ಕೊಚ್ಚಿಯ ಗ್ಲೋಬಲ್ ಅಲುಮ್ನಿ ಮೀಟ್ ಆಮಂತ್ರಣ ಪತ್ರಿಕೆ ಬಿಡುಗಡೆ

| Published : May 19 2024, 01:51 AM IST

ಕೊಚ್ಚಿಯ ಗ್ಲೋಬಲ್ ಅಲುಮ್ನಿ ಮೀಟ್ ಆಮಂತ್ರಣ ಪತ್ರಿಕೆ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾರಂಭದಲ್ಲಿ ಡಾ. ನಿಟ್ಟೆ ವಿನಯ ಹೆಗ್ಡೆ ಹಾಗೂ ಸಂಸ್ಥೆಯ ಅನೇಕ ಮುಖ್ಯಸ್ಥರು ಭಾಗವಹಿಸಲಿದ್ದಾರೆ. ದೇಶ ವಿದೇಶಗಳಲ್ಲಿ ನೆಲೆಸಿರುವ ಕಾಲೇಜಿನ ಸುಮಾರು 22000ಕ್ಕೂ ಮಿಕ್ಕಿ ಹಳೆ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಕೊಚ್ಚಿಯ ಚಕೊಲಾಸ್ ಪೆವಿಲಿಯನ್‌ನಲ್ಲಿ ಜುಲೈ 27ರಂದು ನಡೆಯಲಿರುವ ನಿಟ್ಟೆ ಮಹಾಲಿಂಗ ಅಡ್ಯಂತಾಯ ಮೆಮೋರಿಯಲ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯ ಹಳೆ ವಿದ್ಯಾರ್ಥಿ ಸಂಘ (ವಿನಮಿಟ)ದ ಅಂತಾರಾಷ್ಟ್ರೀಯ ಅಲುಮ್ನಿ ಮೀಟ್‌- 2024ರ ಆಮಂತ್ರಣ ಪತ್ರಿಕೆಯನ್ನು ನಿಟ್ಟೆಯ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎನ್. ವಿನಯ ಹೆಗ್ಡೆ ಬಿಡುಗಡೆ ಮಾಡಿದರು.

ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ವಿನಮಿಟ ಅಲುಮ್ನಿ ಅಧ್ಯಕ್ಷ ಹಾಗೂ ಅಸೋಸಿಯೇಷನ್ ಆಫ್ ಸಿವಿಲ್ ಎಂಜಿನಿಯರ್ಸ್ ಮೂಲ್ಕಿಯ ಸ್ಥಾಪಕ ಅಧ್ಯಕ್ಷ ಜೀವನ್ ಕೆ. ಶೆಟ್ಟಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಡಾ. ನಿಟ್ಟೆ ವಿನಯ ಹೆಗ್ಡೆ ಹಾಗೂ ಸಂಸ್ಥೆಯ ಅನೇಕ ಮುಖ್ಯಸ್ಥರು ಭಾಗವಹಿಸಲಿದ್ದಾರೆ. ದೇಶ ವಿದೇಶಗಳಲ್ಲಿ ನೆಲೆಸಿರುವ ಕಾಲೇಜಿನ ಸುಮಾರು 22000ಕ್ಕೂ ಮಿಕ್ಕಿ ಹಳೆ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

ಆಮಂತ್ರಣ ಪತ್ರಿಕೆ ಬಿಡುಗಡೆಯ ಸಂದರ್ಭ ಸಂಸ್ಥೆಯ ಉಪಾಧ್ಯಕ್ಷ ಡಾ. ಗೋಪಾಲ್ ಮುಗ್ರಾಯ, ಪ್ರಾಂಶುಪಾಲ ಡಾ. ನಿರಂಜನ್ ಚಿಪ್ಳೂಣ್ಕ, ಡೀನ್ ಡಾ. ರಮೇಶ್ ಮಿತ್ತಂತಾಯ, ಡಾ. ರಾಜೇಶ್ ಶೆಟ್ಟಿ, ಡಾ .ಶ್ರೀನಿವಾಸ್ ರಾವ್, ನಿರ್ದೇಶಕರಾದ ಯೋಗೀಶ್ ಹೆಗ್ಡೆ, ಪ್ರಸನ್ನ ಕೈಲಾಜೆ, ಅಲುಮ್ನಿ ಕಾರ್ಡಿನೇಟರ್‌ ಜ್ಞಾನೇಶ್ವರ್ ಪೈ, ವೆನಮಿಟ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.