ಮೂಡಿಗೆರೆಮೈಸೂರು ಮಹಾರಾಜರ ಆಡಳಿತ ಕಾಲದಲ್ಲಿ ಪ್ರಾರಂಭವಾದ ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಕೇಂದ್ರಕ್ಕೆ 100 ವರ್ಷದ ಸಂಭ್ರಮಾಚರಣೆಯಲ್ಲಿ ಕಾರ್ಮಿಕರನ್ನು ಕಡೆಗಣಿಸಿರುವುದು ಖಂಡನೀಯ ಎಂದು ಟಿಯುಸಿಐ ಜಿಲ್ಲಾಧ್ಯಕ್ಷ ಕೆ.ಕೆ.ಕೃಷ್ಣಪ್ಪ ಹೇಳಿದ್ದಾರೆ.

ಸಮಾವೇಶದಲ್ಲಿ ಗಂಭೀರ ಚರ್ಚೆಗೆ ಆಗ್ರಹ

ಕನ್ನಡಪ್ರಭ ವಾರ್ತೆ, ಮೂಡಿಗೆರೆ

ಮೈಸೂರು ಮಹಾರಾಜರ ಆಡಳಿತ ಕಾಲದಲ್ಲಿ ಪ್ರಾರಂಭವಾದ ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಕೇಂದ್ರಕ್ಕೆ 100 ವರ್ಷದ ಸಂಭ್ರಮಾಚರಣೆಯಲ್ಲಿ ಕಾರ್ಮಿಕರನ್ನು ಕಡೆಗಣಿಸಿರುವುದು ಖಂಡನೀಯ ಎಂದು ಟಿಯುಸಿಐ ಜಿಲ್ಲಾಧ್ಯಕ್ಷ ಕೆ.ಕೆ.ಕೃಷ್ಣಪ್ಪ ಹೇಳಿದ್ದಾರೆ.

ಕಾಫಿ, ಯಂತ್ರದ ಮೂಲಕ ಉತ್ಪಾದಿಸುವ ವಸ್ತುವಲ್ಲ. ಕಾರ್ಮಿಕರ ಶ್ರಮದಿಂದ ಬೆಳೆದುಶ್ರೀಮಂತವಾಗಿದೆ. ರಾಜ್ಯದಲ್ಲಿ 2.46 ಲಕ್ಷ ಹೆಕ್ಟರ್‌ನಲ್ಲಿ ಸುಮಾರು 5.70 ಲಕ್ಷಕ್ಕೂ ಅಧಿಕ ಕಾರ್ಮಿಕರ ಶ್ರಮದಿಂದ ಸುಮಾರು 3 ಲಕ್ಷಕ್ಕೂ ಅಧಿಕ ಮೆಟ್ರಿಕ್ ಟನ್ ಕಾಫಿ ಉತ್ಪತ್ತಿಯಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಿಂದೆ ಬ್ರಿಟೀಷ್ ಆಡಳಿತದಲ್ಲಿ ಮಂಗಳೂರು ಮತ್ತು ಮದ್ರಾಸ್ ಮೂಲದ ಕಾರ್ಮಿಕರನ್ನು ವಲಸೆ ತಂದು ಕಾಫಿ ತೋಟ ಗಳನ್ನು ಅಲ್ಪಸ್ವಲ್ಪ ಬೆಳೆಯಲಾಯಿತು. ಆದರೆ, 1991 ರ ಹೊಸ ಆರ್ಥಿಕ ನೀತಿಯಿಂದ ಕಾಫಿ ಪರಿಮಳ ವಿದೇಶಿ ಮಾರು ಕಟ್ಟೆಯಲ್ಲಿ ಬಹು ಲಾಭದಾಯಕವಾಗಿ ಹರಡಿತು. ಪ್ರಪಂಚದಲ್ಲಿ ಭಾರತ ಕಾಫಿ ಉತ್ಪಾದನೆಯಲ್ಲಿ ಏಳನೇ ಸ್ಥಾನ ಪಡೆಯಲು ಕಾರ್ಮಿಕರು ಕಾರಣರಾಗಿದ್ದಾರೆಂದು ಹೇಳಿದ್ದಾರೆ. ಕಾರ್ಮಿಕರ ಸಂವಿಧಾನವೆಂದು ಪರಿಗಣಿಸುವ 1951 ರ ಪ್ಲಾಂಟೇಶನ್ ಕಾಯ್ದೆ ಮತ್ತು ನಿಯಮ 1956 ಸಂಪೂರ್ಣವಾಗಿ ಅನುಷ್ಟಾನಗೊಳ್ಳುತ್ತಿಲ್ಲ. ಕಡ್ಡಾಯವಾಗಿ ನೋಂದಣಿ ಪರವಾನಿಗೆ ಪಡೆಯಬೇಕೆಂಬ ನಿಯಮ ಮಾಲೀಕರು ಗಾಳಿಗೆ ತೂರಿ ದ್ದಾರೆ. ಇದರಿಂದ ಕಾರ್ಮಿಕರು ಮೂಲಭೂತ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಇದೀಗ ಕಾಫಿ ಮಂಡಳಿಯಿಂದ ಬಾಳೆ ಹೊನ್ನೂರಿನಲ್ಲಿ 3 ದಿನ ಸಮಾವೇಶರಲ್ಲಿ ಕಾರ್ಮಿಕ ಇಲಾಖೆ, ಸಂಬಂಧಪಟ್ಟ ಕೇಂದ್ರ ಮತ್ತು ರಾಜ್ಯದ ಮಂತ್ರಿಗಳು, ಬಹುರಾಷ್ಟ್ರ ಕಂಪನಿಗಳು, ಸೆಲೆಬ್ರೆಟಿಗಳು, ಕಾರ್ಪೊರೇಟ್‌ಗಳು ಹಾಗೂ ಮಾಲೀಕ ವರ್ಗ ಭಾಗವಹಿಸುತ್ತಿದ್ದು, ಕಾರ್ಮಿಕರನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಈ ಬಗ್ಗೆ ಸಮಾವೇಶದಲ್ಲಿ ಗಂಭೀರ ಚರ್ಚೆಯಾಗಬೇಕಿದೆ ಎಂದು ಆಗ್ರಹಿಸಿದ್ದಾರೆ.