ಸಾರಾಂಶ
ಬಂಗಾರದ ಅಂಗಡಿಯಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶನ ಮುಂದಿಟ್ಟಿದ್ದ ದೀಪ ಉರುಳಿ ಬಿದ್ದು ಅಂಗಡಿಗೆ ಬೆಂಕಿ ಹತ್ತಿ ಊರಿದ ಘಟನೆ ಮಂಗಳವಾರ ಪಟ್ಟಣದಲ್ಲಿ ನಡೆದಿದೆ.
ರಬಕವಿ-ಬನಹಟ್ಟಿ: ಬಂಗಾರದ ಅಂಗಡಿಯಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶನ ಮುಂದಿಟ್ಟಿದ್ದ ದೀಪ ಉರುಳಿ ಬಿದ್ದು ಅಂಗಡಿಗೆ ಬೆಂಕಿ ಹತ್ತಿ ಊರಿದ ಘಟನೆ ಮಂಗಳವಾರ ಪಟ್ಟಣದಲ್ಲಿ ನಡೆದಿದೆ.
ರಬಕವಿ ಹೊಸಪೇಟ ಲೈನ್‌ನಲ್ಲಿರುವ ಗುರು ಬಾಪುರಿ ಎಂಬುವವರಿಗೆ ಸೇರಿದ ಬಂಗಾರದ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ದೀಪ ಉರುಳಿ ಟಿವಿಗೆ ಹೊತ್ತಿಕೊಂಡು ಟಿವಿ ಸುಟ್ಟು ಭಸ್ಮವಾಗಿದೆ. ಆದರೆ, ಯಾವುದೇ ಜೀವಹಾನಿಯಾಗಿಲ್ಲ. ಬೆಂಕಿ ಅನಾಹುತದಿಂದ ಆಗಿರುವ ಹಾನಿ ಪ್ರಮಾಣದ ಬಗ್ಗೆ ಇನ್ನೂ ತಿಳಿದು ಬಂದಿಲ್ಲ. ಬೆಂಕಿ ಹತ್ತಿದ ಮಾಹಿತಿ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ತೆರದಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.