ಬಿಸಲವಾಡಿ ಪಿಎಸಿಸಿ ಬ್ಯಾಂಕ್‌ಗೆ ₹ ೩.೬೩ ಲಕ್ಷ ನಿವ್ವಳ ಲಾಭ

| Published : Sep 22 2025, 01:00 AM IST

ಸಾರಾಂಶ

ತಾಲೂಕಿನ ಬಿಸಲವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಇದುವರಿಗೆ ೩.೧೯ ಕೋಟಿ ರು. ಗಳ ಸಾಲವನ್ನು ರೈತರಿಗೆ ನೀಡುವ ಮೂಲಕ ೩.೬೩ ಲಕ್ಷ ರು. ಗಳ ನಿವ್ವಳ ಲಾಭವನ್ನು ಪಡೆದುಕೊಂಡಿದೆ ಎಂದು ಸಂಘದ ಅಧ್ಯಕ್ಷ ಎನ್. ಶಿವಸ್ವಾಮಿ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ತಾಲೂಕಿನ ಬಿಸಲವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಇದುವರಿಗೆ ೩.೧೯ ಕೋಟಿ ರು. ಗಳ ಸಾಲವನ್ನು ರೈತರಿಗೆ ನೀಡುವ ಮೂಲಕ ೩.೬೩ ಲಕ್ಷ ರು. ಗಳ ನಿವ್ವಳ ಲಾಭವನ್ನು ಪಡೆದುಕೊಂಡಿದೆ ಎಂದು ಸಂಘದ ಅಧ್ಯಕ್ಷ ಎನ್. ಶಿವಸ್ವಾಮಿ ತಿಳಿಸಿದರು.

ಗ್ರಾಮದ ಶ್ರೀ ಲಕ್ಷ್ಮಿದೇವಿ ದೇವಸ್ಥಾನದ ಅವರಣದಲ್ಲಿ ನಡೆದ ಸಂಘದ ೨೦೨೪-೨೫ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸಕ್ತ ೨೨೪ ಮಂದಿ ರೈತರಿಗೆ ೩.೧೯ ಕೋಟಿ ರು. ಸಾಲ ನೀಡಲಾಗಿದ್ದು, ಸಂಘದಿಂದ ಪಡಿತರ ದಾರರಿಗೆ ಸಮರ್ಪಕ ಪಡಿತರ ವಿತರಣೆ ಮಾಡಿ, ಉತ್ತಮ ಸೇವೆಯನ್ನು ಸಲ್ಲಿಸಲಾಗುತ್ತಿದೆ ಎಂದರು.

ಸಂಘದಿಂದ ಈಗಾಗಲೇ ರೈತರಿಗೆ ಕೃಷಿ ಸಾಲದ ಜೊತೆಗೆ ವಾಣಿಜ್ಯ ಸಾಲ, ಮಹಿಳಾ ಸ್ವಸಹಾಯ ಸಂಘಗಳಿಗೆ ಸ್ವಂತ ಉದ್ಯಮವನ್ನು ಹೊಂದಿ ಅರ್ಥಿಕ ಅಭಿವೃದ್ದಿ ಹೊಂದಲು ಸಾಲ, ಕೃಷಿಯಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಆಳವಡಿಸಿಕೊಂಡು ವೈಜ್ಞಾನಿಕವಾಗಿ ಬೇಸಾಯ ಮಾಡಲು ಟ್ರಾಕ್ಟರ್ ಸಾಲವನ್ನು ಸಹ ನೀಡಲಾಗುತ್ತಿದೆ ಎಂದರು.

ಸಂಘದ ಸದಸ್ಯರು ಸಹ ಸುಸ್ತಿ ಸಾಲಗಳನ್ನು ಮರುಪಾವತಿ ಮಾಡಿ, ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನವೀಕರಣ ಮಾಡಿಕೊಳ್ಳಿ. ಇದರಿಂದ ರೈತರ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಅಲ್ಲದೇ ಸರ್ಕಾರ ಸವಲತ್ತುಗಳನ್ನು ಪಡೆದುಕೊಳ್ಳಲು ಸಂಘವನ್ನು ಪಡೆದುಕೊಳ್ಳಬೇಕು ಎಂದರು.

ಸಂಘದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಅಶೋಕ್ ವಾರ್ಷಿಕ ವರದಿಯನ್ನು ಮಂಡಿಸಿ, ಅನುಮೋದನೆ ಪಡೆದುಕೊಂಡರು.

ಸಭೆಯಲ್ಲಿ ಜಿ.ಪಂ.ಮಾಜಿ ಸದಸ್ಯ ಡಾ.ಬಿ.ಪಿ. ನಟರಾಜಮೂರ್ತಿ, ಸಂಘದ ಉಪಾಧ್ಯಕ್ಷೆ ನೀಲಮ್ಮ, ನಿರ್ದೇಶಕರಾದ ಮಂಜುನಾಥ್, ಪದ್ಮ, ಸಿ. ಬಸವಣ್ಣ, ಉಮೇಶ್, ನಾಗರಾಜು, ಬಿ. ನಂಜಪ್ಪ, ಎಸ್. ಸಿದ್ದಶೆಟ್ಟಿ, ಶಿವಕುಮಾರ್, ಕುಮಾರ್, ಬಸವನಾಯಕ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಬಿಸಲವಾಡಿ ರವಿ, ಹಾಲಿ ಸದಸ್ಯರಾದ ಸಿ. ಮಹದೇವಪ್ಪ, ಶಿವರುದ್ರಪ್ಪ, ಬಿ. ಶಾಂತಮಲ್ಲಪ್ಪ, ಎಸ್. ಚನ್ನಬಸಪ್ಪ, ನಾರಾಯಣನಾಯಕ, ನಾಗರಾಜು, ಶಿವಾನಂದ, ಬಿ.ಎಂ. ಬಸವರಾಜು, ಜಿ. ಮಹದೇವಪ್ಪ, ಶಿವಮಲ್ಲಪ್ಪ, ಸಂಘದ ಮಾಜಿ ಅಧ್ಯಕ್ಷರಾದ ಸಿದ್ದನಾಯಕ, ಎಸ್. ಶಿವಕುಮಾರ್, ಮಹಾದೇವಯ್ಯ, ಎಸ್. ಶಾಂತಪ್ಪ, ಎಸ್. ಉಮೇಶ್, ಸಿಇಓ ಆಶೋಕ್, ಗುಮಾಸ್ತ ಎಂ. ಪ್ರಸನ್ನಕುಮಾರ್, ನಾಗರಾಜು ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.