ಸಾರಾಂಶ
ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 4 ಸ್ಥಾಮಿ ಸಮಿತಿಗಳ ರಚನೆ ಕುರಿತಂತೆ ಕ್ರಮ ವಹಿಸಲು ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯ ಆದೇಶದಂತೆ ಪಟ್ಟಣದ ಪುರಸಭೆಗೆ 4 ಸ್ಥಾಮಿ ಸಮಿತಿಗಳನ್ನು ರಚಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಎ.ಕೆ. ಮೈಲಪ್ಪ ಹೇಳಿದ್ದಾರೆ.
- ಪೌರಾಡಳಿತ ನಿರ್ದೇಶನಾಲಯ ಆದೇಶದಂತೆ ಕ್ರಮ: ಪುರಸಭೆ ಅಧ್ಯಕ್ಷ
- - -ಹೊನ್ನಾಳಿ: ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 4 ಸ್ಥಾಮಿ ಸಮಿತಿಗಳ ರಚನೆ ಕುರಿತಂತೆ ಕ್ರಮ ವಹಿಸಲು ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯ ಆದೇಶದಂತೆ ಪಟ್ಟಣದ ಪುರಸಭೆಗೆ 4 ಸ್ಥಾಮಿ ಸಮಿತಿಗಳನ್ನು ರಚಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಎ.ಕೆ. ಮೈಲಪ್ಪ ಹೇಳಿದರು.
ಸೋಮವಾರ ಪುರಸಭೆ ಸಭಾಂಗಣದಲ್ಲಿ ಸಭೆ ಹಾಗೂ ಸ್ಥಾಮಿ ಸಮಿತಿಗಳ ಅಧ್ಯಕ್ಷರ ಪದಗ್ರಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 4 ಸ್ಥಾಯಿ ಸಮಿತಿಗಳನ್ನು ರಚಿಸಿ ಅವುಗಳಿಗೆ ಅಧ್ಯಕ್ಷರನ್ನು, ಸಮಿತಿ ಸದಸ್ಯರನ್ನು ನೇಮಿಸಲಾಗಿದೆ. ಇದರಿಂದ ನನ್ನ ಹೊರೆಯೂ ಸ್ವಲ್ಪ ಕಡಿಮೆ ಆಗುವಂತಿದೆ. ನಮ್ಮ ಅವಧಿ ಯಾವಾಗ ಮುಗಿಯುತ್ತದೋ ನ್ಯಾಯಾಲಯ ನಿರ್ಧರಿಸುತ್ತದೆ. ಅಲ್ಲಿಯವರೆವಿಗೂ ನಾವುಗಳು ಪ್ರಾಮಾಣಿಕವಾಗಿ ಪುರಸಭೆ ವ್ಯಾಪ್ತಿಯ ನಾಗರೀಕರಿಗೆ ಮೂಲ ಸೌಲಭ್ಯಗಳನ್ನು ಪಕ್ಷಾತೀತವಾಗಿ ಒದಗಿಸಿಕೊಡೋಣ ಎಂದರು.ನೂತನವಾಗಿ ಲೆಕ್ಕ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಸುರೇಶ್, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಸವಿತಾ ಮಹೇಶ್ ಹುಡೇದ್, ಪಟ್ಟಣ ಯೋಜನೆ ಪುರೋಭಿವೃದ್ಧಿ ಸಮಿತಿ ಅಧ್ಯಕ್ಷೆ ಅನುಶಂಕರ ಚಂದ್ರು, ಪುರಸಭೆ ಹಿರಿಯ ಸದಸ್ಯ ಧರ್ಮಪ್ಪ, ಪುರಸಭೆ ಮುಖ್ಯಾಧಿಕಾರಿ ಲೀಲಾವತಿ, ಮಾಜಿ ಅಧ್ಯಕ್ಷರಾದ ಕೆ.ವಿ.ಶ್ರೀಧರ್, ಬಾಬು ಹೋಬಳದಾರ್ ಮಾತನಾಡಿದರು.
ಪುರಸಭೆ ಉಪಾಧ್ಯಕ್ಷೆ ಸಾವಿತ್ರಮ್ಮ ವಿಜೇಂದ್ರಪ್ಪ, ಪುರಸಭೆ ಮುಖ್ಯಾಧಿಕಾರಿ ಲೀಲಾವತಿ, ಮಾಜಿ ಅಧ್ಯಕ್ಷರಾದ ಕೆ.ವಿ.ಶ್ರೀಧರ್, ಬಾಬು ಹೋಬಳದಾರ್, ಸದಸ್ಯರಾದ ಬಾವಿಮನೆ ರಾಜಣ್ಣ, ಉಷಾ ಗಿರೀಶ್, ನಾಮನಿರ್ದೇಶಿತ ಸದಸ್ಯರಾದ ರವಿ, ಎಂಜಿನೀಯರ್ ದೇವರಾಜ್, ಮುಖಂಡರಾದ ವಿಜೇಂದ್ರಪ್ಪ, ಮಂಜುನಾಥ್ ಇಂಚರ, ಮಹೇಶ್ ಹುಡೇದ್, ಚಂದ್ರು, ಸತೀಶ್ ಇತರರು ಇದ್ದರು.- - -
-27ಎಚ್.ಎಲ್.ಐ3:;Resize=(128,128))
;Resize=(128,128))