ಪತ್ರಿಕಾ ವಿತರಕ ಪಾಟೀಲಗೆ 559 ಅಂಕ, ಸನ್ಮಾನ

| Published : May 16 2025, 01:56 AM IST

ಪತ್ರಿಕಾ ವಿತರಕ ಪಾಟೀಲಗೆ 559 ಅಂಕ, ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಪತ್ರಿಕೆ ವಿತರಿಸುತ್ತಾ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಕೊಪ್ಪಳದ ಶಿವನಗೌಡ ಪಾಟೀಲ್ 625ಕ್ಕೆ 559 ಅಂಕಗಳಿಸಿದ್ದಾನೆ. ಹೀಗಾಗಿ ಆತನನ್ನು ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಜಿಲ್ಲಾ ಸಂಘದಿಂದ ಸನ್ಮಾನಿಸಲಾಯಿತು.

ಕೊಪ್ಪಳ:

ಪತ್ರಿಕೆ ವಿತರಿಸುತ್ತಾ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 559 ಅಂಕಗಳಿಸಿ ಶಿವನಗೌಡ ಪಾಟೀಲ್ ಉತ್ತಮ ಸಾಧನೆ ಮಾಡಿದ್ದಾನೆಂದು ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಶಂಕರ್ ಕುದುರಿಮೋತಿ ಹರ್ಷ ವ್ಯಕ್ತಪಡಿಸಿದರು.

ನಗರದ ಶಿವನಗೌಡ ಪಾಟೀಲ ಮನೆಯಲ್ಲಿ ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಜಿಲ್ಲಾ ಸಂಘದಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪತ್ರಿಕೆ ವಿತರಕರು ಕಲಿಕೆಯೊಂದಿಗೆ ಗಳಿಕೆ ಮಾಡುತ್ತಾರೆ, ಮನೆಗೆ ಒಳ್ಳೆ ಮಗ, ಶಾಲೆಗೆ ಆದರ್ಶ ವಿದ್ಯಾರ್ಥಿ, ಸಮಾಜಕ್ಕೆ ಮಾದರಿ ಯುವಕರಾಗುತ್ತಾರೆ. ಒಳನಾಟದಿಂದ ಜನರೊಂದಿಗೆ ಹೇಗೆ ಬೆರೆಯುವುದು, ಜಗತ್ತಿನಲ್ಲಿ ಹೇಗೆ ಬದುಕಬೇಕೆಂಬುದು ಕಲಿಸುವುದೇ ಪತ್ರಿಕಾ ವಿತರಣಾ ವೃತ್ತಿ. ಪತ್ರಿಕೆ ವಿತರಣೆಗೆ ಬರುವವರು ಬಡತನದಲ್ಲಿ ಬದುಕು ಕಟ್ಟಿಕೊಳ್ಳಬೇಕಾಗುತ್ತದೆ. ಆದರೆ, ಇತ ಇಂಥ ಸಾಧನೆ ಮಾಡಿರುವುದು ನಿಜಕ್ಕೂ ಇತರೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ ಎಂದರು.

ಭ್ರಾತೃತ್ವ ಸಮಿತಿ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್ ಮಾತನಾಡಿ, ಶಿವನಗೌಡ ಪಾಟೀಲನ ಮುಂದಿನ ವಿದ್ಯಾಭ್ಯಾಸಕ್ಕೆ ನಮ್ಮೆಲ್ಲರ ಸಹಕಾರವಿದ್ದು ಉನ್ನತ ಶಿಕ್ಷಣ ಕಲಿಯಬೇಕೆಂದು ಆಶಿಸಿದರು.

ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಗವಿರಾಜ್ ಕಂದಾರಿ ಮಾತನಾಡಿ, ಈ ಹಿಂದೆ ಉದಯ ಎಂಬ ಪತ್ರಿಕಾ ವಿತರಕನಿಗೆ ₹ 50000 ಆರ್ಥಿಕ ಸಹಾಯ ನೀಡಲಾಗಿತ್ತು. ಈಗ ಶಿವನಗೌಡಗೆ ಮತ್ತು ಅನೇಕ ಪತ್ರಿಕೆ ವಿತರಕರಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡಲು ದಾನಿಗಳು ಮುಂದೆ ಬರಬೇಕು ಎಂದು ಮನವಿ ಮಾಡಿದರು.

ಈ ವೇಳೆ ಪತ್ರಕರ್ತ ಪ್ರಮೋದ ಕುಲಕರ್ಣಿ, ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್ ಟಪಾಲ್, ಕಾರ್ಯದರ್ಶಿ ಮಹೆಬೂಬ್ ಸಾಬ್ ಜಿವಿಟಿ, ಸಲಹೆಗಾರ ವಿರೂಪಾಕ್ಷಪ್ಪ ಮುರಳಿ, ನಾಗರಾಜ್ ಕಲಾಲ್, ಸದಸ್ಯರಾದ ಮಹೆಬೂಬ್ ಮನಿಯಾರ, ಶಿವಕುಮಾರ್ ಜಿ, ಸೋಮವಾರದ, ಹನುಮಂತ, ಮಂಜುನಾಥ ಹಡಪದ, ಗಂಗಾಧರ ಮಡ್ಡಿ, ಕಿರಣ್ ಮದ್ಲಿ ಉಪಸ್ಥಿತರಿದ್ದರು.