ಬೀದರ್‌ ರೋಟರಿ ಕ್ಲಬ್ ‘ನ್ಯೂ ಸೆಂಚುರಿ’ಗೆ ನವ ಪದಾಧಿಕಾರಿಗಳ ಪದಗ್ರಹಣ

| Published : Jul 07 2025, 11:47 PM IST / Updated: Jul 07 2025, 11:48 PM IST

ಬೀದರ್‌ ರೋಟರಿ ಕ್ಲಬ್ ‘ನ್ಯೂ ಸೆಂಚುರಿ’ಗೆ ನವ ಪದಾಧಿಕಾರಿಗಳ ಪದಗ್ರಹಣ
Share this Article
  • FB
  • TW
  • Linkdin
  • Email

ಸಾರಾಂಶ

ರೋಟರಿ ಕ್ಲಬ್ ಆಫ್ ಬೀದರ್‌ ನ್ಯೂ ಸೆಂಚುರಿ-3160 ವತಿಯಿಂದ ನಡೆದಂತಹ ಪದಗ್ರಹಣ ಕಾರ್ಯಕ್ರಮದಲ್ಲಿ ಪಿ.ಡಿ.ಜಿ. ರಮೇಶ ಮಂಗಲಾ ರೋಟರಿ ಡಿಸ್ಟ್ರಿಕ್ಟ್‌ 3150 ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಸಸಿಗಳಿಗೆ ನೀರೆರೆರುವ ಮುಖಾಂತರ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೀದರ್‌

ರೋಟರಿ ಕ್ಲಬ್ ಆಫ್ ಬೀದರ್‌ ನ್ಯೂ ಸೆಂಚುರಿ-3160 ವತಿಯಿಂದ ನಡೆದಂತಹ ಪದಗ್ರಹಣ ಕಾರ್ಯಕ್ರಮದಲ್ಲಿ ಪಿ.ಡಿ.ಜಿ. ರಮೇಶ ಮಂಗಲಾ ರೋಟರಿ ಡಿಸ್ಟ್ರಿಕ್ಟ್‌ 3150 ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಸಸಿಗಳಿಗೆ ನೀರೆರೆರುವ ಮುಖಾಂತರ ಚಾಲನೆ ನೀಡಿದರು.

ರೋಟರಿ ಕ್ಲಬ್ ಆಫ್ ಬೀದರ ನ್ಯೂ ಸೆಂಚುರಿಯ ನವ ಪದಾಧಿಕಾರಿಗಳಿಗೆ ನಿಲೇಶ ಸಿಂದೋಲ್ ಅವರು ಪದಗ್ರಹಣ ಅಧಿಕಾರಿಗಳಾಗಿ, 2025-26ರ ಸಾಲಿನ ನೂತನ ಅಧ್ಯಕ್ಷರಾಗಿ ಡಾ.ನಾಗೇಶ ಪಾಟೀಲ, ಕಾರ್ಯದರ್ಶಿಗಳಾಗಿ ರಾಜಕುಮಾರ ಅಳ್ಳೆ, ಉಪಾಧ್ಯಕ್ಷರಾಗಿ ಡಾ. ಶರಣ ಬುಳ್ಳಾ, ಖಜಾಂಚಿಗಳಾಗಿ ಬಸವರಾಜ ಮಡಕಿ, ಜಂಟಿ ಕಾರ್ಯದರ್ಶಿಯಾಗಿ ಸತೀಶ ಸ್ವಾಮಿ, ಮತ್ತು ಹಲವರು ನಿರ್ದೇಶಕರಾಗಿ, ಸದಸ್ಯರಾಗಿ ಪದಗ್ರಹಣ ಮಾಡಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದಂತಹ ಪರ್ವಾ ಜಿಲ್ಲಾ ಗರ್ನಸರ್ ರಮೇಶ ಮಂಗಲಾ ಅವರು ರೋಟರಿ ಕ್ಲಬ್ ಆಫ್ ಬೀದರ ನ್ಯೂ ಸೆಂಚುರಿ ನಡೆದು ಬಂದ ದಾರಿಗೆ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಬಂದಿರುವುದಕ್ಕೆ ಪ್ರಶಂಸಿಸಿದರು.

ಇದೇ ಸಂದರ್ಭದಲ್ಲಿ ಇನ್ನೋರ್ವ ಅತಿಥಿ ಹಾವಶೆಟ್ಟಿ ಪಾಟೀಲ, ಸಹಾಯಕ ಗರ್ನಾರ್ ರೋಟರಿ ಕ್ಲಬ್, ಕಲ್ಯಾಣ ಝೋನ್, ಅವರು ಭಾರತ ದೇಶದಲ್ಲಿ 46000 ಗಿಂತ ಹೆಚ್ಚು ರೋಟರಿ ಕ್ಲಬ್‌ಗಳಿದ್ದು, ಜಗತ್ತಿ ನಲ್ಲೇ ಒಂದು ಪ್ರತಿಷ್ಠಿತ ಸಂಸ್ಥೆಯಾಗಿದೆ. ಈ ಸಂಸ್ಥೆಯ ಸದಸ್ಯರೆನ್ನುವುದೇ ಒಂದು ಗೌರವ ವಿಷಯವಾಗಿದೆ ಎಂದರು.

ಹಿಂದಿನ ಅಧ್ಯಕ್ಷ ಶಿವಕುಮಾರ ಪಾಕಲ್ ಸ್ವಾಗತಿಸಿದರು, ಪ್ರಭು ತಟಪತಿ ಅವರ ಅವಧಿಯಲ್ಲಿ ಮಾಡಿರುವಂತಹ ಎಲ್ಲಾ ಕಾರ್ಯಕ್ರಮದ ವಿವರಣೆ ಹೇಳಿದರು. ರಾಜಕುಮಾರ ಅಳ್ಳೆ ವಂದಿಸಿದರು. ಡಾ. ಶಿಲ್ಪಾ ಬುಳ್ಳಾ, ಡಾ. ಜ್ಞಾನಗಂಗಾ ಪಾಟೀಲ ಸಂಚಾಲನೆ ಮಾಡಿದರು, ಈ ಸಂದರ್ಭದಲ್ಲಿ ಡಾ. ರಘುಕೃಷ್ಣ ಮೂರ್ತಿ, ಬಸವರಾಜ ಧನ್ನೂರ್, ರವಿಂದ್ರನಾಥ ಮೂಲಗೆ, ಶಿವಕುಮಾರ ಎಲಾಲ್ ಅತಿಥಿಗಳಾಗಿ ಆಗಮಿಸಿದರು. ಚೇತನ ಮೇಗೂರ್, ನಿತೇಶ ಬಿರಾದಾರ, ನಿತಿನ ಕರ್ಪೂರ್, ಮನಿಷ್ ರಂಗದಲ್, ಡಾ. ಸಂತೋಷ ರೇಜೆಂತಲ್, ಡಾ. ಉಜೇರ್, ಡಾ. ಉಮೇಶ ಮಾಲಿಪಾಟೀಲ, ಡಾ. ರಿತೇಶ ಸುಲೆಗಾಂವ, ಡಾ. ಆರತಿ ರಘುಕೃಷ್ಣಮೂರ್ತಿ, ಸೂರ್ಯಕಾಂತ ರಾಮಶೆಟ್ಟಿ, ವೀರಶೇಟ್ಟಿ ಮಣಿಗೆ, ಡಾ. ಶೃತಿ ಬಿರಾದಾರ ಸೇರಿದಂತೆ ಅನ್ಯ ಕ್ಲಬ್‌ನ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಸದಸ್ಯರು ಪರಿವಾರದೊಂದಿಗೆ ಉಪಸ್ಥಿತರಿದ್ದರು.