ಮಡಿವಂತಿಕೆ ಕಾಲದಲ್ಲಿ ಬಂಡಾಯದ ಕಹಳೆ ಮೊಳಗಿಸಿದ ನಿಜಶರಣ: ಕೆ.ನರಸಪ್ಪ

| Published : Jan 22 2025, 12:33 AM IST

ಮಡಿವಂತಿಕೆ ಕಾಲದಲ್ಲಿ ಬಂಡಾಯದ ಕಹಳೆ ಮೊಳಗಿಸಿದ ನಿಜಶರಣ: ಕೆ.ನರಸಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಕೂಡ್ಲಿಗಿ ತಾಲೂಕು ಆಡಳಿತ ತಹಸೀಲ್ದಾರ್ ಕಚೇರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು.

ಕೂಡ್ಲಿಗಿ: ಮಡಿವಂತಿಕೆಯ ಕಾಲದಲ್ಲಿಯೇ ತನ್ನ ಚೂಪಾದ ವಚನಗಳ ಮೂಲಕ ಬಂಡಾಯದ ಕಹಳೆ ಮೊಳಗಿಸಿದ ಅಂಬಿಗರ ಚೌಡಯ್ಯ ಅನುಭವ ಮಂಟಪದಲ್ಲಿಯೇ ಏಕೈಕ ನಿಜಶರಣರಾಗಿದ್ದು, ಇಂತಹ ನೇರ-ನಿಷ್ಠುರವಾದಿ ಶರಣರ ವಚನಗಳು ಸಮಾಜಕ್ಕೆ ಪ್ರಸ್ತುತವಾಗಿವೆ ಎಂದು ಕೂಡ್ಲಿಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ನರಸಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಗಳವಾರ ತಾಲೂಕು ಆಡಳಿತ ತಹಸೀಲ್ದಾರ್ ಕಚೇರಿಯಲ್ಲಿ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದರು.

ಕೂಡ್ಲಿಗಿ ತಾಲೂಕು ಗಂಗಾಮತಸ್ಥರ ಸಂಘದ ಅಧ್ಯಕ್ಷ ಗುಡೇಕೋಟೆ ಹುಲಿರಾಜಪ್ಪ ಮಾತನಾಡಿ, ಅಂಬಿಗರಿಗೆ ಮಹಾಭಾರತದಿಂದ ಇತಿಹಾಸವಿದ್ದು, ಗಂಗಾಪುತ್ರ ಭೀಷ್ಮನಿಂದ ಹಿಡಿದು ಮಹಾಭಾರತ ಬರೆದ ವೇದವ್ಯಾಸ, ನಿಜಶರಣ ಅಂಬಿಗರ ಚೌಡಯ್ಯ ಹೀಗೆ ನೂರಾರು ಶರಣರು, ಸಾಧಕರು ಈ ಸಮಾಜದಲ್ಲಿ ಜನಿಸಿದ್ದಾರೆ. ಆದರೂ ಈ ಸಮಾಜ ಎಸ್ಟಿ ಸೇರ್ಪಡೆಯಿಂದ ವಂಚಿತವಾಗಿದೆ ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಎಂ. ರೇಣುಕಾ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೆಂಕಟೇಶ್, ಗ್ರೇಡ್ 2 ತಹಸೀಲ್ದಾರ್ ನೇತ್ರಾವತಿ, ಕೂಡ್ಲಿಗಿ ತಾಲೂಕು ಗಂಗಾಮತ ಸಂಘದ ಪ್ರಧಾನ ಕಾರ್ಯದರ್ಶಿ ಗುಡೇಕೋಟೆ, ಕುಬೇರ, ಗಂಗಾಮತ ಸಮಾಜದ ಮುಖಂಡರಾದ ಗುಡೇಕೋಟೆ ಬೇಕರಿ ಸುರೇಶ್, ಶ್ರೀನಿವಾಸ್, ಉಮೇಶ್, ಕೂಡ್ಲಿಗಿ ಪ್ರಕಾಶ್ ಮುಂತಾದವರು ಹಾಜರಿದ್ದರು. ಜಾತಿ ವ್ಯವಸ್ಥೆ ವಿರುದ್ಧ ಚಾಟಿಬೀಸಿದ ನಿಜಶರಣ ಚೌಡಯ್ಯ

ಕೂಡ್ಲಿಗಿ: 12ನೇ ಶತಮಾನದಲ್ಲಿ ಬಸವಾದಿ ಶರಣದಲ್ಲಿ ನಿಜಶರಣರೆನಿಸಿಕೊಂಡವರು ಅಂಬಿಗರ ಚೌಡಯ್ಯ ಮಾತ್ರ. ಚಾಟಿ ಏಟಿನಂತಹ ಹರಿತ ವಚನಗಳ ಮೂಲಕ ಜಾತಿ ವ್ಯವಸ್ಥೆ, ಖಂಡಿಸಿದ್ದರಿಂದ ನಿಜಶರಣ ಎಂದು ಕರೆದರು ಎಂದು ಕೂಡ್ಲಿಗಿ ತಾಲೂಕು ಗಂಗಾಮತ ಸಂಘದ ಪ್ರಧಾನ ಕಾರ್ಯದರ್ಶಿ ಗುಡೇಕೋಟೆ ಕುಬೇರ ತಿಳಿಸಿದರು.ಮಂಗಳವಾರ ತಾಲೂಕಿನ ಗುಡೇಕೋಟೆಯ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಗುಡೇಕೋಟೆ ಗಂಗಾಮತಸ್ಥರು ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ನಿಮಿತ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಕೂಡ್ಲಿಗಿ ತಾಲೂಕು ಗಂಗಾಮತಸ್ಥರ ಸಂಘದ ಅಧ್ಯಕ್ಷ ಗುಡೇಕೋಟೆ ಹುಲಿರಾಜಪ್ಪ ಮಾತನಾಡಿ, ಗಂಗಾಮತ ಸಮಾಜ ದೇಶದ ಹಿಂದುಳಿದ ವರ್ಗಗಗಳಲ್ಲಿ 2ನೇ ಅತೀ ದೊಡ್ಡ ಜನಸಂಖ್ಯೆ ಹೊಂದಿದ್ದು, ರಾಜಕೀಯ ಹಾಗೂ ಸಂಘಟನೆಯ ಕೊರತೆಯಿಂದ ಮುಖ್ಯವಾಹಿನಿಯಿಂದ ದೂರ ಉಳಿದಿದೆ ಎಂದರು.

ಈ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕು ಗಂಗಾಮತಸ್ಥ ಸಮಾಜದ ಮಹಿಳಾ ಮುಖಂಡರಾದ ಅನಿತಾ ಕುಬೇರಪ್ಪ, ಕಾರ್ಯದರ್ಶಿ ಕೂಡ್ಲಿಗಿ ಪ್ರಕಾಶ್, ಗುಡೇಕೋಟೆಯ ಶಿವಣ್ಣ, ಬೇಕರಿ ಸುರೇಶ್, ಶ್ರೀನಿವಾಸ್ ಹಾಗೂ ಗುಡೇಕೋಟೆಯ ಗಂಗಾಮತಸ್ಥ ಸಮಾಜದ ಬಾಂಧವರು ಹಾಜರಿದ್ದರು.