ರಾಮದುರ್ಗ: ಹೆತ್ತ ತಾಯಿಯೇ ಹಸುಗೂಸನ್ನು ಮುಳ್ಳಿನ ಪೊದೆಯೊಳಗೆ ಬಿಟ್ಟು ಹೋಗಿರುವ ಅಮಾನವೀಯ ಘಟನೆ ತಾಲೂಕಿನ ಎರಿಕಿತ್ತೂರ ಗ್ರಾಮದ ಸಮೀಪದ ಹಳ್ಳದಲ್ಲಿ ನಡೆದಿದೆ. ಕಿತ್ತೂರು-ನರಗುಂದ ರಸ್ತೆಯ ಬಸವಣಕಟ್ಟಿ ಸೇತುವೆ ಕೆಳಭಾಗದಲ್ಲಿ ಮುಳ್ಳಿನ ಕಂಟಿಗಳ ನಡುವೆ ನವಜಾತ ಗಂಡು ಶಿಶುವನ್ನು ಎಸೆದು ದುಷ್ಕರ್ಮಿ ತಾಯಿ ಪರಾರಿಯಾಗಿದ್ದಾಳೆ. ಮಗು ಅಳುವಿನ ಶಬ್ದ ಕೇಳಿದ ಕುರಿಗಾಯಿಗಳು ಸ್ಥಳಕ್ಕೆ ಧಾವಿಸಿ ಗಂಡು ಶಿಶು ರಕ್ಷಿಸಿದ್ದಾರೆ.

ಬಳಿಕ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ನವಜಾತ ಶಿಶುವನ್ನು ಚಿಕಿತ್ಸೆಗಾಗಿ ಸವದತ್ತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಮಗುವಿನ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸುರೇಬಾನ ಪೊಲೀಸ್ ಠಾಣೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಶಿಶುವನ್ನು ಕಸಕ್ಕೆ ಎಸೆದು ಹೋಗಿರುವ ಮಹಿಳೆಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಮಾಹಿತಿ ಹಾಗೂ ಲಭ್ಯವಿರುವ ಸುಳಿವುಗಳ ಆಧಾರದ ಮೇಲೆ ಪರಿಶೀಲನೆ ಮುಂದುವರಿದಿದೆ. ಪ್ರಕರಣವು ರಾಮದುರ್ಗ ತಾಲೂಕಿನ ಸುರೇಬಾನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಪಿಎಸ್‌ಐ ಗುರುರಾಜ ಕಲಬುರ್ಗಿ ಮುಂದಿನ ತನಿಖೆ ಕೈಗೊಂಡಿದ್ದಾರೆ.