ಕೌಶಲ್ಯಾಧಾರಿತ ಕಲಿಕೆಗೆ ಎನ್‌ಇಪಿ ಸಹಕಾರಿ: ಪ್ರೊ. ಬಟ್ಟು ಸತ್ಯನಾರಾಯಣ

| Published : Sep 16 2025, 01:00 AM IST

ಕೌಶಲ್ಯಾಧಾರಿತ ಕಲಿಕೆಗೆ ಎನ್‌ಇಪಿ ಸಹಕಾರಿ: ಪ್ರೊ. ಬಟ್ಟು ಸತ್ಯನಾರಾಯಣ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್‌ಕೆಜಿಯಿಂದ ಹಿಡಿದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೂ ಎನ್‌ಇಪಿ ಗುಣಮಟ್ಟದ ಶಿಕ್ಷಣ ನೀಡುತ್ತದೆ. ಪ್ರಸ್ತುತ ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಕೌಶಲ್ಯಾಧರಿತ ಶಿಕ್ಷಣ ನೀಡಬೇಕಿದೆ.

ಹುಬ್ಬಳ್ಳಿ: ರಾಷ್ಟ್ರದ ಅಭಿವೃದ್ಧಿ ದೃಷ್ಟಿಯಿಂದ ಸಿದ್ಧಪಡಿಸುವ ಎನ್‌ಇಪಿ ವಿದ್ಯಾರ್ಥಿಗಳ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಅಲ್ಲದೇ, ಕೌಶಲ್ಯಾಧಾರಿತ ಕಲಿಕೆಗೆ ಇದು ಸಹಾಯಕಾರಿಯಾಗಿದೆ ಎಂದು ಕಲಬುರಗಿ ಕರ್ನಾಟಕ ಸೆಂಟ್ರಲ್ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.ಇಲ್ಲಿಯ ಬಿವಿಬಿ ಬಯೋಟೆಕ್ ಹಾಲ್‌ನಲ್ಲಿ ಕೆಆರ್‌ಎಂಎಸ್‌ಎಸ್ ವತಿಯಿಂದ ಭಾನುವಾರ ನಡೆದ ಪ್ರೇರಣಾ ದಿವಸ-೨೦೨೫ ಹಾಗೂ ಎನ್‌ಇಪಿ ೫ ವರ್ಷದ ಪಯಣ ಕುರಿತಾದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಎಲ್‌ಕೆಜಿಯಿಂದ ಹಿಡಿದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೂ ಎನ್‌ಇಪಿ ಗುಣಮಟ್ಟದ ಶಿಕ್ಷಣ ನೀಡುತ್ತದೆ. ಪ್ರಸ್ತುತ ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಕೌಶಲ್ಯಾಧರಿತ ಶಿಕ್ಷಣ ನೀಡಬೇಕಿದೆ. ಆ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆ ಸಾಧ್ಯವಾಗಲಿದೆ. ನಿರುದ್ಯೋಗ ಹೋಗಲಾಡಿಸುವುದು ಕೇವಲ ಸರಕಾರದ ಜವಾಬ್ದಾಾರಿಯಲ್ಲ. ಅದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಎಂದರು.ಎನ್‌ಇಪಿ ಅಉಳಿದೆಲ್ಲ ರಾಜ್ಯಗಳು ಅಳವಡಿಸಿಕೊಂಡಿವೆ. ಆದರೆ, ಕರ್ನಾಟಕ ಮಾತ್ರ ಈ ವಿಚಾರದಲ್ಲಿ ಒಂದೆಡೆ ಸಾಗುತ್ತಿದೆ. ಉಪನ್ಯಾಸಕರು ವಿಕಸಿತ ಭಾರತವಾಗುವಲ್ಲಿ ಅವರ ಪಾತ್ರ ಏನೆಂಬುದನ್ನು ಅರಿತು ಸಾಗಬೇಕಿದೆ. ಅಲ್ಲದೇ, ಅವರಿಗೆ ಅಗತ್ಯ ತರಬೇತಿಯ ಅವಶ್ಯಕತೆಯೂ ಇದೆ ಎಂದರು.ನ್ಯಾಕ್ ನಿರ್ದೇಶಕ ಪ್ರೊ. ಗಣೇಶ ಕನ್ನಬೀರನ್ ಮಾತನಾಡಿ, ಭಾರತ ೨೦೪೭ಕ್ಕೂ ಪೂರ್ವದಲ್ಲಿ ಪ್ರಗತಿ ಪರ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಆಗ ಭಾರತದ ಗುರಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವುದು. ಹೀಗಾಗಿ, ಶಿಕ್ಷಕರು ಇಂದಿನ ವಿದ್ಯಾರ್ಥಿಗಳನ್ನು ಉತ್ತಮವಾಗಿ ನಿಭಾಯಿಸುವುದು ತುಂಬಾ ಕಷ್ಟ ಮತ್ತು ಶಿಕ್ಷಕರು ಬಹಳಷ್ಟು ಹೊಸ ಹೊಸ ತಂತ್ರಗಳನ್ನು ಕಲಿತು ಅವರಿಗೆ ಕಲಿಸಬೇಕು. ಆ ಮೂಲಕ ವೃತ್ತಿ ಬೆಳವಣಿಗೆ ಜತೆಗೆ ಉತ್ತಮ ಮನ್ನಣೆ ಹಾಗೂ ಬಹುಮಾನ ತಮ್ಮದಾಗಿಸಿಕೊಳ್ಳಬೇಕು ಎಂದರು.ಎಚ್.ಎನ್. ನಂದಕುಮಾರ ಮಾತನಾಡಿ, ನಮ್ಮಲ್ಲಿ ಮಾನವೀಯತೆ ಇರುವವರೆಗೂ ಗುರು ಶಿಷ್ಯರ ಸಂಬಂಧ ಉತ್ತಮವಾಗಿರುತ್ತದೆ. ಗುರುಗಳನ್ನು ವಿದ್ಯಾರ್ಥಿಗಳು ರೋಲ್ ಮಾಡೆಲ್ ಮಾಡಿಕೊಳ್ಳುವಂತೆ ಉಪನ್ಯಾಸಕರು ತಮ್ಮ ನಡಾವಳಿಗಳನ್ನು ಬದಲಿಸಿಕೊಳ್ಳಬೇಕು. ಅಂದಾಗ ಮಾತ್ರ ಆ ಎಳೆಯ ಮನಸ್ಸುಗಳಿಗೆ ರೂಲ್ ಮಾಡಲ್ ಆಗಲು ಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ಹಾವೇರಿ ವಿಶ್ವವಿದ್ಯಾಾಲಯದ ಕುಲಪತಿ ಡಾ. ಸುರೇಶ್ ಜಂಗಮಶೆಟ್ಟರ್, ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ, ಪ್ರೊ. ಕರಿಮುನ್ನಿಸಾ ಸೈಯದ್, ಕೆಆರ್‌ಎಂಎಸ್‌ಎಸ್ ಸಂಸ್ಥಾಪಕ ಅಧ್ಯಕ್ಷ ಡಾ. ರಘು ಅಕಮಂಚಿ, ಅಧ್ಯಕ್ಷ ಡಾ. ಜಿ.ಕೆ. ಬಡಿಗೇರ, ಕೆಆರ್‌ಎಂಎಸ್‌ಎಸ್ ಮಹಿಳಾ ಪ್ರಮುಖರಾದ ಡಾ. ಸಂಗೀತ ಕಟ್ಟಿಮನಿ, ಕೋಶಾಧ್ಯಕ್ಷ ಡಾ. ಲಿಂಗರಾಜ ಹೊರಕೇರಿ, ಕನಕದಾಸ ಶಿಕ್ಷಣ ಸಮಿತಿ ಅಧ್ಯಕ್ಷ ರವೀಂದ್ರನಾಥ ದಂಡಿನ, ಕವಿವಿ ಮಾಜಿ ಕುಲಪತಿ ಪ್ರಮೋದ ಗಾಯಿ, ಡಾ. ವಿಶ್ವನಾಥ ಕೋರಾಡಿ, ಸಂದೀಪ ಬೂದಿಹಾಳ, ಶೋಭಾ ಉಜ್ಜನಶೆಟ್ಟರ, ಪ್ರಸನ್ನ ಫಂಡ್ರಿ ಸೇರಿದಂತೆ ಇತರರು ಇದ್ದರು.ಕೆಆರ್‌ಎಂಎಸ್‌ಎಸ್ ಕೊಡ ಮಾಡುವ ಅಧ್ಯಾಪಕ ಭೂಷಣ ಪ್ರಶಸ್ತಿ-೨೦೨೫ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೀವಮಾನ ಸಾಧನೆ ಪ್ರಶಸ್ತಿಯನ್ನು ಡಾ. ಬಿ.ಎಫ್. ದಂಡಿನ ಹಾಗೂ ಡಾ. ಅಶೋಕ ಶೆಟ್ಟರ್ ಅವರಿಗೆ ನೀಡಿ ಗೌರವಿಸಲಾಯಿತು. ಡಾ. ಎಂ.ಬಿ. ಬಾಗಾಡಿ ಅವರಿಗೆ ಉತ್ತಮ ಅಡ್ಮಿನಿಸ್ಟ್ರೇಟರ್, ಡಾ. ಶಾರದಾ ಭಟ್, ವನಮಾಲ ಖಾನಗೌಡ್ರ ಅವರಿಗೆ ಉತ್ತಮ ಶಿಕ್ಷಕಿ, ಡಾ. ರಾಜೇಶ ಕಲ್ಕಂಬರ್ ಅವರಿಗೆ ಉತ್ತಮ ಸಂಶೋಧಕ, ಪ್ರೊ. ಜಿ.ಡಿ. ಭಟ್ ಕ್ರೀಡೆ, ದೈಹಿಕ ನಿರ್ದೇಶಕ ಮನೋಜ ಕೂಪಾರ್ಡೆ ಅವರಿಗೆ ಉತ್ತಮ ಗ್ರಂಥಪಾಲಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.