ತಾಲೂಕಿನ ನೇರಲಿಗಿ ಗ್ರಾಮದ ಸ.ನಂ.೧೪೯ರಲ್ಲಿ ವಾಸವಿರುವ ಕುಟುಂಬಗಳಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ನಿವಾಸಿಗಳು ತಹಸೀಲ್ದಾರ್ ಕಚೇರಿಗೆ ದಾಖಲಾತಿ ಒದಗಿಸಿ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಸೊರಬ
ತಾಲೂಕಿನ ನೇರಲಿಗಿ ಗ್ರಾಮದ ಸ.ನಂ.೧೪೯ರಲ್ಲಿ ವಾಸವಿರುವ ಕುಟುಂಬಗಳಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ನಿವಾಸಿಗಳು ತಹಸೀಲ್ದಾರ್ ಕಚೇರಿಗೆ ದಾಖಲಾತಿ ಒದಗಿಸಿ ಮನವಿ ಸಲ್ಲಿಸಿದರು.ಕಳೆದ ೭೦ ವರ್ಷಗಳಿಂದ ಗ್ರಾಮದ ಸರ್ವೆ ನಂ.೧೪೯ರಲ್ಲಿ ೧೩ ಕುಟುಂಬಗಳು ಇದೇ ಜಾಗದಲ್ಲಿ ವಾಸವಿದ್ದು, ಆನವಟ್ಟಿ ಪ.ಪಂ. ವ್ಯಾಪ್ತಿಯಲ್ಲಿ ವಿದ್ಯುತ್, ಕುಡಿಯುವ ನೀರು ಹಾಗೂ ಇತರೆ ಮೂಲಭೂತ ಸೌಕರ್ಯವನ್ನು ಒದಗಿಸಲಾಗಿದೆ. ರೈತರು, ಕಾರ್ಮಿಕರು ಹಾಗೂ ಕೂಲಿಗಾರರು ಇಲ್ಲಿ ವಾಸವಿದ್ದು, ಈಗಾಗಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಕೆಲವು ದಿನಗಳ ಹಿಂದೆ ಸಚಿವ ಎಸ್. ಮಧು ಬಂಗಾರಪ್ಪ ಅವರಿಗೆ ಹಕ್ಕುಪತ್ರ ನೀಡುವಂಗೆ ಮನವಿ ಸಲ್ಲಿಸಿದ್ದು, ಹಕ್ಕುಪತ್ರ ನೀಡುವ ಭರವಸೆ ನೀಡಿದ್ದರು. ಇಲ್ಲಿನ ನಿವಾಸಿಗಳು ಮನೆ ಹಾಗೂ ನೀರಿನ ಕಂದಾಯದ ಪಾವತಿಸುತ್ತಿದ್ದು, ಪರಿಶೀಲನೆ ನಡೆಸಿ ನಿವಾಸಿಗಳಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿದರು.ಮನವಿ ಸ್ವೀಕರಿಸಿದ ತಹಸೀಲ್ದಾರ್ ಕೆ. ಪುರಂದರ ಮಾತನಾಡಿ, ನೇರಲಗಿ ಗ್ರಾಮದ ೧೩ ಕುಟುಂಬಗಳು ತಮ್ಮ ದಾಖಲೆ ನೀಡಿದ್ದು, ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ದಾಖಲೆ ಪರಿಸೀಲಿಸಿ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಂಜೀವ್ ನೇರಲಿಗಿ, ಚಂದ್ರಪ್ಪ ಕುಂಬ್ರೇರ್, ನಿಂಗಪ್ಪ ಕುಂಬ್ರೇರ್, ಮಾರ್ತಾಂಡಪ್ಪ, ಬಸವರಾಜ ಅತ್ತಿಕಟ್ಟಿ, ಮಾಲತೇಶ್ ತಿಪ್ಪಣ್ಣ, ರಾಜಣ್ಣ ಸಮನವಳ್ಳಿ, ಜಾಕೀರ್, ರಾಜಪ್ಪ, ಪಕ್ಕೀರಪ್ಪ, ಮಲ್ಲಿಕಾರ್ಜುನ, ಚೇತನಾ, ರೇಣುಕಾ, ಸಾವಿತ್ರಮ್ಮ, ರಫೀಕ್ ಇತರರು ಇದ್ದರು.