನ್ನು ರಾಜಕೀಯದಲ್ಲಿದ್ದು ಪ್ರಯೋಜನವಿಲ್ಲ. ಹಾಗಾಗಿ ನನ್ನ ಪತ್ನಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದರು. ಗ್ರಾಪಂ ಸದಸ್ಯ ಸವಿತಾ ಹಾಗೂ ಅವರ ಬೆಂಬಲಿಗರು ಹಾಜರಿದ್ದರು.