ಸಾರಾಂಶ
ಕನಕಪುರ: ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ಹೆಸರಿಗೆ ತಕ್ಕಂತೆ ಸಮಾಜಮುಖಿ, ರೈತರ ಪರ ಒಳ್ಳೆಯ ಕೆಲಸ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ರವಿ ತಿಳಿಸಿದರು.
ಕನಕಪುರ: ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ಹೆಸರಿಗೆ ತಕ್ಕಂತೆ ಸಮಾಜಮುಖಿ, ರೈತರ ಪರ ಒಳ್ಳೆಯ ಕೆಲಸ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ರವಿ ತಿಳಿಸಿದರು.
ನಗರದಲ್ಲಿ ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್‌ನ 2025ರ ದೈನಂದಿನ ಕ್ಯಾಲೆಂಡರ್ ಅನ್ನು ಶನಿವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ಕೃಷಿ ಮಾಡುವ ರೈತರಿಗೆ ಇಂದು ಹೆಣ್ಣು ಕೊಡುತ್ತಿಲ್ಲ. ದೇಶಕ್ಕೆ ಆಹಾರ ಪದಾರ್ಥ ಬೆಳೆದುಕೊಡಲು ರೈತ ಬೇಕು. ರೈತ ಜೀವನ ರೂಪಿಸಿಕೊಳ್ಳಲು ಹೆಣ್ಣು ಕೊಡದಿರುವುದು ದುರದೃಷ್ಟಕರ. ರೈತರ ಬಗೆಗಿನ ಅಭಿಪ್ರಾಯಗಳು ಬದಲಾಗಬೇಕು. ರೈತರಿಗೂ ಒಳ್ಳೆಯ ಜೀವನ ಸಿಗಬೇಕು. ಎಲ್ಲಾ ಉದ್ಯಮಗಳಂತೆ ಕೃಷಿ ಉದ್ಯಮವಾಗಿ ಅಭಿವೃದ್ಧಿಯಾಗಬೇಕು ಎಂದರು.ಟ್ರಸ್ಟ್ ವತಿಯಿಂದ ಒಕ್ಕಲಿಗ ಸಮುದಾಯದ ವಧು-ವರರ ವೇದಿಕೆಯನ್ನು ಮಾಡಿದ್ದು ರೈತರ ಮಕ್ಕಳಿಗೆ ಹೆಣ್ಣು ಗಂಡು ಸಿಗುವಂತೆ ಒಳ್ಳೆಯ ಪ್ರಯತ್ನ ಮಾಡಿದ್ದಾರೆ. ಸಮುದಾಯದ ಜನತೆ ನೋಂದಣಿ ಆಗುವ ಮೂಲಕ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.ಟ್ರಸ್ಟ್ ವತಿಯಿಂದ ಈ ಬಾರಿ ಒಳ್ಳೆಯ ಗುಣಮಟ್ಟದೊಂದಿಗೆ, ಜನರಿಗೆ ಉಪಯುಕ್ತ ಆಗುವ ರೀತಿಯಲ್ಲಿ ಉತ್ತಮವಾಗಿ ಕ್ಯಾಲೆಂಡರ್ ಅನ್ನು ಮಾಡಿಸಿದ್ದಾರೆ. ಸಮುದಾಯದ ಜನತೆ ಟ್ರಸ್ಟ್ ಜೊತೆಗೆ ಕೈಜೋಡಿಸಿ ಕೃಷ್ಣ ಬೆಳವಣಿಗೆಗೆ ಸಹಕರಿಸುವಂತೆ ಮನವಿ ಮಾಡಿದರು.
ಈ ವೇಳೆ ಬಮೂಲ್ ನಿರ್ದೇಶಕ ಹರೀಶ್ ಕುಮಾರ್, ಟ್ರಸ್ಟ್‌ನ ತಾಲೂಕು ಅಧ್ಯಕ್ಷ ಗಬ್ಬಾಡಿ ಕಾಡೇಗೌಡ, ಗೌರವಾಧ್ಯಕ್ಷ ಚಿಕ್ಕೆಂಪೇಗೌಡ, ಉಪಾಧ್ಯಕ್ಷ ನಾರಾಯಣ, ಕಾರ್ಯದರ್ಶಿ ಶಿವಲಿಂಗಯ್ಯ, ಖಜಾಂಚಿ ಕಾಂತರಾಜು, ಪದಾಧಿಕಾರಿಗಳಾದ ಕೂಗಿ ಗಿರಿಯಪ್ಪ, ಬಿಎಸ್ಎನ್ಎಲ್ ನಾಗರಾಜು, ಯು.ವಿ.ಸ್ವಾಮಿ ಗೌಡ, ಚಿಕ್ಕರಂಗಯ್ಯ, ಕೆ.ಸಿ. ರಮೇಶ್, ಟಿ.ಎಂ. ರಾಮಯ್ಯ, ಬೈರೇಗೌಡ, ಲಿಂಗೇಗೌಡ, ಶಂಕರ್ ಗೌಡ ಉಪಸ್ಥಿತರಿದ್ದರು.ಕೆ ಕೆ ಪಿ ಸುದ್ದಿ 03:
ವಿಧಾನ ಪರಿಷತ್ ಸದಸ್ಯ ಎಸ್.ರವಿ ನೇಗಿಲಯೋಗಿ ಟ್ರಸ್ಟ್ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಟ್ರಸ್ಟ್ ಪದಾಧಿಕಾರಿಗಳು ಉಪಸ್ಥತರಿದ್ದರು.