ರಾಧಾ ನಾಯಕ್ ಹಳೆ ವಿದ್ಯಾರ್ಥಿ ಸಂಘದ ಹೊಸ ಕಾರ್ಯಕಾರಿ ಸಮಿತಿ ಆಯ್ಕೆ

| Published : Oct 13 2025, 02:03 AM IST

ರಾಧಾ ನಾಯಕ್ ಹಳೆ ವಿದ್ಯಾರ್ಥಿ ಸಂಘದ ಹೊಸ ಕಾರ್ಯಕಾರಿ ಸಮಿತಿ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಧಾ ನಾಯಕ್ ಹಳೆ ವಿದ್ಯಾರ್ಥಿ ಸಂಘದ ಹೊಸ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಗಿದೆ. ಶಾಲಾ ಮುಖ್ಯೊಪಾಧ್ಯಾಯರಾದ ರಾಮದಾಸ್ ನಾಯಕ್ ಅವರ ನೇತೃತ್ವದಲ್ಲಿ ನಡೆದ ಸಮಿತಿಯಲ್ಲಿ ಸಂಘದ ಗೌರವಧ್ಯಕ್ಷರಾಗಿ ನಿವೃತ್ತ ಪೊಲೀಸ್ ಕಮಿಷನರ್ ಮುಂಬೈ ದಯಾ ನಾಯಕ್ ನೇಮಕಗೊಂಡಿದ್ದಾರೆ. ಅಧ್ಯಕ್ಷರಾಗಿ ಸುಧೀರ್ ಶೆಟ್ಟಿ (ಬೈಲುಮನೆ, ಎಣ್ಣೆಹೊಳೆ) ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ಉಪಾಧ್ಯಕ್ಷರಾಗಿ ಮಹೇಶ್ ಕುಲಾಲ್, ಶಂಶಿರ್ (ಎಣ್ಣೆಹೊಳೆ) ಹಾಗೂ ದೀಕ್ಷಾ ಶೆಟ್ಟಿ ಆಯ್ಕೆಯಾಗಿದ್ದಾರೆ. ಕೋಶಾಧಿಕಾರಿಯಾಗಿ ವಿಜಯ್ ಕುಲಾಲ್ (ಹಟ್ಟೆ) ಹಾಗೂ ಕಾರ್ಯದರ್ಶಿಯಾಗಿ ರಾಜೇಶ್ ಶೆಟ್ಟಿ (ಹೆಂಡಿಬೆಟ್ಟು, ಎಣ್ಣೆಹೊಳೆ) ಮತ್ತು ಜೊತೆಗೆ ಕಾರ್ಯದರ್ಶಿಯಾಗಿ ರಂಜಿತ್ ಶೆಟ್ಟಿ (ಚೇಳಿಬೆಟ್ಟು, ಎಣ್ಣೆಹೊಳೆ) ಆಯ್ಕೆಯಾಗಿದ್ದಾರೆ.ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಶರತ್ ಶೆಟ್ಟಿ (ಅರಬ್ಬಿಮನೆ, ಎಣ್ಣೆಹೊಳೆ), ಸಂದೀಪ್ ಕಾಮತ್, ವೀಣಾ ಮತ್ತು ಅಕ್ಷತಾ ಸಂದೀಪ್ ಜೈನ್ ಆಯ್ಕೆಯಾಗಿದ್ದಾರೆ. ಕ್ರೀಡಾ ಕಾರ್ಯದರ್ಶಿಗಳಾಗಿ ಸುಕೇಶ್ (ಕೈಕಂಬ), ರವಿ (ಎಣ್ಣೆಹೊಳೆ), ಪ್ರವೀಣ್ ಶೆಟ್ಟಿ (ಕುಮೇರುಮನೆ, ಎಣ್ಣೆಹೊಳೆ) ಮತ್ತು ಪಾವನ ಶೆಟ್ಟಿ ಆಯ್ಕೆಯಾಗಿದ್ದಾರೆ.ಸಂಪರ್ಕ ಕಾರ್ಯದರ್ಶಿಯಾಗಿ ಸಂದೀಪ್ (ಅಮೃತ್ ನಗರ) ನೇಮಕಗೊಂಡಿದ್ದಾರೆ. ಪ್ರಚಾರ ಸಮಿತಿ ಅಧ್ಯಕ್ಷರಾಗಿ ರಾಂ ಅಜೆಕಾರು ಆಯ್ಕೆಯಾಗಿದ್ದಾರೆ. ಸಂಘಟನಾ ಕಾರ್ಯದರ್ಶಿಗಳಾಗಿ ಪ್ರಕಾಶ್ ಪೂಜಾರಿ, ಪ್ರಸಿದ್ದ ಜೈನ್ (ಎಣ್ಣೆಹೊಳೆ), ಜೊತೆಗೆ ದೀಪಕ್ ಮತ್ತು ಭಾರ್ಗವ್ ಆಯ್ಕೆಯಾಗಿದ್ದಾರೆ.