ಇಲ್ಲಿಗೆ ಸಮೀಪದ ನೆಲಜಿ ಗ್ರಾಮದಲ್ಲಿ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಕ್ರಮ ಜರಗಿತು. ಬಲ್ಲಮಾವಟ್ಟಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಬೆಳೆಗಾರರು ಕಾಡಾನೆಗಳ ಉಪಟಳದಿಂದ ತತ್ತರಿಸಿದ್ದು ಕಾಡಾನೆಗಳನ್ನು ಕಾಡಿಗಟ್ಟುವಂತೆ ಅರಣ್ಯ ಇಲಾಖೆಯ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ಕಾಡಾನೆಗಳನ್ನು ಕಾಡಿಗೆ ಕಾಡಿಗಟ್ಟಲಾಯಿತು.
ನಾಪೋಕ್ಲು : ಇಲ್ಲಿಗೆ ಸಮೀಪದ ನೆಲಜಿ ಗ್ರಾಮದಲ್ಲಿ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಕ್ರಮ ಜರಗಿತು. ಬಲ್ಲಮಾವಟ್ಟಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಬೆಳೆಗಾರರು ಕಾಡಾನೆಗಳ ಉಪಟಳದಿಂದ ತತ್ತರಿಸಿದ್ದು ಕಾಡಾನೆಗಳನ್ನು ಕಾಡಿಗಟ್ಟುವಂತೆ ಅರಣ್ಯ ಇಲಾಖೆಯ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ಕಾಡಾನೆಗಳನ್ನು ಕಾಡಿಗೆ ಕಾಡಿಗಟ್ಟಲಾಯಿತು.ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಒಟ್ಟು ಸೇರಿ ಪಟಾಕಿ ಸಿಡಿಸಿ ಆನೆಗಳನ್ನು ಓಡಿಸಿದರು. ಗ್ರಾಮದ ಕಾಫಿ ಬೆಳಗಾರ ಬದಂಚೆಟ್ಟಿರ ದೇವಿ ದೇವಯ್ಯ ಅವರ ಮನೆಯ ಸಮೀಪ, ಕಾಫಿ ತೋಟ ಸೇರಿದಂತೆ ಹಲವರ ತೋಟಗಳ ಗಳಲ್ಲಿದ್ದ ಕಾಡಾನೆಗಳನ್ನು ಯಶಸ್ವಿಯಾಗಿ ಕಾಡಿಗಟ್ಟಲಾಯಿತು. ಆನೆಗಳನ್ನು ಒಮ್ಮೆ ಕಾಡಿಗಟ್ಟಿದರೆ ಮತ್ತೆ ಕೆಲವೇ ದಿನಗಳಲ್ಲಿ ಕಾಡಾನೆಗಳು ವಾಪಸ್ ಆಗುತ್ತವೆ. ಕಾಫಿ, ಬಾಳೆ, ತೆಂಗು, ಅಡಿಕೆ ಸೇರಿದಂತೆ ತೋಟಗಾರಿಕಾ ಬೆಳೆಗಳನ್ನು ದ್ವಂಸಗೊಳಿಸುತ್ತಿವೆ ಕೃಷಿಕರಿಗೆ ನಿರಂತರ ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ಅವಲತ್ತುಕೊಂಡರು.