ಸಾರಾಂಶ
ಅಥಣಿ ವಕೀಲರ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ನಿಂಗಪ್ಪ ಖೋಕಲೆ ಚುನಾಯಿತರಾದರು.
ಕನ್ನಡಪ್ರಭ ವಾರ್ತೆ ಅಥಣಿ
ಇಲ್ಲಿನ ವಕೀಲರ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ನಡೆಯಿತು. ನಿಂಗಪ್ಪ ಖೋಕಲೆ (ಅಧ್ಯಕ್ಷ), ಬಸವರಾಜ ಡಂಗಿ (ಉಪಾಧ್ಯಕ್ಷ), ಎಂ.ಆರ್.ಯಕ್ಕಂಚಿ (ಕಾರ್ಯದರ್ಶಿ) ಆಗಿ ಆದರು. ಆರ್.ಪಿ.ನಲವಡೆ (ಗ್ರಂಥಾಲಯ ಕಾರ್ಯದರ್ಶಿ), ಪಿ.ಎಮ್.ಕಾಂಬಳೆ, ಎಲ್.ಎಸ್.ಮಾಂಗ, ಪಿ.ಆರ್.ಪವಾರ, ಎ.ಪಿ.ಭೋಸಲೆ, ಬಿ.ಎಸ್.ಕಾಂಬಳೆ (ಆಡಳಿತ ಮಂಡಳಿಯ ಸದಸ್ಯರು) ಆಯ್ಕೆಯಾಗಿದರು. ಹಿರಿಯ, ಕಿರಿಯ ವಕೀಲರು ನಿಂಗಪ್ಪ ಖೋಕಲೆ ಸೇರಿದಂತೆ ಪದಾಧಿಕಾರಿಗಳನ್ನು ಸತ್ಕರಿಸಲಾಯಿತು.ನೂತನ ಅಧ್ಯಕ್ಷ ನಿಂಗಪ್ಪ ಖೋಕಲೆ ಮಾತನಾಡಿ, ಈಗಿರುವ ನ್ಯಾಯಾಲಯ ಸಂಕೀರ್ಣ ಸಾಕಾಗುತ್ತಿಲ್ಲ. ಹೀಗಾಗಿ ವಕೀಲರ ಬೇಡಿಕೆಯಂತೆ ಉಚ್ಚ ನ್ಯಾಯಾಲಯದ ಮೂಲಕ ₹36 ಕೋಟಿ ಅನುದಾನ ನೀಡಬೇಕು ಎಂದು ಪ್ರಸ್ತಾವನೆ ಸಲ್ಲಿಸಲಾಗಿದ್ದು, ನನ್ನ ಅಧಿಕಾರವಧಿಯಲ್ಲಿ ಸರ್ಕಾರದಿಂದ ಅನುದಾನ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಮ್ಮ ಸಂಘದ ಎಲ್ಲ ಸದಸ್ಯರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಹಿರಿಯ ವಕೀಲ ಕೆ.ಎ.ವಣಜೋಳ ಮಾತನಾಡಿ, ಅಥಣಿ ವಕೀಲರ ಸಂಘದ ಚುನಾವಣೆಯನ್ನು ಹಿರಿಯ ವಕೀಲರ ಮಾರ್ಗದರ್ಶದಲ್ಲಿ ಅತ್ಯಂತ ಶಿಸ್ತಿನಿಂದ ನಿರ್ವಹಿಸಿದ್ದು, ಚುನಾವಣೆಯಲ್ಲಿ ಯಾರು ಗೆದ್ದರೂ ಸಹ ಮುಂದಿನ ದಿನಗಳಲ್ಲಿ ಎಲ್ಲರೂ ಕೂಡಿಕೊಂಡೇ ಕಾರ್ಯನಿರ್ವಹಿಸುವ ಪ್ರವೃತ್ತಿ ನಮ್ಮದಾಗಿದೆ. ಈ ಹಿಂದಿನಂತೆಯೇ ಎನ್.ಬಿ.ಖೋಕಲೆ ವಕೀಲರಿಗೂ ನಾವೆಲ್ಲ ಸಹಕಾರ ನಿಡೋಣ ಎಂದು ಮನವಿ ಮಾಡಿದರು.ವಕೀಲರ ಸಂಘದ ಸದಸ್ಯರಾದ ಲೆನಿನ್ ಹಳಿಂಗಳಿ, ಸುನೀಲ ಸಂಕ ಮಾತನಾಡಿದರು. ಅಥಣಿ ವಕೀಲರ ಸಂಘದ ಸದಸ್ಯರು ಉಪಸ್ಥಿತರಿದ್ದರು.