ರಾಜ್ಯದಲ್ಲಿ ಬಿಡುಗಡೆಯಾಗಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್‌) ಅಂತಿಮ ಪಟ್ಟಿಯಲ್ಲಿ ಕೇಂದ್ರ ಚುನಾವಣಾ ಅಯೋಗ 90 ಲಕ್ಷ ಮತವನ್ನೆ ನಾಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದು ಇದನ್ನು ಕಾಂಗ್ರೆಸ್ ಖಂಡಿಸಿ ದೇಶಾದ್ಯಂತ ಹೋರಾಟ ನಡೆಸುತ್ತಿದೆ ಕೆಪಿಸಿಸಿ ವೀಕ್ಷಕರೂ. ರಾಜ್ಯ ಗ್ರಾರಂಟಿ ಯೋಜನಾ ಉಪಾಧ್ಯಕ್ಷರೂ ಆದ ಪುಷ್ಪ ಅಮರ್‌ನಾಥ್ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ರಾಜ್ಯದಲ್ಲಿ ಬಿಡುಗಡೆಯಾಗಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್‌) ಅಂತಿಮ ಪಟ್ಟಿಯಲ್ಲಿ ಕೇಂದ್ರ ಚುನಾವಣಾ ಅಯೋಗ 90 ಲಕ್ಷ ಮತವನ್ನೆ ನಾಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದು ಇದನ್ನು ಕಾಂಗ್ರೆಸ್ ಖಂಡಿಸಿ ದೇಶಾದ್ಯಂತ ಹೋರಾಟ ನಡೆಸುತ್ತಿದೆ ಕೆಪಿಸಿಸಿ ವೀಕ್ಷಕರೂ. ರಾಜ್ಯ ಗ್ರಾರಂಟಿ ಯೋಜನಾ ಉಪಾಧ್ಯಕ್ಷರೂ ಆದ ಪುಷ್ಪ ಅಮರ್‌ನಾಥ್ ಆರೋಪಿಸಿದರು.

ಭ್ರಮರಾಂಭ ಕಲ್ಯಾಣದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂಘಟನಾ ಸೃಜನ ಅಭಿಯಾನ 2 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಬ್ಬರು ಅದ್ಯಕ್ಷರು ಸಮರ್ಥವಾಗಿ ಕೆಲಸ ನಿರ್ವಹಿಸಿದ್ದಾರೆ. ಇಬ್ಬರನ್ನು ಬದಲಿಸಬೇಕಾಗಿರುವುದು ನಮಗೆ ಕಷ್ಟ ಅನಿಸಿದೆ. ಆದರೆ ಬದಲಾವಣೆ ಜಗದ ನಿಯಮ. ಈ ಹಿನ್ನೆಲೆ ಈಯ್ಕೆ ಪ್ರಕ್ರಿಯೆ ಇಂದು ನಡೆಸಲಾಗುತ್ತಿದ್ದು ಮುಂದೆಯೂ ಸಹ ಅಧ್ಯಕ್ಷರು ಹೆಚ್ಚಿನ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಕಾಂಗ್ರೆಸ್ ಪಕ್ಷ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ. ಮುಂದೆ ಆಯ್ಕೆಯಾಗುವ ಪಕ್ಷದ ನೂತನ ಪದಾಧಿಕಾರಿಗಳು ಪಕ್ಷ ಸಂಘಟನೆ ನಿಟ್ಟಿನಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡಬೇಕು ಎಂದರು.

ಯಳಂದೂರು ಅದ್ಯಕ್ಷ ಹೊಂಗನೂರು ಚಂದ್ರು, ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ತೋಟೇಶ್ ಅವರು 17 ವರ್ಷ ಉತ್ತಮ ರೀತಿ ಕೆಲಸ ನಿರ್ವಹಿಸಿದ್ದಾರೆ, ಪಕ್ಷದ ಸಿದ್ಧಾಂತದಡಿ ಸಮರ್ಪಕವಾಗಿ ಎಲ್ಲಾರ ವಿಶ್ವಾಸಗಳಿಸಿ ಕೆಲಸ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದರು.

ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ನೂತನವಾಗಿ ಆಯ್ಕೆಯಾಗುವ ಪದಾಧಿಕಾರಿಗಳು ಕಾರ್ಯಕರ್ತರ ಕರೆ ಸ್ವೀಕರಿಸಿ ತಾಳ್ಮೆಯಿಂದ ವರ್ತಿಸಿ ಸಂಕಷ್ಟ ಕೇಳಬೇಕು. ಪಕ್ಷದ ಸಿದ್ದಾಂತದಡಿ ಕಾಯಾ ವಾಚಾ ಮನಸಾ ಪಕ್ಷ ಸಂಘಟನೆಗೆ ಮುಂದಾಗಿ, ಪಕ್ಷದ ಪದಾಧಿಕಾರಿ ಸ್ಥಾನ ನಿಬಾಯಿಸುವ ಚಾಕಚಕ್ಯತೆಯುಳ್ಳವರು ಪದಾಧಿಕಾರಿಗಳಾಗಿ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯದರ್ಶಿ ಬಸ್ತೀಪುರ ರವಿ , ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರಾಜೇಂದ್ರ, ಯುವ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಯೋಗೇಂದ್ರ, ಜಿಲ್ಲಾ ಕಾರ್ಮಿಕರ ಸಂಘದ ಅಧ್ಯಕ್ಷ ದೇವರಾಜು, ಹಿಂದುಳಿದ ವರ್ಗಗಳ ಗೋವಿಂದರಾಜು, ರಾಜ್ಯ ಯುವ ಕಾಂಗ್ರೇಸ್ ಚೇತನ್, ಜಿಪಂ ಮಾಜಿ ಸದಸ್ಯ ಮುಳ್ಳೂರು ಕಮಲ್, ಮಾಂಬಳ್ಳಿ ನಂಜುಂಡಸ್ವಾಮಿ, ಯಳಂದೂರು ಮಹಿಳಾ ಘಟಕ ಭಾಗ್ಯಮ್ಮ, ಜಿಲ್ಲಾ ಓಬಿಸಿ ಅಧ್ಯಕ್ಷ ಚೇತನ್, ಯುವ ಕಾಂಗ್ರೆಸ್ ಬ್ಲಾಕ್ ವಿಜಯ್, ಅಜಯ್, ಸೆಲ್ವರಾಜು ರಾಜೂಗೌಡ, ಸಿದ್ದಲಿಂಗಗೌಡ, ವೆಂಕಟೇಶ್, ಹೇಮಂತ್, ಸಿದ್ದಾರ್ಥ್, ಶ್ರೀನಿವಾಸ್ ಮೂರ್ತಿ, ಬಾಬು, ತಿಮ್ಮರಾಜಿಪುರ ರಾಜು, ಹರ್ಷ, ಮುಡಿಗುಂಡ ಶಾಂತರಾಜು ಇದ್ದರು.