ಸಾರಾಂಶ
ಶಿಗ್ಗಾಂವಿ: ಸಮಾಜದ ಅಂಕುಡೊಂಕು, ನ್ಯೂನತೆಯಲ್ಲಿ ಬದಲಾವಣೆ ತರುವ ಶಕ್ತಿ, ಆಡಳಿತ ಯಂತ್ರದ ನಿರ್ಲಕ್ಷ್ಯ ತಿಳಿಸಿ ಹೇಳುವಂತಹ ಸತ್ಯಾಸತ್ಯತೆಯ ಯುಕ್ತಿ ಪತ್ರಿಕಾ ಮಾಧ್ಯಮಗಳ ಬರಹಕ್ಕಿದೆ ಎಂದು ತಹಸೀಲ್ದಾರ್ ಸಂತೋಷ ಹಿರೇಮಠ ಹೇಳಿದರು.
ತಾಲೂಕಿನ ಗೊಟಗೋಡಿ ರಾಕ್ ಗಾರ್ಡನ್ ರಂಗಮಂದಿರದಲ್ಲಿ ಸೋಮವಾರ ತಾಲೂಕು ಶಿಗ್ಗಾಂವಿ ತಾಲೂಕು ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾದಿನಾಚರಣೆ ಪ್ರಯುಕ್ತ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಪತ್ರಿಕೆಯ ಪ್ರತಿನಿಧಿಗಳೂ ಸಹಿತ ಸಾರ್ವಜನಿಕ ಸೇವೆಯಲ್ಲಿ ಸದಾ ನಮ್ಮ ಜೊತೆಗಿರುತ್ತಾರೆ. ಅವರು ಕಚೇರಿಗೆ ವೈಯಕ್ತಿಕ ಕೆಲಸಗಳಿಗಿಂತ ಸಾರ್ವಜನಿಕ ಕೆಲಸದಲ್ಲಿಯೇ ಹೆಚ್ಚು ಆಯಕ್ತಿ ಹೊಂದಿರುತ್ತಾರೆ. ಸಮಾಜದಲ್ಲಿ ಪರದೇ ಹಿಂದೆ ನಿಂತು ಕೆಲಸ ಮಾಡುತ್ತಿದ್ದಾರೆ. ಎಲ್ಲಿ ಸಮಸ್ಯೆ ಇದೆಯೋ ಅಲ್ಲಿ ಅವರು ನಮಗಿಂತ ಮೊದಲಿಗರಾಗಿ ಸ್ಥಳದಲ್ಲಿರುತ್ತಾರೆ. ಪತ್ರಿಕಾ ದಿನಾಚರಣೆ ಪ್ರಯುಕ್ತ ತಾಲೂಕು ಘಟಕದ ಸದಸ್ಯರನ್ನು ತಾಲೂಕು ಆಡಳಿತ ಪರವಾಗಿ ಸನ್ಮಾನಿಸಿ ಗೌರವಿಸಬೇಕಾಗಿತ್ತು. ಮಾಧ್ಯಮ ಮಿತ್ರರು ಸಮಾಜಮುಖಿ ಕೆಲಸ ಮಾಡುವವರನ್ನು ಇಲ್ಲಿ ಗೌರವಿಸಲಾಗುತ್ತದೆ ಎಂದರು.
ಪತ್ರಿಕಾ ದಿನಾಚರಣೆಯ ಕಾರ್ಯಕ್ರಮವನ್ನು ವೇದಾರಾಣಿ ದಾಸನೂರ ಉದ್ಘಾಟಿಸಿ ಮಾತನಾಡಿದರು.ಡಿವಾಯ್‌ಎಸ್.ಪಿ ಜಿ. ಮಂಜುನಾಥ ಮಾತನಾಡಿ, ೨೧ನೇ ಶತಮಾದಲ್ಲಿ ಡಿಜಿಟಲ್ ಯುಗವಾಗಿರುವುದರಿಂದ ಸುದ್ದಿಯ ಸತ್ಯಾಸತ್ಯತೆ ಕಡಿಮೆ. ವಿಶ್ವಾರ್ಹತೆ ಕೊರತೆ ಇರುತ್ತದೆ. ಆದರೆ ಪತ್ರಿಕೆಗಳು ಕ್ರೆಡಿಬಲ್ ಸೋರ್ಸ್ ಆಗಿವೆ. ಪತ್ರಿಕೆಗಳು ಪ್ರಖರ ಸತ್ಯಾಸತ್ಯತೆ ವರದಿ ನಿಖರತೆಯೂ ನೀಡುತ್ತವೆ. ಮಹತ್ವವೂ ಬೇರೆ. ಪ್ರತಿದಿನ ಬೆಳಗ್ಗೆ ಜಗತ್ತಿನ ಮಾಹಿತಿ ಮನಮುಟ್ಟುವಂತ ಮನೆಗೆ ನೀಡುತ್ತವೆ. ಸತ್ಯಾಸತ್ಯತೆಯ ಮಾಧ್ಯಮಗಳು. ವಿದ್ಯಾಥಿಗಳು ಶಿಕ್ಷಣದ ವಿಚಾರ. ನೇಮಕಾತಿಗಳು, ಸರ್ಕಾರದ ಕಾಯಿದೆಗಳು, ನ್ಯಾಯಾಲಯದ ಸೂಚನೆಗಳು. ಕ್ರೈಂ ಹಾಗೂ ಸ್ಪೋಟ್ಸ್ ಬಗ್ಗೆ ತಿಳಿದುಕೊಳ್ಳುವುದು ಪತ್ರಿಕೆಯ ವರದಿಯಿಂದಲೇ ಎಂದ ಅವರು ನಾವೆಲ್ಲರೂ ಸಮಾಜವನ್ನು ಒಳ್ಳೆಯ ರೀತಿ ನಡೆಸಿಕೊಂಡು ಹೋಗಬೇಕು. ಪತ್ರಿಕೆಗಳಲ್ಲಿ ಬರುವ ಸರ್ಕಾರದ ಸಲಹೆ ಸೂಚನೆಗಳನ್ನು ವಿಶ್ವಾಸದಿಂದ ನಡೆಸಿಕೊಂಡು ಹೋಗಬೇಕು ಎಂದರು.. ಸಮೂದಾಯ ಆರೋಗ್ಯ ಕೇಂದ್ರದ ನಿವೃತ್ತ ಡಾ, ಹನುಮಂತಪ್ಪ ಮಾತನಾಡಿ, ಡಾಕ್ಟರ್‌ಗಳು ಜನರಿಗೆ ನೀಡಿದ ಆರೋಗ್ಯ ಸೇವೆಯನ್ನು ಸನ್ನಡತೆ ಸಮಾಜ ವ್ಯಕ್ತಿಗತವಾಗಿ ಗುರುತಿಸಿರುತ್ತದೆ. ಶಿಗ್ಗಾಂವಿ ವ್ಯಾಪ್ತಿಯ ಜಾನಪದ ವಿಶ್ವವಿದ್ಯಾಲಯ ಹಾಗೂ ರಾಕ್ ಗಾರ್ಡನ್‌ನಂತಹ ಅಪರೂಪದ ಸಾಂಸ್ಕೃತಿಕ ಅಮೂಲ್ಯ ಪ್ರವಾಸಿ ತಾಣವಾಗಿರುವುದರಿಂದಾಗಿ ಊರು ಸಾಂಸ್ಕೃತಿಕ ರಾಯಭಾರಿಯಂತಿದೆ. ಸಾಮಾನ್ಯವಾಗಿ ಅಧಿಕಾರ ವರ್ಗದವರಿಗೆ ಪತ್ರಿಕೆಗಳ ಬಗ್ಗೆ ಭಯದ ವಾತಾವರಣವಿರುತ್ತದೆ. ಅಧಿಕಾರಿ ವರ್ಗದವರ ಜೊತೆಗೆ ಅನ್ಯೋನ್ಯತೆ ಪತ್ರಕರ್ತರು ಇದ್ದಾರೆ. ಸಾರ್ವಜನಿಕ ಸೇವೆಯಲ್ಲಿ ಜನಸಾಮಾನ್ಯರು ಪ್ರೀತಿಯಿಂದ ನೋಡಿದ್ದಾರೆ. ಸರ್ಕಾರಿ ಸೇವೆಯಿಂದ ನಿವೃತ್ತರಾಗಿದ್ದರೂ ಕೆಲಸ ಮಾಡುವ ಉತ್ಸಾಹ ಇನ್ನೂ ಹೆಚ್ಚುತ್ತಿದೆ. ನಿಮ್ಮ ಭಾವನೆಗಳಿಗೆ ಸ್ಫಂದಿಸಿ ಕೆಲಸ ಮಾಡುತ್ತೇನೆ. ಸಮಾಜದ ಸೇವೆಯಲ್ಲಿರುವವರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದ್ದು ಸಂತಸ ತಂದಿದೆ. ಎಂದರು. ಕಾ.ನಿ.ಪ. ರಾಜ್ಯ ಸಂಘಟನಾ ಸದಸ್ಯ ಪಿಎಂ ಸತ್ಯಪ್ಪನವರ ಪ್ರಾಸ್ಥಾವಿಕ ಮಾತನಾಡಿ. ಇಬ್ಬರು ಸದಸ್ಯರಿದ್ದ ಸಂಘ ಇಪ್ಪತ್ತು ಜನರ ಕುಟುಂಬವಾಗಿ ಬೆಳೆದಿದೆ. ಸಮಾಜಮುಖಿಯಾಗಿ ಸಮರ್ಪಕ ಸಾಮರ್ಥದ ಕೆಲಸ ಮಾಡಲು ಬೆಳೆದು ನಿಂತಿದೆ. ಸಾಕಷ್ಟು ಪತ್ರಿಕಾ ವಿತರಕರು ವರದಿಗಾರರಾಗಿ ಸೇವೆಗೆ ನಿಂತಿದ್ದಾರೆ. ಸಂಘದ ಸದಸ್ಯರಿಗಾಗಿ ಸ್ವಂತ ಕಟ್ಟಡ ಕಟ್ಟಲು ಪುರಸಭೆ ನಿವೇಶನ ಮಂಜೂರಾತಿ ನೀಡಿದ್ದು ನಮ್ಮದೇ ಕ್ಷೇತ್ರದ ಶಾಸಕರು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ. ಸಾಕಷ್ಟು ಇಲಾಖೆಯ ಅಧಿಕಾರಿಗಳನ್ನು ನಿರ್ಲಕ್ಷದ ವಿಚಾರಕ್ಕೆ ಟೀಕೆ ಟಿಪ್ಪಣಿ ಪತ್ರಿಕಾ ವರಧಿ ಮಾಡಿದುಂಟು ಇದು ಪತ್ರಿಕೆಯ ಸಾಮಾಜಿಕ ಜವಾಬ್ದಾರಿ ಕೆಲಸದ ವಿಚಾರ ಹೌದು ಎಂದರು.
ಶಿಗ್ಗಾವಿ ಪಟ್ಟಣದ ವಿರಕ್ತಮಠದ ಸಂಗನಬಸವಶ್ರೀಗಳ ಸಾನೀಧ್ಯದಲ್ಲಿ ನಡೆದ ಹಾಗೂ ಪತ್ರಿಕಾದಿನಾಚರಣೆ ಪ್ರಯುಕ್ತ ಸನ್ಮಾನ ಸಮಾರಂಭದಲ್ಲಿ ನಿವೃತ್ತ ಡಾ,ಹನುಮಂತಪ್ಪ ಪಿಎಚ್ . ಶ್ರೇಷ್ಠ ವೈಧ್ಯ ರಾಜ್ಯ ಪ್ರಶಸ್ತಿ ವಿಜೇಯಿತರಾದ.ಡಾ, ಮಹೇಶ ಜಗದವರ. ಡಾ.ರಾಜೇಶ್ವರಿ ಚನ್ನಗೌಡ್ರ. ತಹಶೀಲ್ದಾರ ಸಂತೋಷ ಹಿರೇಮಠ ರಾಜೋತ್ಸವ ಪ್ರಶಸ್ತಿ ವಿಜೇಯಿತೆ ವೇಧಾರಾಣಿ ದಾಸನೂರ ಹಾಗೂ ಡಿಎಸ್.ಪಿ ಮಂಜುನಾಥ ವೇದಿಕೆಯಲ್ಲಿ ಅವರನ್ನು ಸನ್ಮಾನಿಸಲಾಯತು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪರಮೇಶ ಲಮಾಣಿ ಅಧ್ಯಕ್ಷತೆಯಲ್ಲಿ ಪತ್ರಕರ್ತರಾದ ಎಂ.ವಿ. ಗಾಡದ, ಅತಿಥಿಗಳನ್ನು ಸ್ವಾಗತಿಸಿದರು. ಬಿ.ಎಸ್. ಹಿರೇಮಠ ಸನ್ಮಾನಿತರ ಪರಿಚಯ ಮಾಡಿದರು. ಕೈಗಾರಿಕಾ ತರಬೇತಿ ಸಂಸ್ಥೆಯ ಉಪನ್ಯಾಸಕ ಶಶಿಕಾಂತ ರಾಠೋಡ ಕಾರ್ಯಕ್ರಮ ನಿರೂಪಿಸಿದರು.