ಸಾರಾಂಶ
ಕುಮಟಾ: ತಾಯಿಯು ಶುದ್ಧ ಹೃದಯದಿಂದ ಮಕ್ಕಳ ಪಾಲನೆ ಮಾಡಿದರೆ, ಮಕ್ಕಳಿಗೆ ಉತ್ತಮ ಸಂಸ್ಕಾರ ದೊರೆಯುವುದರ ಜತೆಗೆ ಅವರು ದೇಶದ ಆಸ್ತಿಯಾಗಲಿದ್ದಾರೆ ಎಂದು ಆದಿಚುಂಚನಗಿರಿ ಶಾಖಾ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ತಿಳಿಸಿದರು.ಜಿಲ್ಲಾ ಗ್ರಾಮ ಒಕ್ಕಲಿಗ ನೌಕರರ ಸಂಘದಿಂದ ಮಣಕಿ ಮಾನೀರದ ಗ್ರಾಮ ಒಕ್ಕಲಿಗ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಒಕ್ಕಲು ಸಮಾಜದ ೨೦೨೩- ೨೪ನೇ ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ಗ್ರಾಮ ಒಕ್ಕಲು ಸಂಚಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತಂದೆ- ತಾಯಿ ಅವರು ಮಕ್ಕಳ ಎದುರಿಗೆ ಗಂಡ- ಹೆಂಡತಿಯಾಗಿರದೇ ತಂದೆ- ತಾಯಿ ಆಗಿರಬೇಕು. ಶಿಕ್ಷಣದ ಜತೆಗೆ ನಮೃತೆ, ಸಂಸ್ಕಾರವನ್ನು ನೀಡುವುದು ಪಾಲಕರ ಕರ್ತವ್ಯವಾಗಿದೆ ಎಂದರು.ಜಿಲ್ಲಾ ಗ್ರಾಮ ಒಕ್ಕಲಿಗ ನೌಕರರ ಸಂಘದ ಅಧ್ಯಕ್ಷ ಎಂ.ಎನ್. ಪಟಗಾರ ಕಲಭಾಗ ಮಾತನಾಡಿ, ನಮ್ಮ ಸಂಘದಿಂದ ಕಳೆದ ೧೯ ವರ್ಷದಿಂದ ಸತತವಾಗಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಶಿಕ್ಷಣದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಉತ್ಸಾಹ ತುಂಬುತ್ತಿದ್ದೇವೆ. ಇದರೊಟ್ಟಿಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ, ಸರ್ಕಾರಿ ಸೇವೆಯಿಂದ ನಿವೃತ್ತರನ್ನು, ವಿಶೇಷ ಸಾಧನೆ ಮಾಡಿದವರನ್ನು ಗೌರವಿಸುವ ಕಾರ್ಯವನ್ನು ಮಾಡುತ್ತಿದ್ದೇವೆ. ಇದಕ್ಕೆ ಸಮಾಜದವರು ಹೆಚ್ಚಿನ ಸಹಕಾರ ನೀಡುವಂತೆ ತಿಳಿಸಿದರು.ಡಾ. ರಮೇಶ ಗೌಡ ಮಾತನಾಡಿ, ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ. ಬಡವರೂ ತಮ್ಮ ಪ್ರತಿಭೆಯಿಂದ ಎತ್ತರದ ಸ್ಥಾನಕ್ಕೆ ಏರಲು ಸಾಧ್ಯ ಎಂದರು.ಉದ್ಯಮಿ ಸತ್ಯಾನಂದ ಜಿ. ಪಟಗಾರ ಬೆಂಗಳೂರು ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜತೆ ಕೌಶಾಲ್ಯಾಭಿವೃದ್ಧಿ ಮಾಡಿಕೊಂಡಾಗ ಮಾತ್ರ ವಿವಿಧ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶ ದೊರೆಯಲಿದೆ ಎಂದರು. ಎನ್‌ಪಿಸಿ ಕೈಗಾದ ರಾಮಚಂದ್ರ ಶಂಕರ ಪಟಗಾರ ಮಾತನಾಡಿ, ಸಮಾಜದಲ್ಲಿ ಶಿಕ್ಷಣದಿಂದ ಮಾತ್ರವೇ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಪಾಲಕರು ತಮ್ಮೆಲ್ಲ ಕಷ್ಟವನ್ನು ಮರೆತು ಮಕ್ಕಳ ಶಿಕ್ಷಣದ ಕಲಿಕೆಗೆ ಆದ್ಯತೆ ನೀಡಬೇಕು ಎಂದರು.ಇಸ್ರೋ ವಿಜ್ಞಾನಿ ಡಾ. ಗಿರೀಶ ಗೌಡ ಹೊನ್ನಾವರ, ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ವೇದಿಕೆಯಲ್ಲಿ ಸಮುದಾಯ ಭವನ ಸಮಿತಿ ಅಧ್ಯಕ್ಷ ಮಂಜುನಾಥ ಪಟಗಾರ, ಉದ್ಯಮಿ ಗೋವಿಂದ ಗೌಡ ಗೋಕರ್ಣ, ಗ್ರಾಮ ಒಕ್ಕಲು ಸಂಚಿಕೆಯ ಪ್ರಧಾನ ಸಂಪಾದಕ ಸೀತಾರಾಮ ಪಟಗಾರ, ಲೆಕ್ಕ ಪರಿಶೋಧನಾ ಅಧಿಕಾರಿ ರಾಧಾಕೃಷ್ಣ ಎ. ಪಟಗಾರ, ಯಜಮಾನ ಸಂಸ್ಥೆಯ ಮಾಲಿಕ ರಾಮಚಂದ್ರ ಗೌಡ ಬೆಂಗಳೂರು, ಯುವ ಬಳಗದ ಅಧ್ಯಕ್ಷ ವಿನಾಯಕ ಪಟಗಾರ, ಚುಂಚಶ್ರೀ ಸಹಕಾರಿ ಸಂಘದ ಅಧ್ಯಕ್ಷೆ ರಾಜೇಶ್ವರಿ ಪಟಗಾರ ಹಾಗೂ ಇತರರು ಇದ್ದರು.ಈ ಸಂದರ್ಭದಲ್ಲಿ ಶೈಕ್ಷಣಿಕ ಸಾಧಕರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಸಂಘದ ಖಜಾಂಚಿ ವಿ.ಎ. ಪಟಗಾರ ಸ್ವಾಗತಿಸಿದರು. ಪ್ರಶಾಂತ ಪಟಗಾರ ಪ್ರಾರ್ಥಿಸಿದರು. ಕಾರ್ಯದರ್ಶಿ ಎಸ್.ಎಚ್. ಗೌಡ ವರದಿ ವಾಚಿಸಿದರು. ವಿಷ್ಣು ಪಟಗಾರ ಚಿಪ್ಪಿಹಕ್ಕಲ್, ರಾಘವೇಂದ್ರ ಗೌಡ ನಿರೂಪಿಸಿದರು. ಕೃಷ್ಣ ಗೌಡ, ಗಣಪತಿ ಪಟಗಾರ, ಸಿ.ಡಿ. ಪಡುವಣಿ ಸಹಕರಿದರು. ಸಹ ಕಾರ್ಯದರ್ಶಿ ಶಿಕ್ಷಕ ನಾಗರಾಜ ಪಟಗಾರ ವಂದಿಸಿದರು.
Nishchalanandanath Swamiji appealed to children to teach samsara along with education in childhoodಕುಮಟಾ ಸುದ್ದಿ, ನಿಶ್ಚಲಾನಂದನಾಥ ಸ್ವಾಮೀಜಿ, ಗ್ರಾಮ ಒಕ್ಕಲಿಗ ನೌಕರರ ಸಂಘ, Kumta News, Nishchalanandanath Swamiji, Gram Okkaliga Employees Association
ತಂದೆ- ತಾಯಿ ಅವರು ಮಕ್ಕಳ ಎದುರಿಗೆ ಗಂಡ- ಹೆಂಡತಿಯಾಗಿರದೇ ತಂದೆ- ತಾಯಿ ಆಗಿರಬೇಕು. ಶಿಕ್ಷಣದ ಜತೆಗೆ ನಮೃತೆ, ಸಂಸ್ಕಾರವನ್ನು ನೀಡುವುದು ಪಾಲಕರ ಕರ್ತವ್ಯವಾಗಿದೆ