ನಿರ್ಗತಿಕ ವ್ಯಕ್ತಿ ನಾಗಣ್ಣ ಅಂತ್ಯ ಸಂಸ್ಕಾರ ನಡೆಸಿದ ನಿಶಾಂತ್‌

| Published : Apr 03 2025, 12:35 AM IST

ನಿರ್ಗತಿಕ ವ್ಯಕ್ತಿ ನಾಗಣ್ಣ ಅಂತ್ಯ ಸಂಸ್ಕಾರ ನಡೆಸಿದ ನಿಶಾಂತ್‌
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಬೈರನತ್ತ ಗ್ರಾಮದ ನಿರ್ಗತಿಕ ವ್ಯಕ್ತಿ ನಾಗಣ್ಣ ಎಂಬವರು ಮೃತಪಟ್ಟ ಹಿನ್ನೆಲೆ ಕುಟುಂಬಸ್ಥರು ಯಾರೂ ಇಲ್ಲದ ಕಾರಣ ಬಿಜೆಪಿ ಯುವ ಮುಖಂಡ ನಿಶಾಂತ್ ಮುಂದೆ ನಿಂತು ಅಂತ್ಯ ಸಂಸ್ಕಾರ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಬೈರನತ್ತ ಗ್ರಾಮದ ನಿರ್ಗತಿಕ ವ್ಯಕ್ತಿ ನಾಗಣ್ಣ ಎಂಬವರು ಮೃತಪಟ್ಟ ಹಿನ್ನೆಲೆ ಕುಟುಂಬಸ್ಥರು ಯಾರೂ ಇಲ್ಲದ ಕಾರಣ ಬಿಜೆಪಿ ಯುವ ಮುಖಂಡ ನಿಶಾಂತ್ ಮುಂದೆ ನಿಂತು ಅಂತ್ಯ ಸಂಸ್ಕಾರ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಹನೂರು ತಾಲೂಕಿನ ಮಣಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈರನತ್ತ ಗ್ರಾಮದ ನಾಗಣ್ಣ ಎಂಬವರು ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದರು. ದಿಢೀರ್ ಕಾಣಿಸಿಕೊಂಡ ಅನಾರೋಗ್ಯದಿಂದ ಮೃತಪಟ್ಟಿದ್ದರು. ಮೃತರಿಗೆ ಕುಟುಂಬಸ್ಥರು ಹಾಗೂ ಸಂಬಂಧಿಕರು ಯಾರೂ ಇಲ್ಲದೆ ಇದ್ದಿದ್ದರಿಂದ ಗ್ರಾಮದ ಮುಖಂಡರಾದ ಮಹೇಶ್ ರವರು ನಿಶಾಂತ್ ರವರಿಗೆ ವಿಚಾರ ತಿಳಿಸಿದ್ದಾರೆ.

ನಿಶಾಂತ್ ರವರು ವಿಚಾರ ತಿಳಿದ ತಕ್ಷಣ ಬೆಂಗಳೂರಿನಿಂದ ನೇರವಾಗಿ ಬೈರನತ್ತ ಗ್ರಾಮಕ್ಕೆ ಆಗಮಿಸಿ, ನಂತರ ನಿಶಾಂತ್ ಬಳಗದ ಯುವ ಪಡೆ ಸ್ವಾಮೀಜಿಯವರನ್ನು ಕರೆತಂದು ವೀರಶೈವ ಸಮಾಜದ ಸಂಪ್ರದಾಯದಂತೆ ಚಿಕ್ಕಿಂದುವಾಡಿ ಗ್ರಾಮದ ಬಾಲ ಷಡಕ್ಷರಿ ಸ್ವಾಮೀಜಿಯವರ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಗ್ರಾಮಸ್ಥರು ಹಾಗೂ ನಿಶಾಂತ್ ಬಳಗದ ಯುವಕರು ಮುಂದೆ ನಿಂತು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಅಂತ್ಯ ಸಂಸ್ಕಾರದ ಎಲ್ಲಾ ಖರ್ಚು ವೆಚ್ಚಗಳನ್ನು ಇವರೇ ಭರಿಸಿದ್ದಾರೆ. ಜೊತೆಗೆ ಮೂರು ದಿನದ ಹಾಗೂ 11 ದಿನದ ಆರಾಧನೆಗೆ ಕಾರ್ಯಕ್ರಮವನ್ನು ಇವರೇ ಸ್ವಂತ ಹಣದಿಂದ ಮಾಡಲು ನಿರ್ಧರಿಸಿ ಗ್ರಾಮದವರ ಸಹಕಾರ ಕೋರಿದ್ದಾರೆ.

ಒಟ್ಟಾರೆ ಹನೂರು ಕ್ಷೇತ್ರದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಹನೂರು ಕ್ಷೇತ್ರದ ಹಿಂದುಳಿದ ವರ್ಗದವರಿಗೆ, ವಿಕಲಚೇತನರಿಗೆ, ಅಸಹಾಯಕರಿಗೆ ತಮ್ಮ ಕೈಲಾದ ಮಟ್ಟಿಗೆ ಸಮಾಜ ಸೇವೆ ಮಾಡುತ್ತಿದ್ದಾರೆ. ನಿಶಾಂತ್ ರವರ ಈ ಕಾರ್ಯಕ್ಕೆ ಬೆಂಬಲಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.