ಪದವೀಧರ ಕ್ಷೇತ್ರ ಗೆದ್ದು ಕಾಂಗ್ರೆಸ್ಸಿಂದ ಹೊಸ ಅಧ್ಯಾಯ: ಶಾಸಕ ಬೇಳೂರು ಗೋಪಾಲಕೃಷ್ಣ

| Published : May 29 2024, 12:55 AM IST

ಪದವೀಧರ ಕ್ಷೇತ್ರ ಗೆದ್ದು ಕಾಂಗ್ರೆಸ್ಸಿಂದ ಹೊಸ ಅಧ್ಯಾಯ: ಶಾಸಕ ಬೇಳೂರು ಗೋಪಾಲಕೃಷ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಪದವೀಧರ ಕ್ಷೇತ್ರದಿಂದ ಸ್ವರ್ಧಿಸಿರುವ ಆಯನೂರು ಮಂಜುನಾಥ್ ಓರ್ವ ಸಜ್ಜನ ಹಾಗೂ ವಿದ್ಯಾವಂತರಾಗಿದ್ದು, ಈ ಹಿಂದೆಯೂ ಹಲವು ಜನಪರ ಅಭಿವೃದ್ಧಿ ಕಾರ್ಯಗಳ ಮೂಲಕ ರಾಜ್ಯದ ಜನತೆಗೆ ಚಿರಪರಿಚಿತರಾಗಿದ್ದಾರೆ. ಜನರ ಸಮಸ್ಯೆಗಳನ್ನು ಹತ್ತಿರದಿಂದ ಬಲ್ಲ ಇವರು ಎಂಥ ಸನ್ನಿವೇಶದಲ್ಲೂ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಹೊಂದಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಸನಗರ

ನೈಋತ್ಯ ಪದವೀಧರ ಕ್ಷೇತ್ರ ಅಸ್ತಿತ್ವ ಬಂದಾಗಿನಿಂದ ನಡೆದ 7 ಚುನಾವಣೆಗಳಲ್ಲೂ ಕಾಂಗ್ರೆಸ್‌ಗೆ ಜಯಗಳಿಸಲು ಸಾಧ್ಯವಾಗಿಲ್ಲ. ಆದರೆ, ಈ ಬಾರಿ ಆಯನೂರು ಮಂಜುನಾಥ್ ಗೆಲುವು ಸಾಧಿಸಿ ಕಾಂಗ್ರೆಸ್‌ ಜಿಲ್ಲೆಯಲ್ಲಿ ಹೊಸ ಅಧ್ಯಾಯ ಬರೆಯಲಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಭವಿಷ್ಯ ನುಡಿದರು.

ಹೊಸನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ ಪದವೀಧರ ಕ್ಷೇತ್ರದಿಂದ ಸ್ವರ್ಧಿಸಿರುವ ಆಯನೂರು ಮಂಜುನಾಥ್ ಓರ್ವ ಸಜ್ಜನ ಹಾಗೂ ವಿದ್ಯಾವಂತರಾಗಿದ್ದು, ಈ ಹಿಂದೆಯೂ ಹಲವು ಜನಪರ ಅಭಿವೃದ್ಧಿ ಕಾರ್ಯಗಳ ಮೂಲಕ ರಾಜ್ಯದ ಜನತೆಗೆ ಚಿರಪರಿಚಿತರಾಗಿದ್ದಾರೆ. ಜನರ ಸಮಸ್ಯೆಗಳನ್ನು ಹತ್ತಿರದಿಂದ ಬಲ್ಲ ಇವರು ಎಂಥ ಸನ್ನಿವೇಶದಲ್ಲೂ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಹೊಂದಿದ್ದಾರೆ ಎಂದರು.

ಕಾಂಗ್ರೆಸ್‌ ವಿಧಾನ ಪರಿಷತ್‌ ಚುನಾವಣೆಯ ಗಂಭೀರವಾಗಿ ಪರಿಗಣಿಸಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿಲು ವಾರ್ಡ್‌ಮಟ್ಟದಲ್ಲಿ ಸಮಿತಿಗಳ ರಚಿಸಲಾಗಿದೆ. ಇದಲ್ಲದೇ ಪಕ್ಷದ ವತಿಯಿಂದ ಸಾಕಷ್ಟು ಮತದಾರರ ನೋಂದಣಿ ಕೂಡ ಮಾಡಿಸಲಾಗಿದೆ. ಹೀಗಾಗಿಯೇ ನಮಗೆ ಗೆಲ್ಲುವ ಎಲ್ಲ ರೀತಿಯ ಅವಕಾಶಗಳು ಇವೆ ಎಂದರು.

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ತಾಲೂಕು ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ, ಟೌನ್ ಘಟಕದ ಅಧ್ಯಕ್ಷ ಗುರುರಾಜ್, ತಾಲೂಕು ಕಾರ್ಯದರ್ಶಿ ಸದಾಶಿವ ಶ್ರೇಷ್ಟಿ, ಸರ್ಕಾರದ ಗ್ಯಾರಂಟಿ ಸಮಿತಿ ಅದ್ಯಕ್ಷ ಚಿದಂಬರ್, ಪುರಪಂಚಾಯತಿ ಸದಸ್ಯರಾದ ಅಶ್ವಿನಿಕುಮಾರ್, ಶಾಹೀನಾ, ಸಿಂಥಿಯಾ ಪಕ್ಷದ ಮುಖಂಡರಾದ ಬಿ.ಜಿ.ನಾಗರಾಜ್, ನಾಸಿರ್, ಸಣ್ಣಕ್ಕಿ ಮಂಜುನಾಥ್ ಮುಂತಾದವರಿದ್ದರು.

-------------------------------