ನವದೆಹಲಿಯಲ್ಲಿ ನಡೆದ ವಿಶ್ವದ ಅತ್ಯಂತ ದೊಡ್ಡ ಪುಸ್ತಕ ಮೇಳದಲ್ಲಿ ಕನ್ನಡ ಪುಸ್ತಕ ಬಿಡುಗಡೆ

| N/A | Published : Feb 13 2025, 12:49 AM IST / Updated: Feb 13 2025, 12:49 PM IST

ನವದೆಹಲಿಯಲ್ಲಿ ನಡೆದ ವಿಶ್ವದ ಅತ್ಯಂತ ದೊಡ್ಡ ಪುಸ್ತಕ ಮೇಳದಲ್ಲಿ ಕನ್ನಡ ಪುಸ್ತಕ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಶಿಕ್ಷಣ ಸಚಿವಾಲಯದಡಿಯಲ್ಲಿ ರೂಪಿಸಲಾದ ಪ್ರಧಾನಮಂತ್ರಿ ಯುವ 2.0 ಯೋಜನೆಗೆ ದೇಶದ ವಿವಿಧ ಪ್ರಾದೇಶಿಕ ಭಾಷೆಗಳ ಯುವಲೇಖಕರನ್ನು ಆಹ್ವಾನಿ

 ಮೈಸೂರು :  ನವದೆಹಲಿಯಲ್ಲಿ ನಡೆದ ವಿಶ್ವದ ಅತ್ಯಂತ ದೊಡ್ಡ ಪುಸ್ತಕಮೇಳ ನವದೆಹಲಿ ವಿಶ್ವ ಪುಸ್ತಕ ಮೇಳ 2025ರಲ್ಲಿ ಕನ್ನಡದ ಯುವ ಲೇಖಕ ಮಹೇಶ ಹಿರೇಮಠ ಅವರ ಪ್ರಜಾಪ್ರಭುತ್ವದ ರಾಯಭಾರಿಗಳು ಪುಸ್ತಕ ಬಿಡುಗಡೆಯಾಗಿದೆ.

ಈ ಪುಸ್ತಕವನ್ನು ಪ್ರಧಾನಮಂತ್ರಿ ಯುವ 2.0 ಯೋಜನೆಯಡಿ ಇಂಗ್ಲಿಷ್‌ ಸೇರಿದಂತೆ ದೇಶದ ವಿವಿಧ ಪ್ರಾದೇಶಿಕ ಭಾಷೆಗಳ 41 ಯುವ ಲೇಖಕರ ಕೃತಿಗಳನ್ನು ನವದೆಹಲಿಯ ನ್ಯಾಷನಲ್‌ ಬುಕ್‌ ಟ್ರಸ್ಟ್‌ ಪ್ರಕಟಿಸಿದ್ದು, ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್, ತ್ರಿಪುರ ರಾಜ್ಯಪಾಲ ಎನ್.ಧರ್ಮಸೇನ ರೆಡ್ಡಿ, ಕೇಂದ್ರ ಶಾಲಾ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಸಂಜಯ್ ಕುಮಾರ್, ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ವಿನೀತ್ಜೋಶಿ, ಯುಜಿಸಿ ಅಧ್ಯಕ್ಷ ಜಗದೀಶ್‌ ಕುಮಾರ್‌, ನ್ಯಾಷನಲ್ ಬುಕ್ ಟ್ರಸ್ಟ್ ಅಧ್ಯಕ್ಷ ಪ್ರೊ. ಮಿಲಿಂದ್ ಸುಧಾಕರ್ ಮರಾಠ, ನ್ಯಾಷನಲ್ ಬುಕ್ ಟ್ರಸ್ಟ್‌ ನ ನಿರ್ದೇಶರಾದ ಕರ್ನಲ್‌ ಯುವರಾಜ್ ಮಲಿಕ್ ಅವರು ಬಿಡುಗಡೆಗೊಳಿಸಿದರು. 

ಯುವ 2.0 ಯೋಜನೆಗೆ ಆಯ್ಕೆಯಾದ ಏಕೈಕ ಕನ್ನಡ ಯುವ ಲೇಖಕ ಕೇಂದ್ರ ಶಿಕ್ಷಣ ಸಚಿವಾಲಯದಡಿಯಲ್ಲಿ ರೂಪಿಸಲಾದ ಪ್ರಧಾನಮಂತ್ರಿ ಯುವ 2.0 ಯೋಜನೆಗೆ ದೇಶದ ವಿವಿಧ ಪ್ರಾದೇಶಿಕ ಭಾಷೆಗಳ ಯುವಲೇಖಕರನ್ನು ಆಹ್ವಾನಿಸಲಾಗಿತ್ತು.

 ನ್ಯಾಷನಲ್‌ ಬುಕ್‌ ಟ್ರಸ್ಟ್‌ ನೇತೃತ್ವದ ತಜ್ಞರತಂಡವು ಮೂರು ಹಂತಗಳ ಆಯ್ಕೆ ಪ್ರಕ್ರಿಯೆ ನಂತರ ದೇಶದ 41 ಯುವ ಲೇಖಕರನ್ನು ಈ ಯೋಜನೆಗೆ ಆಯ್ಕೆ ಮಾಡಿತು. ಇದರಲ್ಲಿ ಆಯ್ಕೆಯಾದ ಏಕೈಕ ಕನ್ನಡ ಯುವಲೇಖಕ ಮಹೇಶ ಹಿರೇಮಠ ಆಗಿದ್ದು, ಅವರ ಕೃತಿಯನ್ನುದೇಶದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ನ್ಯಾಷನಲ್‌ ಬುಕ್‌ ಟ್ರಸ್ಟ್‌ ಪ್ರಕಟಿಸಿದೆ. ಕರ್ನಾಟಕ ಕಾಲೇಜಿನ ಪ್ರತಿಭೆಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದ ಮಹೇಶ ಹಿರೇಮಠ ಅವರು ಧಾರವಾಡದ ಕರ್ನಾಟಕ ಕಾಲೇಜಿನಿಂದ ಪತ್ರಿಕೋದ್ಯಮ ಹಾಗೂ ಅಪರಾಧಶಾಸ್ತ್ರದಲ್ಲಿ ಪದವಿ, ಮೈಸೂರು ವಿವಿಯಿಂದ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಆ ನೆನಪುಗಳು ಎಂಬ ಮೊದಲ ಕಾದಂಬರಿಯನ್ನು ಕಾಲೇಜು ದಿನಗಳಲ್ಲಿಯೇ ಪ್ರಕಟಿಸಿದ್ದಾರೆ. 

ಇದರೊಂದಿಗೆ ಸಾಕ್ಷ್ಯಚಿತ್ರ ನಿರ್ದೇಶನದತ್ತಆಸಕ್ತಿ ಬೆಳೆಸಿಕೊಂಡಿರುವ ಇವರ ಮೂರು ಸಾಕ್ಷ್ಯಚಿತ್ರಗಳು ಮುಂಬೈ, ಕೋಲ್ಕತ್ತ ಹಾಗೂ ಗುವಾಹಟಿಯಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿವೆ. ವಚನ ಸಾಹಿತ್ಯ ಹಾಗೂ ಇತಿಹಾಸದ ಕುರಿತ ಸಂಶೋಧನೆಯತ್ತ ವಿಶೇಷ ಒಲವು ಬೆಳೆಸಿಕೊಂಡಿದ್ದಾರೆ.

 ರಾಷ್ಟ್ರಪತಿಗಳಿಂದ ಗೌರವ ಪಿಎಂ ಯುವ 2.0 ಯೋಜನೆಯಡಿ ಆಯ್ಕೆಯಾದ ದೇಶದ 41 ಯುವ ಲೇಖಕರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನಕ್ಕೆ ಆಹ್ವಾನಿಸಿ ಗೌರವಿಸಿದ್ದು ವಿಶೇಷ. ಕಳೆದ ವರ್ಷ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಯುವಲೇಖಕರೊಂದಿಗೆ ಸಂವಾದ ನಡೆಸಿ ಪ್ರೋತ್ಸಾಹಿಸಿದ್ದರು.ನ್ಯಾಷನಲ್ ಬುಕ್ ಟ್ರಸ್ಟ್‌ ಪ್ರಕಟಣೆ ವಿಭಾಗದ ಮುಖ್ಯಸ್ಥ ಕುಮಾರ್‌ ವಿಕ್ರಮ್‌, ಕನ್ನಡ ವಿಭಾಗದ ಸಂಪಾದಕಿ ಹೇಮಾಶ್ರಿ ಚಂದ್ರಶೇಖರ್‌ ಹಾಗೂ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಉದಯ್‌ ಕುಮಾರ್‌ ಇರ್ವತ್ತೂರು ಅವರ ಮಾರ್ಗದರ್ಶನದಲ್ಲಿ ಈ ಪುಸ್ತಕವನ್ನು ಪ್ರಕಟಿಸಲಾಗಿದೆ.