ಮುಂದಿನ ವರ್ಷ ದಂಡಿಮಾರಮ್ಮ ತೆಪ್ಪೋತ್ಸವ

| Published : Aug 08 2025, 01:00 AM IST

ಮುಂದಿನ ವರ್ಷ ದಂಡಿಮಾರಮ್ಮ ತೆಪ್ಪೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಮುಂದಿನ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಚೋಳೇನಹಳ್ಳಿ ಕೆರೆಯಲ್ಲಿ ಇತಿಹಾಸ ಪ್ರಸಿದ್ಧ ಮಧುಗಿರಿ ಶ್ರೀದಂಡಿಮಾರಮ್ಮ ತೆಪ್ಪೋತ್ಸವ ಧಾರ್ಮಿಕ ಕಾರ್ಯಕ್ರಮ ಆಚರಿಸಲಿದ್ದು, ಅಷ್ಟರೊಳಗೆ ಕೆರೆಯ ಅಂಗಳದಲ್ಲಿ ವೇದಿಕೆ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಮುಂದಿನ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಚೋಳೇನಹಳ್ಳಿ ಕೆರೆಯಲ್ಲಿ ಇತಿಹಾಸ ಪ್ರಸಿದ್ಧ ಮಧುಗಿರಿ ಶ್ರೀದಂಡಿಮಾರಮ್ಮ ತೆಪ್ಪೋತ್ಸವ ಧಾರ್ಮಿಕ ಕಾರ್ಯಕ್ರಮ ಆಚರಿಸಲಿದ್ದು, ಅಷ್ಟರೊಳಗೆ ಕೆರೆಯ ಅಂಗಳದಲ್ಲಿ ವೇದಿಕೆ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಸೂಚನೆ ನೀಡಿದರು.

ಇಲ್ಲಿನ ತಾಪಂ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಧಾರ್ಮಿಕ ಆಚರಣೆ ಆಚರಿಸುವುದರಿಂದ ಮನುಷ್ಯನಿಗೆ ಶಾಂತಿ,ನೆಮ್ಮದಿ ದೊರೆಯುವ ಜೊತೆಗೆ ಲೋಕ ಕಲ್ಯಾಣರ್ಥವಾಗಿ ದೇವರ ಉತ್ಸವಗಳು ಸಹಕಾರಿ ಎಂದರು.

ತಾಲೂಕಿಗೆ ಜಿಟಿಟಿಸಿ ಕಾಲೇಜು ಮಂಜೂರಾಗಿದ್ದು , ಕಾಲೇಜು ಕಟ್ಟಡ ನಿರ್ಮಾಣಕ್ಕೆ ರಸ್ತೆ ಬದಿ ಸರ್ಕಾರಿ ನಿವೇಶನ ಹುಡುಕುವಂತೆ ಅಧಿಕಾರಿಗಳಿಗೆ ಸಚಿವ ರಾಜಣ್ಣ ಸೂಚಿಸಿದರು. ಖಾಸಗಿ ಜಮೀನುಗಳನ್ನು ಒತ್ತುವರಿ ಮಾಡಲು ಬಿಟ್ಟು 40 ವರ್ಷಗಳ ನಂತರ ಈಗ ಓನರ್‌ ಶಿಪ್ ಕೊಡಿ ,ಪರಿಹಾರ ಕೊಡಿ ಎಂದರೆ ಅವರಿಗೆ ಹಕ್ಕಿಲ್ಲ, ಗ್ರಾಪಂ, ತಾಪಂ ಗಳಿಗೆ ಜಮೀನು ನೀಡಿ ಗ್ರಾಪಂ, ತಾಪಂನಿಂದ ನಿವೇಶನಗಳು ವಿತರಣೆಯಾಗಿದ್ದರೆ ಮಾತ್ರ ಅವರಿಗೆ ಹಕ್ಕು ಪತ್ರ ನೀಡಬಹುದು. ಆದರೆ ಖಾಸಗಿ ನಿವೇಶನಗಳಿಗೆ ಹಕ್ಕು ಪತ್ರ ನೀಡಲು ಬರುವುದಿಲ್ಲ ಎಂದು ಜಿಪಂ,ಸಿಇಒ ಪ್ರಭು ಸಭೆಗೆ ತಿಳಿಸಿದರು.

ಜಿಲ್ಲೆಯಲ್ಲಿ 6.5ಲಕ್ಷ ಇ -ಸ್ವತ್ತು ನೀಡಲು ಬಾಕಿ ಇದೆ . ಇ ಸ್ವತ್ತು ಅಂದೋಲನ ಪ್ರಾರಂಭಿಸಿ ಎಲ್ಲರಿಗೂ ಇ-ಸ್ವತ್ತು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಇಓ ತಿಳಿಸಿದರು.

ಜಮೀನುಗಳ ದಾಖಲೆಗಳನ್ನು ಪರಿಶೀಲಿಸಿದರೆ ಹಿಂದಿನ ತಲೆ ಮಾರುಗಳ ವಾರಸುದಾರರ ಹೆಸರು ಬರಲಿದ್ದು,ಈ ಬಗ್ಗೆ ಅಧಿಕಾರಿಗಳು ಯಾವ ಕ್ರಮ ಕೈಗೊಂಡಿದ್ದೀರಾ ಎಂದು ಮಾಹಿತಿ ಕೇಳಿದ ಸಚಿವರು, ಗ್ರಾಮಸ್ಥರಿಗೆ ಏನೂ ತೊಂದರೆಯಾಗಿದೆ ಎಂಬುದನ್ನು ಆಯಾ ಭಾಗದ ಜನಪ್ರತಿನಿಧಿಗಳು ಅಧಿಕಾರಿಗಳ ಗಮನಕ್ಕೆ ತಂದು ರೈತರ ಜಮೀನುಗಳ ಸಮಸ್ಯೆ ಬಗೆಹರಿಸಬಹುದು ಎಂದರು.

ತಾಲೂಕಿನ ಕೆರೆಗಳಿಗೆ ನೀರುಣಿಸುವ ಎತ್ತಿನ ಹೊಳೆ ಯೋಜನೆ ಆದಷ್ಟು ಬೇಗೆ ಕಾಮಗಾರಿ ಪೂರ್ಣಗೊಳಿಸಿ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಮಳೆ ಬಂದರೆ ಮಕ್ಕಳು ಕೆಸರಿನಲ್ಲಿ ಓಡಾಡುವ ಸ್ಥಿತಿ ಇದೆ. ಅದನ್ನು ರಪೇರಿ ಮಾಡಲು ಉತ್ತಮ ಸಿಸಿ ರಸ್ತೆಗೆ ಪ್ರಸ್ತಾವನೆ ಸಲ್ಲಿಸಿ ಎಂದು ಪಿಡಬ್ಲಯೂಡಿ ಇಲಾಖೆ ಇಇ ಹನುಮಂತರಾವ್‌ ಅವರಿಗೆ ಸೂಚಿಸಿದರು.

ತಾಲೂಕು ಮಟ್ಟದ ಅಧಿಕಾರಿಗಳು ಕೇದ್ರ ಸ್ಥಾನದಲ್ಲಿರಬೇಕು. ಮೀಟಿಂಗೆ ಇದೆ ಎಂದು ಸಬೂಬು ಹೇಳಬಾರದು. ಅಧಿವೇಶನ ಮುಗಿದ ನಂತರ ಸರ್ಕಾರಿ ಕಚೇರಿಗಳಿಗೆ ಮತ್ತು ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡುವುದಾಗಿ ತಿಳಿಸಿ, ಕೇಂದ್ರ ಸ್ಥಾನದಲ್ಲಿರುವ ಅಧಿಕಾರಿಗಳ ವಿವರ ನೀಡುವಂತೆ ತಾಪಂ ಇಒಗೆ ಸೂಚಿಸಿದರು.

ಅಮೃತ್‌ 2 ಯೋಜನೆಯ ಕಾಮಗಾರಿ ವ್ಯಾಪ್ತಿಗೆ ಕೆಲ ವಾರ್ಡ್‌ಗಳಲ್ಲಿ ಪೈಪ್ ಲೈನ್‌ ಅಳವಡಿಸಿಲ್ಲ ಎಂದು ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್‌ ಸಚಿವರ ಗಮನಕ್ಕೆ ತಂದಾಗ, ಸಂಬಂಧಪಟ್ಟ ಎಂಜಿನಿಯರ್ ಗಳ ಬಳಿ ಕಾರಣ ಕೇಳಿದಾಗ ಅನುದಾನ ಕೊರತೆಯ ಮಾಹಿತಿ ನೀಡಿದರು. ಇನ್ನೂ ಎಷ್ಟು ಅನುದಾನ ಬೇಕಾಗುತ್ತದೆ ಎಂದು ಸಚಿವರು ಕೇಳಿದಾಗ 25 ಕೋಟಿ ಅನುದಾನ ಬೇಕಾಗಬಹುದು ಎಂದು ಎಂಜಿನಿಯರ್‌ ಮಾಹಿತಿ ನೀಡಿದರು.ಇದಕ್ಕೆ ಪ್ರಪೋಸಲ್ ಕಳುಹಿಸಿ ಮಂಜೂರು ಮಾಡಿಸಿಕೊಡುವುದಾಗಿ ಸಚಿವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್‌, ,ಅಪರ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ,ಎಸಿ ಗೋಟೂರು ಶಿವಪ್ಪ, ತಹಸೀಲ್ದಾರ್‌ ಶ್ರೀನಿವಾಸ್‌,ಇಒ ಲಕ್ಷ್ಮಣ್‌, ತುಮುಲ್‌ ನಿರ್ದೇಶಕ ಬಿ.ನಾಗೇಶ್‌ ಬಾಬು, ಟಿಎಪಿಸಿಎಂಎಸ್ಅಧ್ಯಕ್ಷ ಎಂ.ಎಸ್‌.ಮಲ್ಲಿಕಾರ್ಜುನಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೂವಿನ ಚೌಡಪ್ಪ, ಮುಖಂಡರಾದ ಭರಾಪ್ಪ ಗಿರಿಜಮ್ಮ,ಸೇರಿದಂತೆ ವಿವಿಧ ಸಮಿತಿಯ ಪದಾಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.