ಸಾರಾಂಶ
Newborn baby dies in government hospital, parents outraged
- ಆರೋಗ್ಯ ಅಧಿಕಾರಿಗಳ ಅಮಾನತಿಗೆ ಒತ್ತಾಯ
----ಕನ್ನಡಪ್ರಭ ವಾರ್ತೆ ಗುರುಮಠಕಲ್
ಸಮುದಾಯ ಆರೋಗ್ಯ ಕೇಂದ್ರದಲ್ಲಿ (ಪಿ.ಎಚ್.ಸಿ) ಬುಧವಾರ ನವಜಾತ ಶಿಶುವೊಂದು ಮೃತಪಟ್ಟಿದ್ದು, ಆರೋಗ್ಯ ಕೇಂದ್ರದ ಸಿಬ್ಬಂದಿ ಮತ್ತು ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎನ್ನುವ ಆರೋಪ ಪೋಷಕರದ್ದಾಗಿದೆ.* ಘಟನೆ ವಿವರ:
ಅನಪುರ ಗ್ರಾಮದ ಗಾಯತ್ರಿ ನವೀನ್ ದಾಸರಿ ಅವರು ಹೆರಿಗೆಗೆಂದು ಮಂಗಳವಾರ ಪಿ.ಎಚ್.ಸಿ.ಗೆ ಬಂದಿದ್ದರು. ಆದರೆ, ಕೆಲವು ಪರೀಕ್ಷೆಗಳಿಗೆ ವೈದ್ಯರು ಶಿಫಾರಸ್ಸು ಮಾಡಿದ್ದಾರೆ. ಪರೀಕ್ಷೆ ಮಾಡಿಸಲು ಯಾದಗಿರಿ ನಗರಕ್ಕೆ ಹೋಗಬೇಕಿದ್ದರಿಂದ ಪಟ್ಟಣದಲ್ಲಿರುವ ಸಂಬಂಧಿಕರ ಮನೆಯಲ್ಲಿ ತಂಗಿದ್ದಾರೆ. ಬುಧವಾರ ಮಧ್ಯಾಹ್ನ 2 ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಮತ್ತೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದಿದ್ದಾರೆ. ಆ ವೇಳೆಗೆ ಶಿಶುವಿನ ತಲೆ ಭಾಗವು ಹೊರಬಂದಿತ್ತು. ನಂತರ ಆರೋಗ್ಯ ಕೇಂದ್ರದಲ್ಲಿ ಹೆರಿಗೆಯಾಗಿದ್ದು, ಜನನದ ಕೆಲ ಸಮಯದಲ್ಲೇ ಶಿಶುಮರಣ ಸಂಭವಿಸಿದೆ.ಯಾದಗಿರಿ ನಗರದ ಜಿಲ್ಲಾಸ್ಪತ್ರೆಗೆ ಹೋಗುವಂತೆ ಇಲ್ಲಿನ ವೈದ್ಯರು ಹೇಳಿದ್ದರು. ಆದರೆ, ಅಂಬ್ಯುಲೆನ್ಸ್ ವ್ಯವಸ್ಥೆಗೆ ಗೋಗರೆದರೂ ಲಭ್ಯವಾಗಲಿಲ್ಲ. ನಮ್ಮಂತ ಬಡವರ ಜೀವಕ್ಕೆ ಬೆಲೆಯಿಲ್ಲದಂತಾಗಿದೆ ಎನ್ನುವುದು ಪೋಷಕರಾದ ಜನಾರ್ಧನ ದಾಸರಿ (ಗಾಯತ್ರಿ ದಾಸರಿ ತಂದೆ) ನೋವನ್ನು ತೋಡಿಕೊಂಡರು.
-----ಕೋಟ್ -1 ಗುರುಮಠಕಲ್ ಸಮುದಾಯ ಆಸ್ಪತ್ರೆಯಲ್ಲಿ ಸರಿಯಾಗಿ ಸಮಯಕ್ಕೆ ಅಂಬುಲೆನ್ಸ್ ಲಭ್ಯವಾಗಿಲಿಲ್ಲ. ಅದಕ್ಕಾಗಿ ಗಾಯತ್ರಿ ನವೀನ್ ದಾಸರಿ ಅವರ ನವಜಾತ ಶಿಶುವು ಮೃತಪಟ್ಟಿದ್ದು, ಇದಕ್ಕೆ ಅರೋಗ್ಯ ಅಧಿಕಾರಿಗಳೆ ಕಾರಣ ಕೂಡಲೇ ಅವರನ್ನು ಅಮಾನತು ಮಾಡಬೇಕು.
-ಕೆ.ಬಿ. ವಾಸು ರಾಜ್ಯ ಉಪಾಧ್ಯಕ್ಷ, ಆಲ್ ಇಂಡಿಯ ಬಹುಜನ ಸಮಾಜ ಪಾರ್ಟಿ.------
9ವೈಡಿಆರ್14: ಗುರುಮಠಕಲ್ ಪಟ್ಟಣದ ಸಮುದಾಯ ಆಸ್ಪತ್ರೆ.