ಸಾರಾಂಶ
ಮುಂದಿನ 2029ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದು, ನನಗೆ ಮಧುಗಿರಿ- ಕೊರಟಗೆರೆ ಕ್ಷೇತ್ರದ ಜವಾಬ್ದಾರಿ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ -ವೇಣುಗೋಪಾಲ್
ದಾಬಸ್‌ಪೇಟೆ : ಮುಂಬರುವ 2029ಕ್ಕೆ ಜೆಡಿಎಸ್ ವರಿಷ್ಠ ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದಾರೆ, ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ 10 ಸಾವಿರ ಮತಗಳ ಅಂತರದಿಂದ ವಿಜಯಶಾಲಿಯಾಗುವುದು ನಿಶ್ಚಿತ ಎಂದು ಮಾಜಿ ಅರಣ್ಯ ಸಚಿವ ದಿ.ಸಿ.ಚನ್ನಿಗಪ್ಪ ಪುತ್ರ, ಜಿಪಂ ಮಾಜಿ ಸದಸ್ಯ ಡಿ.ಸಿ.ವೇಣುಗೋಪಾಲ್ ರಾಜಕೀಯ ಭವಿಷ್ಯ ನುಡಿದರು.
ತ್ಯಾಮಗೊಂಡ್ಲು ಹೋಬಳಿಯ ಬೈರನಾಯ್ಕನಹಳ್ಳಿಯ ತಮ್ಮ ಶ್ರೀ ಶಿವಕುಮಾರ ಸ್ವಾಮೀಜಿ ತಾಂತ್ರಿಕ ಕಾಲೇಜಿನಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂದಿನ 2029ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದು, ನನಗೆ ಮಧುಗಿರಿ- ಕೊರಟಗೆರೆ ಕ್ಷೇತ್ರದ ಜವಾಬ್ದಾರಿ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ, ನನ್ನ ತಂದೆ, ಮಾಜಿ ಅರಣ್ಯ ಸಚಿವ ಸಿ.ಚನ್ನಿಗಪ್ಪನವರು ಸಹ ಕೊರಟಗೆರೆ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಶಾಸಕರಾಗಿ ಆಯ್ಕೆಯಾಗಿ, ನಂತರ ಅರಣ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಾಗಿದ್ದರು, ಅವರ ಹಾದಿಯಲ್ಲೇ ನಾನು ನಡೆಯುತ್ತೇನೆ ಎಂದರು.
ತ್ರಿವಿಧ ದಾಸೋಹ: ನಮ್ಮ ತಂದೆಯವರಿಗೆ ಶ್ರೀ ಸಿದ್ಧಗಂಗಾ ಶಿಕ್ಷಣ ಸಂಸ್ಥೆಯ ತ್ರಿವಿಧ ದಾಸೋಹ ಮಾದರಿ, ಆದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ತಾಂತ್ರಿಕ ಕಾಲೇಜು ತೆರೆದಿದ್ದಾರೆ, ಈ ಕಾಲೇಜು ಇದೀಗ 16 ವರ್ಷ ಪೂರೈಸಿದ್ದು ಸಂತಸದ ವಿಚಾರ ಎಂದರು.
ಶಿಕ್ಷಣ ತಜ್ಞ ಡಾ.ಬಿ.ವಿ.ರವಿಶಂಕರ್, ಹಿರಿಯ ಪ್ರಾಂಶುಪಾಲ ಅಣ್ಣಯ್ಯ, ಎಸ್.ಎಂ.ಸಿ.ಇ ಪ್ರಾಂಶುಪಾಲ ಡಾ.ರಮೇಶ್, ಮಹಮ್ಮದ್ ಹಸೀಬುಲ್ಲಾ, ಸಿಇಒ ರಾಹುಲ್, ಯಲಹಂಕ ಮಹಾನಗರ ಪಾಲಿಕೆ ಮಾಜಿ ಅಧ್ಯಕ್ಷ ನಾಗಪ್ಪ, ಗುರುಸ್ವಾಮಿ, ಬಮೂಲ್ ನ ಮಾಜಿ ನಿರ್ದೇಶಕ ಬಚ್ಚೇಗೌಡ, ಸಾಯಿಬಾಬಾ, ಗ್ರಾಪಂ ಸದಸ್ಯ ಸಿ.ರಾಜಣ್ಣ, ಯಲಹಂಕ ಹಿರಿಯ ನಾಗರಿಕರ ವೇದಿಕೆ ಪದಾಧಿಕಾರಿಗಳು, ಜೆಡಿಎಸ್ ಮುಖಂಡರಾದ ಭಾರತೀಪುರ ಮೋಹನ್ ಕುಮಾರ್, ಬೈರೇಶ್, ಬಿ.ಪಿ.ಶ್ರೀನಿವಾಸ್, ಮರಳಕುಂಟೆ ನಾಗಭೂಷಣ್, ಅಲ್ಪಯ್ಯನಪಾಳ್ಯ ವೆಂಕಟೇಶ್, ಕಾಲೇಜಿನ ಬೋಧಕ- ಬೋಧಕೇತರ ಸಿಬ್ಬಂದಿ ಹಾಜರಿದ್ದರು.---------