ನಿಟ್ಟೆ ಮದೆನಾಡುವಿನಲ್ಲಿ ಜವಳಿ ಪಾರ್ಕ್ ಯೋಜನೆಯ ಶಂಕುಸ್ಥಾಪನೆ ನಡೆದು ಮೂರು ವರ್ಷಗಳಾದರೂ ಇದುವರೆಗೂ ಯಾವುದೇ ಅಭಿವೃದ್ಧಿ ಕಾರ್ಯಗಳು ಪ್ರಾರಂಭವಾಗಿಲ್ಲ. ಯೋಜನೆ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಸ್ಥಳೀಯ ಜನರಲ್ಲಿ ತೀವ್ರ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತವಾಗಿದೆ
ಕಾರ್ಕಳ: ನಿಟ್ಟೆ ಮದೆನಾಡುವಿನಲ್ಲಿ ಜವಳಿ ಪಾರ್ಕ್ ಯೋಜನೆಯ ಶಂಕುಸ್ಥಾಪನೆ ನಡೆದು ಮೂರು ವರ್ಷಗಳಾದರೂ ಇದುವರೆಗೂ ಯಾವುದೇ ಅಭಿವೃದ್ಧಿ ಕಾರ್ಯಗಳು ಪ್ರಾರಂಭವಾಗಿಲ್ಲ. ಯೋಜನೆ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಸ್ಥಳೀಯ ಜನರಲ್ಲಿ ತೀವ್ರ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಬೆಳ್ಳಿಪ್ಪಾಡಿ ನೇಮಿರಾಜ ರೈ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಉದ್ದೇಶಕ್ಕಾಗಿ ತರಾತುರಿಯಲ್ಲಿ ಶಂಕುಸ್ಥಾಪನೆ ನಡೆಸಿ ಜನರನ್ನು ಮಂಗ ಮಾಡಲಾಗಿದೆ. ಇದೊಂದು ವಿಶ್ವಾಸದ್ರೋಹದ ನಾಟಕ ಎಂದು ಆರೋಪಿಸಿದರು. ಈ ಯೋಜನೆಯನ್ನು ನಿಟ್ಟೆಯಿಂದ ಬೇರೆ ಕಡೆಗೆ ವರ್ಗಾಯಿಸುವ ಹುನ್ನಾರ ನಡೆಯುತ್ತಿದೆ . ಸುನಿಲ್ ಕುಮಾರ್ ಅವರು ಈ ಯೋಜನೆಯನ್ನು ಎತ್ತಂಗಡಿ ಮಾಡುವ ಮೂಲಕ ನಿಟ್ಟೆಯ ಜನರ ಅನ್ನದ ಬಟ್ಟಲಿಗೆ ಕಲ್ಲು ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಅನಂದ ಜೋಸೆಫ್ ಮದೆನಾಡು, ಮೊಹಮ್ಮದ್ ಹಸನ್ ನಿಟ್ಟೆ, ಶರತ್ ಶೆಟ್ಟಿ ಮದೆನಾಡು ಉಪಸ್ಥಿತರಿದ್ದರು.