ಇಂದು ಮಧ್ಯರಾತ್ರಿಯಿಂದಲೇ ನೆಲಮಂಗಲ-ಹಾಸನ ಟೋಲ್ ದರ ಹೆಚ್ಚಳ

| Published : Sep 01 2025, 01:03 AM IST

ಇಂದು ಮಧ್ಯರಾತ್ರಿಯಿಂದಲೇ ನೆಲಮಂಗಲ-ಹಾಸನ ಟೋಲ್ ದರ ಹೆಚ್ಚಳ
Share this Article
  • FB
  • TW
  • Linkdin
  • Email

ಸಾರಾಂಶ

ದಾಬಸ್‍ಪೇಟೆ: ರಾಷ್ಟ್ರೀಯ ಹೆದ್ದಾರಿಯ ವಾಹನ ಸವಾರರಿಗೆ ಮತ್ತೊಂದು ದರ ಏರಿಕೆ ಶಾಕ್ ಎದುರಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲ-ಹಾಸನ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಸೆಪ್ಟೆಂಬರ್ 1ರಿಂದ ಟೋಲ್ ದರ ಏರಿಕೆ ಮಾಡಿ, ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶಾಕ್ ನೀಡಿದೆ.

ದಾಬಸ್‍ಪೇಟೆ: ರಾಷ್ಟ್ರೀಯ ಹೆದ್ದಾರಿಯ ವಾಹನ ಸವಾರರಿಗೆ ಮತ್ತೊಂದು ದರ ಏರಿಕೆ ಶಾಕ್ ಎದುರಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲ-ಹಾಸನ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಸೆಪ್ಟೆಂಬರ್ 1ರಿಂದ ಟೋಲ್ ದರ ಏರಿಕೆ ಮಾಡಿ, ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶಾಕ್ ನೀಡಿದೆ.

ಇಂದು ಮಧ್ಯರಾತ್ರಿಯಿಂದ 5 ರುಪಾಯಿ ದರ ಏರಿಕೆಯಾಗಲಿದೆ. ನೆಲಮಂಗಲ ದೇವಿಹಳ್ಳಿ ಎಕ್ಸ್‌ಪ್ರೆಸ್ ಪ್ರೈವೇಟ್ ಲಿಮಿಟೆಡ್ ಟೋಲ್‍ಗಳಲ್ಲಿ ದರ ಏರಿಕೆಯಾಗಲಿದ್ದು, ನೆಲಮಂಗಲ-ಹಾಸನ ರಾಷ್ಟ್ರೀಯ ಹೆದ್ದಾರಿಯ-75ರ ಟೋಲ್ ಮೂಲಕ ಸಂಚರಿಸುವ ವಾಹನ ಸವಾರರಿಗೆ ಬರೆ ಬಿದ್ದಿದೆ. ದೊಡ್ಡಕರೇನಹಳ್ಳಿ ಟೋಲ್ ಹಾಗೂ ಕಾರಬೈಲು ಟೋಲ್ ಪ್ಲಾಜಾಗಳಲ್ಲಿಯೂ ದರ ಏರಿಕೆಯಾಗಿದೆ.

ಯಾವ ವಾಹನಗಳಿಗೆ ಎಷ್ಟು ಏರಿಕೆ:

2023ರ ದರ ಏರಿಕೆ ಸಂದರ್ಭದಲ್ಲಿ ಕಾರುಗಳಿಗೆ ಒಂದು ದಿಕ್ಕಿನ ಪ್ರಯಾಣಕ್ಕೆ ಸುಮಾರು 10-20 ರುಪಾಯಿಗಳ ಏರಿಕೆಯಾಗಿತ್ತು. ಭಾರೀ ವಾಹನಗಳಿಗೆ 50-100 ರುಪಾಯಿಗಳವರೆಗೆ ಏರಿಕೆಯಾಗಿತ್ತು. ಇದೀಗ ಏಕಮುಖ ಸಂಚಾರಕ್ಕೆ 5 ರು., ದ್ವಿಮುಖ ಸಂಚಾರಕ್ಕೆ 10 ರು. ದರ ಏರಿಕೆ ಮಾಡಲಾಗಿದೆ. ಕಾರು, ಜೀಪು, ವ್ಯಾನ್ ಹಾಗೂ ಲಘು ಮೋಟಾರ್ ವಾಹನಗಳಿಗೆ ಮೊದಲಿದ್ದ ದರವೇ ಇರಲಿದೆ. ಫಾಸ್ಟ್‌ ಟ್ಯಾಗ್ ಇದ್ದರೆ ಏಕಮುಖ ಸಂಚಾರಕ್ಕೆ ಈಗಿನ ದರ 55 ರು., 60 ದಿನದ ಸಂಚಾರಕ್ಕೆ 85 ರು., ಫಾಸ್ಟ್‌ ಟ್ಯಾಗ್ ರಹಿತ 110 ರು. ಇತ್ತು. ಈಗಿನ ದರ 120 ರು. ಆಗಿದ್ದು ದರ ಏರಿಕೆ ಮಾಡಲಾಗಿದೆ.

ಏರಿಕೆಗೆ ಕಾರಣವೇನು:

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಕಾರ, ಟೋಲ್ ಶುಲ್ಕದ ಏರಿಕೆಯು ವಾರ್ಷಿಕ ದರ ಪರಿಷ್ಕರಣೆಯ ಭಾಗವಾಗಿದ್ದು, ಹಣದುಬ್ಬರ ಮತ್ತು ರಸ್ತೆ ನಿರ್ವಹಣೆಯ ವೆಚ್ಚದ ಏರಿಕೆಗೆ ಅನುಗುಣವಾಗಿ ಮಾಡಲಾಗುತ್ತದೆ. ಈ ಮಾರ್ಗದ ನಿರ್ವಹಣೆ ಮತ್ತು ದುರಸ್ತಿಗಾಗಿ ಹೆಚ್ಚಿನ ಹಣಕಾಸು ಅಗತ್ಯವಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

ವಾಹನ ಸವಾರರ ಆಕ್ರೋಶ:

ಪ್ರತಿನಿತ್ಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಹೋಗುತ್ತಿದೆ. ಅದಲ್ಲದೆ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯಿಂದ ಈಗಾಗಲೇ ಜೀವನ ನಡೆಸುವುದಕ್ಕೆ ದುಸ್ತರವಾಗಿದೆ ಇದೀಗ ಟೋಲ್ ದರ ಏರಿಕೆಯಿಂದ ನಮ್ಮ ಜೇಬಿಗೆ ಕತ್ತರಿ ಬಿದ್ದಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ.

ಪೋಟೋ 7 :

ನೆಲಮಂಗಲ-ಹಾಸನ ರಾಷ್ಟ್ರೀಯ ಹೆದ್ದಾರಿ-75ರ ದೇವಿಹಳ್ಳಿ ಟೋಲ್.