ಸಾರಾಂಶ
ಕಾರ್ಕಳ ನಿಟ್ಟೆ ನಿಟ್ಟೆ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ ವಿಭಾಗದ ವಾರ್ಷಿಕ ಉತ್ಸವ ‘ಸೆಮಾಫೋರ್’ ಶುಕ್ರವಾರ ಮುಕ್ತಾಯಗೊಂಡಿತು.
ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ ವಿಭಾಗದ ವಾರ್ಷಿಕ ಉತ್ಸವ ‘ಸೆಮಾಫೋರ್’ ಶುಕ್ರವಾರ ಮುಕ್ತಾಯಗೊಂಡಿತು.ಗುರುವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಎಚ್‌ಪಿ ಎಂಟರ್‌ಪ್ರೈಸರ್ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆ ಪ್ರಧಾನ ಸಾಫ್ಟ್‌ವೇರ್ ಎಂಜಿನಿಯರ್ ಅಭಿಲಾಷ್ ಯು.ಕೆ. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ತಾಂತ್ರಿಕ ಕಾಲೇಜಿನ ಡೀನ್ (ಸಂಶೋಧನೆ ಮತ್ತು ಅಭಿವೃದ್ಧಿ) ಡಾ.ಸುದೇಶ್ ಬೇಕಲ್ ವಹಿಸಿದ್ದರು.ಎಂಸಿಎ ವಿಭಾಗದ ಮುಖ್ಯಸ್ಥೆ ಡಾ. ಮಮತಾ ಬಲಿಪಾ ಸ್ವಾಗತಿಸಿದರು.ವಿದ್ಯಾರ್ಥಿ ಸಂಘದ ಸಾಧನೆಗಳು ಮತ್ತು ಚಟುವಟಿಕೆಗಳನ್ನು ಪ್ರದರ್ಶಿಸಿಸುವ ಎಸ್‌ಎಎಂಸಿಎ ಸುದ್ದಿಪತ್ರದ ಮೊದಲ ಸಂಪುಟದ ಬಿಡುಗಡೆಗೊಂಡಿತು. ಉತ್ಸವದಲ್ಲಿ 11 ಕಾಲೇಜುಗಳು ಭಾಗವಹಿಸಿತ್ತು. 10 ತಾಂತ್ರಿಕ ಮತ್ತು ತಾಂತ್ರಿಕೇತರ ಸ್ಪರ್ಧೆಗಳನ್ನು ಈ ಕಾರ್ಯಕ್ರಮ ಒಳಗೊಂಡಿತ್ತು.
ವೇದಿಕೆಯಲ್ಲಿ ಸೆಮಾಫೋರ್ ಸಂಯೋಜಕ ಡಾ.ಅನಂತಮೂರ್ತಿ, ಅಧ್ಯಕ್ಷ ಕಿರಣ್, ಕಾರ್ಯದರ್ಶಿ ರಕ್ಷಿತಾ ಮತ್ತು ತಾಂತ್ರಿಕ ಸಂಯೋಜಕ ಅನೂಪ್ ನಾಯಕ್ ಉಪಸ್ಥಿತರಿದ್ದರು.