ಕಲ್ಲಬೆಟ್ಟು ನ್ಯೂ ವೈಬ್ರೆಂಟ್ ಪಿಯು ಕಾಲೇಜಿನಲ್ಲಿ ಚಾರಿತ್ರ್ಯವೇ ಯಶಸ್ಸಿನ ಮೊದಲ ಹೆಜ್ಜೆ ವಿವೇಕ ಜಾಗೃತಿ ವಿಶೇಷ ಉಪನ್ಯಾಸ ಕಾರ್ಯಕ್ರಮ

ಮೂಡುಬಿದಿರೆ: ಈ ಸಮಾಜದಲ್ಲಿನ ಒಳಿತು ಕೆಡುಕುಗಳನ್ನು ಅರ್ಥಮಾಡಿಕೊಂಡು ಒಳಿತನ್ನು ಜೀವನದಲ್ಲಿ ಅಳವಡಿಸಿಕೊಂಡು ಧೈರ್ಯವಾಗಿ ಮುಂದುವರಿಯಲು ಶಕ್ತಿಯನ್ನು ನೀಡುವುದೇ ವಿವೇಕ ಎಂದು ಕಡಪ ರಾಮಕೃಷ್ಣ ವಿಷನಿನ ಸ್ವಾಮಿ ಅನುಪಮಾನಂದಜಿ ಹೇಳಿದರು. ಕಲ್ಲಬೆಟ್ಟು ನ್ಯೂ ವೈಬ್ರೆಂಟ್ ಪಿಯು ಕಾಲೇಜಿನಲ್ಲಿ ಚಾರಿತ್ರ್ಯವೇ ಯಶಸ್ಸಿನ ಮೊದಲ ಹೆಜ್ಜೆ ವಿವೇಕ ಜಾಗೃತಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮತ್ತು ಮಾಜಿ ಸೈನಿಕರಾದ ಬೆಳ್ಳಾಲ ಗೋಪಿನಾಥ್ ರಾವ್ ಉಪಸ್ಥಿತರಿದ್ದರು. ಭಾರತೀಯ ಸೇನೆಯಲ್ಲಿ 35 ಕಾರ್ಯ ನಿರ್ವಹಿಸಿ ಪ್ರಸ್ತುತ ಸಂಸ್ಥೆಯಲ್ಲಿ ಶಿಸ್ತುಪಾಲನಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸುಬೇದಾರ್ ಕೆ. ಗುಣಾಕರ್, ಹವಾಲ್ದಾರ್ ಎನ್. ವಿದ್ಯಾಧರ, ಹವಾಲ್ದಾರ್ ಎನ್. ಬಾಲಕೃಷ್ಣ, ಹವಾಲ್ದಾರ್ ಹರಿಚಂದ್ರ, ಹವಾಲ್ದಾರ್ ಡಿ. ಬಾಲಕೃಷ್ಣ, ಹವಾಲ್ದಾರ್ ಎಂ. ಭಾಸ್ಕರ್ ಅವರನ್ನು ಸನ್ಮಾನಿಸಲಾಯಿತು.

ಕಾಲೇಜಿನ ಟ್ರಸ್ಟಿ ಹಾಗೂ ಪ್ರಾಂಶುಪಾಲ ಡಾ. ಎಸ್. ಎನ್. ವೆಂಕಟೇಶ್ ನಾಯಕ್ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಕಾಲೇಜಿನ ಟ್ರಸ್ಟಿಗಳಾದ ಸುಭಾಷ್ ಝಾ, ಡಾ. ಶರತ್ ಗೋರೆ, ಚಂದ್ರಶೇಖರ್ ರಾಜೇ ಅರಸ್, ಎಸ್. ಮೆಹಬೂಬ್ ಬಾಷಾ, ಯೋಗೇಶ್ ಬೆಡೆಕರ್ , ಆಡಳಿತಾಧಿಕಾರಿ ಅರುಣ್ ಡಿಸಿಲ್ವ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಹೊನ್ವಿತಾ ಅತಿಥಿಗಳನ್ನು ಪರಿಚಯಿಸಿದರು. ಗೌತಮ್ ಸ್ವಾಗತಿಸಿ ತಮಸ್ಯ ಭಟ್ ನಿರೂಪಿಸಿದರು. ತೇಜಸ್ ಬಲ್ಲಾಳ್ ವಂದಿಸಿದರು.