ಸ್ವಾತಂತ್ರ್ಯ ಪಡೆಯಲು ಸಶಸ್ತ್ರ ಹೋರಾಟ ನಂಬಿದ್ದ ನೇತಾಜಿ

| Published : Jan 25 2025, 01:02 AM IST

ಸಾರಾಂಶ

ಸ್ವಾತಂತ್ರ್ಯ ಎಂಬುದು ಯಾರೂ ಕೊಡುವಂಥ ಸರಕಲ್ಲ. ಅದು ನಾವು ಪಡೆದುಕೊಳ್ಳಬೇಕು ಎಂದು ಹೇಳಿತ್ತಿದ್ದ ನೇತಾಜಿ, ಅದಕ್ಕಾಗಿ ಭಾರತೀಯ ರಾಷ್ಟ್ರೀಯ ಸೇನೆಕಟ್ಟಿ ರಷ್ಯಾ, ಜಪಾನ್, ಜರ್ಮನಿ ದೇಶಗಳ ನೆರವು ಪಡೆಯುವಲ್ಲಿ ಯಶಸ್ಸು ಕಂಡಿದ್ದರು. ಎರಡನೇ ಮಹಾಯುದ್ಧದ ವೇಳೆ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಪ್ರಮುಖ ಬೆಳವಣಿಗೆ ಎಂದರೆ ನೇತಾಜಿ ಸೇನೆ ಕಟ್ಟಿದ್ದು.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಸಶಸ್ತ್ರ ಹೋರಾಟದಿಂದ ಮಾತ್ರ ಬ್ರಿಟಿಷ್ ಮುಕ್ತ ಭಾರತ ಮಾಡಲು ಸಾಧ್ಯ ಎಂದು ನೇತಾಜಿ ಸುಭಾಷ್‌ಚಂದ್ರ ಬೋಸ್‌ ನಂಬಿದ್ದರು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಕ ಅಧಿಕಾರಿ ಜೆ. ಕೆ. ಹೊನ್ನಯ್ಯ ಹೇಳಿದರು.

ನಗರದ ಕರೆಕಲ್ಲಹಳ್ಳಿಯ ನೇತಾಜಿ ಭವನ ನಿರ್ಮಾಣದ ಸ್ಥಳದಲ್ಲಿ ಸುಭಾಷ್ ಚಂದ್ರ ಬೋಸರ 127ನೇ ಜಯಂತಿ ಉದ್ಘಾಟಿಸಿ ಮಾತನಾಡಿ, ನೀವು ನಿಮ್ಮ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತ್ತೇನೆ ಎಂದು ನೇತಾಜಿ ಘೋಷಿಸಿದ್ದರು ಎಂದರು.

ಯೋಧರಾಗುವ ಕನಸು ಕಾಣಬೇಕು

ಸ್ವಾತಂತ್ರ್ಯ ಎಂಬುದು ಯಾರೂ ಕೊಡುವಂಥ ಸರಕಲ್ಲ. ಅದು ನಾವು ಪಡೆದುಕೊಳ್ಳಬೇಕು ಎಂದು ಹೇಳಿತ್ತಿದ್ದ ನೇತಾಜಿ, ಅದಕ್ಕಾಗಿ ಭಾರತೀಯ ರಾಷ್ಟ್ರೀಯ ಸೇನೆಕಟ್ಟಿ ರಷ್ಯಾ, ಜಪಾನ್, ಜರ್ಮನಿ ದೇಶಗಳ ನೆರವು ಪಡೆಯುವಲ್ಲಿ ಯಶಸ್ಸು ಕಂಡಿದ್ದರು. ಎರಡನೇ ಮಹಾಯುದ್ಧದ ವೇಳೆ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಪ್ರಮುಖ ಬೆಳವಣಿಗೆ ಎಂದರೆ ಆಜಾದ್ ಹಿಂದ್ ಫೌಜ್‌ ರಚನೆ. ಇದನ್ನು ಇಂಡಿಯನ್ ನ್ಯಾಷನಲ್ ಆರ್ಮಿ ಅಥವಾ ಐಎನ್ಎ ಎಂದೂ ಕರೆಯಲಾಗುತ್ತದೆ ಎಂದರು.

ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣ ಮಾತನಾಡಿ, ಒಂದು ವೇಳೆ ನೇತಾಜಿ ರವರು ಸ್ವತಂತ್ರ್ಯದ ನಂತರ ಜೀವಂತವಾಗಿದ್ದಿದ್ದರೆ ನಮ್ಮ ದೇಶಕ್ಕೆ ಅವರದ್ದೇ ಆದಂತಹ ಕೊಡುಗೆಗಳನ್ನು ನೀಡುತ್ತಿದ್ದರು ಎಂದರು.

ನೇತಾಜಿ ಯುವಕರ ಸಂಗದ ಅಧ್ಯಕ್ಷ ಅಶೋಕ್ ಮಾತನಾಡಿ, 2011ರಲ್ಲೇ ನಮಗೆ ಮಾಜಿ ಶಾಸಕರಾದ ಎನ್.ಹೆಚ್. ಶಿವಶಂಕರರೆಡ್ಡಿರವರು ಈ ನಿವೇಶನವನ್ನು ನೀಡಿದ್ದಾರೆಂದು ನೆನಪಿಸಿದರು.

ಈ ಕಾರ್ಯಕ್ರಮದಲ್ಲಿ ನಗರ ಸಭೆ ಅಧ್ಯಕ್ಷರಾದ ಲಕ್ಷ್ಮೀನಾರಾಯಣ, ರವಿಕುಮಾರ್, ಅಶೋಕ್ ಕುಮಾರ್, ಕೆ. ಪಿ. ನಂಜುಂಡಪ್ಪ, ಅಂಜಮೂರ್ತಿ, ಗೌರೀಶ್, ಗಂಗಪ್ಪ, ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.