ಕನ್ನಡಪ್ರಭ ವಾರ್ತೆ ಸೂಲಿಬೆಲೆ

ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕರಾಗಿ ಸೇವೆ ಮಾಡುತ್ತಿರುವ ಬಿ.ವಿ.ಸತೀಶಗೌಡರು ೧೧ ತಿಂಗಳ ಅವಧಿಯಲ್ಲಿ ೧ ಕೋಟಿ ೫೦ ಲಕ್ಷ ಅನುದಾನವನ್ನು ಬಳಸಿ ಅಭಿವೃದ್ಧಿ ಮಾಡಿದ್ದಾರೆ. ಇವರ ಸಹಕಾರ ಮತ್ತು ಸಾಧನೆ ಅನನ್ಯ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ಸೂಲಿಬೆಲೆ ಸಮೀಪದ ಹೊಸಕೋಟೆ ಡೇರಿ ಆವರಣದಲ್ಲಿ ಬಮೂಲ್ ನಿರ್ದೇಶಕ ಬಿ.ವಿ.ಸತೀಶಗೌಡರಿಗೆ ಗೌರವ ಸನ್ಮಾನ ನೆರವೇರಿಸಿ ಮಾತನಾಡಿದರು. ಬೆಂಗಳೂರು ಹಾಲು ಒಕ್ಕೂಟ ಹಾಗೂ ಬಮೂಲ್ ಕಲ್ಯಾಣ ಟ್ರಸ್ಟ್ ಅನುದಾನದಲ್ಲಿ ೨ ಹೈಮಾಸ್ ದೀಪ, ೪ ಶುದ್ದಕುಡಿಯುವ ನೀರಿನ ಘಟಕ, ರಾಸುಗಳ ವಿಮೆ, ವೈಧ್ಯಕೀಯ ಪರಿಹಾರ ಚೆಕ್ ವಿತರಣೆ ಸೇರಿದಂತೆ 1 ಕೋಟಿ 50 ಲಕ್ಷ ಹಾಗೂ ಒಕ್ಕೂಟದ ಲಾಭಾಂಶದಲ್ಲಿ ಹೊಸಕೋಟೆ ತಾಲ್ಲೂಕಿಗೆ ಸುಮಾರು 3 ಕೋಟಿ ೫೦ ಲಕ್ಷ ಪ್ರೊತ್ಸಾಹ ಧನವನ್ನು ಹೈನುದಾರರಿಗೆ ವಿತರಣೆ ಮಾಡಿದ್ದಾರೆ ಎಂದರು.

ಹೊಸಕೋಟೆ ಶಿಬಿರದ ಉಪವ್ಯವಸ್ಥಾಪಕ ಶ್ರೀರಾಮ್ ಮಾತನಾಡಿ, ಸದಸ್ಯರ ಸ್ವಾಭಾವಿಕ ಮರಣ ವೆಚ್ಚದಡಿಯಲ್ಲಿ ೧೩ ಜನರಿಗೆ ೩ ಲಕ್ಷ ೬೫ ಸಾವಿರ,ವಿಶೇಷ ವೈಧ್ಯಕೀಯ ವೆಚ್ಚ ೫೦ ಜನರಿಗೆ ೧೧ ಲಕ್ಷ ೫೦ ಸಾವಿರ, ೨ ಹೈ ಮಾಸ್ ಲೈಟ್ ೭ ಲಕ್ಷ ೨೦ ಸಾವಿರ, ೪ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕ ೭ ಲಕ್ಷ ೮೦ ಸಾವಿರ ,೨೦೨೫-೨೬ನೇ ಸಾಲಿನ ವಿಮೆ ನೊಂದಣಿ ಮಾಡಿದ ೯೮೭ ಸದಸ್ಯರಿಗೆ ೪ ಲಕ್ಷ ೧ ಸಾವಿರ, ಮರಣ ವಿಮೆ ಪಾವತಿ ೬ ಜನರಿಗೆ ೬ ಲಕ್ಷ ನೀಡಲಾಗಿದೆ ಇದಕ್ಕೆ ನಿರ್ದೇಶಕರಾದ ಬಿ.ವಿ.ಸತೀಶಗೌಡರ ಪರಿಶ್ರಮ ಸಹಕಾರಿಯಾಗಿದೆ ಎಂದರು.

ಬಮೂಲ್ ನಿರ್ದೇಶಕ ಬಿ.ವಿ.ಸತೀಶಗೌಡರು ಮಾತನಾಡಿ, ೨೦೨೫-೨೬ನೇ ಸಾಲಿನಲ್ಲಿ ವಿಮೆ ಪಡೆದು ಮರಣ ಹೊಂದಿದ ವಡ್ಡಹಳ್ಳಿ ರತ್ನಮ್ಮ, ಅತ್ತಿಬೆಲೆ ಮುನಿರಾಜು, ದೊಡ್ಡಹರಳಗೆರೆ ಮುನಿರತ್ನಮ್ಮ, ಒಬಳಹಳ್ಳಿ ನಾರಾಯಣಸ್ವಾಮಿ,ಒಬಳಹಳ್ಳಿ ನಾರಾಯಣಮ್ಮ, ನೆಲವಾಗಿಲು ಮಂಜುನಾಥ್ ಇವರ ನಾಮಿನಿಗಳಿಗೆ ತಲಾ ೧ ಲಕ್ಷದಂತೆ ೬ ಲಕ್ಷದ ವಿಮೆ ಚೆಕ್ ವಿತರಣೆ ಹಾಗೂ ೨೦೨೫-೨೬ನೇ ಸಾಲಿನಲ್ಲಿ ಸಕ್ರಿಯ ಸದಸ್ಯರ ಹಾಗೂ ಅವಲಂಬಿತರ ಒಳರೋಗಿ ವೈಧ್ಯಕೀಯ ಪರಿಹಾರ ನನ್ನ ವೈಯಕ್ತಿಕ ಕೋಟಾದಲ್ಲಿ ಸುಮಾರು ೧೧ ಲಕ್ಷ ೫೦ ಸಾವಿರ ರೂ.ಗಳ ಚೆಕ್ ವಿತರಣೆ ಮಾಡಲಾಗಿದೆ ಎಂದರು.


ಟಿಎಪಿಸಿಎಂಎಸ್ ಅಧ್ಯಕ್ಷ ಕೋಡಿಹಳ್ಳಿ ಸುರೇಶ್,ನಿವೃತ್ತ ಇಓ ಡಾ.ನಾರಾಯಣಸ್ವಾಮಿ, ಹೊಸಕೋಟೆ ಶಿಬಿರದ ಉಪವ್ಯವಸ್ಥಾಪಕ ಶ್ರೀರಾಮ್, ಡಾ.ಸಂತೋಷ್, ಮುಖಂಡ ಹೊಸಹಳ್ಳಿ ಜಯರಾಮ್, ಹಸಿಗಾಳ ಜಗದೀಶ್,ತಿಮ್ಮಸಂದ್ರ ವಿಜಯಕುಮಾರ್, ತಿಮ್ಮಪ್ಪನಹಳ್ಳಿ ಶ್ರೀನಿವಾಸ್ ಹಾಜರಿದ್ದರು.