ಸಾರಾಂಶ
ಆರ್‌ಸಿಬಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ ಹಿನ್ನೆಲೆಯಲ್ಲಿ ಮರೆಗುದ್ದಿ ಗ್ರಾಮದ ಪರಮಾನಂದ ಹಾಗೂ ಶ್ರುತಿ ನವಜೋಡಿ ಆರ್‌ಸಿಬಿ ತಂಡದ ಜೆರ್ಸಿ ತೊಟ್ಟು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಜಮಖಂಡಿ: ಆರ್‌ಸಿಬಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ ಹಿನ್ನೆಲೆಯಲ್ಲಿ ಮರೆಗುದ್ದಿ ಗ್ರಾಮದ ಪರಮಾನಂದ ಹಾಗೂ ಶ್ರುತಿ ನವಜೋಡಿ ಆರ್‌ಸಿಬಿ ತಂಡದ ಜೆರ್ಸಿ ತೊಟ್ಟು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಮರೆಗುದ್ದಿ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಪರಮಾನಂದ ಹಾಗೂ ಶ್ರುತಿ ಎನ್ನುವ ನವಜೋಡಿಗಳು ಹಾಗೂ ಅವರ ಸಂಬಂಧಿ ಮತ್ತು ಗೆಳೆಯರೆಲ್ಲರೂ ಆರ್‌ಸಿಬಿ ಜೆರ್ಸಿ ಹಾಕಿಕೊಂಡೆ ಮದುವೆ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ವಧುವರರ ಗೆಳೆಯರು ನವಜೋಡಿಗೆ ಚಾಂಪಿಯನ್ ತಂಡ ಎತ್ತಿ ಹಿಡಿದ ಮಾದರಿ ಕಪ್ ಹಾಗೂ ಹೊಸ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಈ ಮೂಲಕ ಅವರು ಆರ್.ಸಿ.ಬಿ ತಂಡದ ಗೆಲವುವನ್ನ ವಿಭಿನ್ನವಾಗಿ ಸಂಭ್ರಮಿಸಿ ಎಲ್ಲರ ಗಮನ ಸೆಳೆದಿದೆ.;Resize=(128,128))
;Resize=(128,128))
;Resize=(128,128))
;Resize=(128,128))