ಸಾರಾಂಶ
ಕಲಿಯುಗದಲ್ಲಿ ಬೇಡಿದ್ದು ನೀಡುವ ಶ್ರೀನಿವಾಸ ದೇವರ ಶ್ರದ್ಧಾ ಭಕ್ತಿಯಿಂದ ಪೂಜಿಸಬೇಕು. ಸಮಾಜದ ವತಿಯಿಂದ ಪ್ರತೀ ವರ್ಷ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಸುತ್ತ ಬರುತ್ತಿದ್ದೇವೆ ರಾಮಾಯಣ- ಮಹಾಭಾರತದಂತಹ ಗ್ರಂಥಗಳ ಹೊಸ ತಲೆಮಾರಿಗೆ ಪರಿಚಯಿಸುವ ಕೆಲಸ ಆಗಬೇಕಿದೆ. ಆ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನ ಆಗಬೇಕು.
ಕನ್ನಡಪ್ರಭ ವಾರ್ತೆ ಸಾಗರ
ಧಾರ್ಮಿಕ ಕಾರ್ಯಕ್ರಮಗಳು ಲೋಕಕಲ್ಯಾಣಾರ್ಥ ನಡೆಸಿದರೆ ಮಾತ್ರ ಅದು ತನ್ನ ಅರ್ಥ ಕಂಡು ಕೊಳ್ಳುತ್ತದೆ. ಬಹಳ ಹಿಂದಿನಿಂದಲೂ ನಮ್ಮಲ್ಲಿ ಮಂಗಳ ಕಾರ್ಯಗಳ ಆರಂಭಿಸುವಾಗ ಶ್ರೀನಿವಾಸ ಕಲ್ಯಾಣ, ಜಾಂಬವತಿ ಕಲ್ಯಾಣ , ಗಿರಿಜಾ ಕಲ್ಯಾಣದಂತಹ ಕಾರ್ಯಕ್ರಮಗಳ ನಡೆಸುತ್ತ ಬರಲಾಗುತ್ತಿದೆ ಎಂದು ಸಾಗರದ ಮಾಧ್ವ ಸಂಘದ ಅಧ್ಯಕ್ಷ ಡಾ.ಕಲ್ಲಾಪುರ್ ಹೇಳಿದರು.ಇಲ್ಲಿನ ಮಾಧ್ವ ಸಂಘ ಆಯೋಜಿಸಿದ್ದ ಶ್ರೀನಿವಾಸ ಕಲ್ಯಾಣದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಕಲಿಯುಗದಲ್ಲಿ ಬೇಡಿದ್ದು ನೀಡುವ ಶ್ರೀನಿವಾಸ ದೇವರ ಶ್ರದ್ಧಾ ಭಕ್ತಿಯಿಂದ ಪೂಜಿಸಬೇಕು. ಸಮಾಜದ ವತಿಯಿಂದ ಪ್ರತೀ ವರ್ಷ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಸುತ್ತ ಬರುತ್ತಿದ್ದೇವೆ ರಾಮಾಯಣ- ಮಹಾಭಾರತದಂತಹ ಗ್ರಂಥಗಳ ಹೊಸ ತಲೆಮಾರಿಗೆ ಪರಿಚಯಿಸುವ ಕೆಲಸ ಆಗಬೇಕಿದೆ. ಆ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನ ಆಗಬೇಕು ಎಂದರು.
ಪಂಡಿತ್ ಶ್ರೀನಿಧಿ ಗುಡಿ ಆಚಾರ್ ಮಾತನಾಡಿ, ಭಗವಂತನ ಸಾಕ್ಷಾತ್ಕಾರ ಎನ್ನುವುದು ಸುಲಭವಲ್ಲ. ಅದು ಸಿದ್ಧಿಯಾಗಬೇಕು ಎಂದರೆ ನಾವು ಆಡಂಬರ, ಸ್ವಾರ್ಥದಿಂದ ಹೊರಬರಬೇಕು. ಪುಣ್ಯ ಸಂಪಾದನೆಯು ಸುಲಭ ಮಾರ್ಗವಲ್ಲ. ಅದಕ್ಕೆ ಬದ್ಧತೆ ಬೇಕು. ಇತ್ತೀಚಿನ ದಿನಗಳಲ್ಲಿ ನಾವು ನಮ್ಮ ಕುಟುಂಬ ಎನ್ನುವ ಪರಿಧಿಯೊಳಗೆ ಬದುಕು ದೇವರನ್ನು ಮಂಗಳ ವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಕರೆತರಲಾಯಿತು. ಆನಂದಪುರದ ರಿದಂ ನೃತ್ಯ ತಂಡ ಭಕ್ತಿ ಸಂಗೀತಕ್ಕೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆಯಿತು. ಧಾರ್ಮಿಕ ಕಾರ್ಯಕ್ರಮಗಳ ಆನಂದಪುರದ ಪ್ರಾಣೇಶಾಚಾರ್ ಹಾಗೂ ನಾಗಭೂಷಣ್ ದಂಪತಿ ನಡೆಸಿದರು. ಮಾಧ್ವ ಸಂಘದ ಪ್ರಧಾನ ಕಾರ್ಯದರ್ಶಿ ಬದರಿನಾಥ್, ವೈ.ಮೋಹನ್, ಶ್ರೀಶಾಚಾರ್, ವಿದ್ವಾನ್ ಪಿ.ಎಲ್.ಗಜಾನನ ಭಟ್ ಇತರರಿದ್ದರು.