ಇತ್ತೀಚೆಗೆ ಹಣದ ಆಸೆಗೆ ಒಳಗಾಗಿ ಹಾಲನ್ನೂ ಕಲಬೆರೆಕೆ ಮಾಡುತ್ತಿದ್ದಾರೆ. ಶುದ್ಧ ಹಾಲಿಗೆ ನೀರು ಸೇರಿದಂತೆ ವಾಷಿಂಗ್ ಸೋಡಾ, ಯೂರಿಯಾ ಮತ್ತಿತರ ವಸ್ತುಗಳನ್ನು ಸೇರಿಸಿ ಕಲಬೆರೆಕೆ ಮಾಡಲಾಗುತ್ತಿದೆ. ಯಾವುದೇ ವಸ್ತುಗಳನ್ನು ಸೇರಿಸಿ ಕಲಬೆರಕೆ ಮಾಡದೇ ಪರಿಶುದ್ಧ ಹಾಲನ್ನು ಡೈರಿಗೆ ಸರಬರಾಜು ಮಾಡಿ ಡೈರಿ ಅಭಿವೃದ್ಧಿಗೆ ಕೈ ಜೋಡಿಸಬೇಕು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮಕ್ಕಳ ಆರೋಗ್ಯ ಸಂವರ್ಧನೆಗೆ ಸಂಜೀವಿನಿಯಾದ ಹಾಲು ಅಮೃತಕ್ಕೆ ಸಮಾನ. ನೀರು ಬೆರೆಸಿ ಕಲಬೆರಕೆ ಮಾಡದೇ ರೈತರು ಡೈರಿಗೆ ಪರಿಶುದ್ಧ ಹಾಲನ್ನು ಡೈರಿಗಳಿಗೆ ಸರಬರಾಜು ಮಾಡುವಂತೆ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಡಾಲು ರವಿ ಕರೆ ನೀಡಿದರು.ತಾಲೂಕಿನ ಮಾಚಗೋನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ನಂದಿನಿ ಪರಿಶುದ್ಧತೆಗೆ ಹೆಸರಾಗಿದ್ದು ಗ್ರಾಹಕರ ನಂಬಿಕೆಗೆ ಪಾತ್ರವಾಗಿದೆ. ಇದಕ್ಕೆ ಹಾಲು ಉತ್ಪಾದಕರ ರೈತರು ಕಾರಣ ಎಂದರು.
ಇತ್ತೀಚೆಗೆ ಹಣದ ಆಸೆಗೆ ಒಳಗಾಗಿ ಹಾಲನ್ನೂ ಕಲಬೆರೆಕೆ ಮಾಡುತ್ತಿದ್ದಾರೆ. ಶುದ್ಧ ಹಾಲಿಗೆ ನೀರು ಸೇರಿದಂತೆ ವಾಷಿಂಗ್ ಸೋಡಾ, ಯೂರಿಯಾ ಮತ್ತಿತರ ವಸ್ತುಗಳನ್ನು ಸೇರಿಸಿ ಕಲಬೆರೆಕೆ ಮಾಡಲಾಗುತ್ತಿದೆ. ಯಾವುದೇ ವಸ್ತುಗಳನ್ನು ಸೇರಿಸಿ ಕಲಬೆರಕೆ ಮಾಡದೇ ಪರಿಶುದ್ಧ ಹಾಲನ್ನು ಡೈರಿಗೆ ಸರಬರಾಜು ಮಾಡಿ ಡೈರಿ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದರು.ಒಕ್ಕೂಟವು ಹಾಲು ಉತ್ಪಾದಕರು ಅಕಾಲಿಕವಾಗಿ ಮೃತರಾದರೆ 25 ಸಾವಿರ ರು. ಸಹಾಯ ಧನ ನೀಡುವ ಜೊತೆಗೆ ಡೈರಿಗಳಿಂದ 5 ಸಾವಿರ ರು. ಸೇರಿಸಿ 30 ಸಾವಿರ ರು. ಹಣ ನೀಡಿ ನೆರವಾಗುತ್ತಿದೆ. ವೈದ್ಯಕೀಯ, ಆಯುರ್ವೇದ, ದಂತ ವೈದ್ಯ, ಕೃಷಿ ವಿಜ್ಞಾನ, ತೋಟಗಾರಿಕೆ, ರೇಷ್ಮೆ ಸೇರಿದಂತೆ ಉನ್ನತ ವ್ಯಾಸಂಗ ಮಾಡುವ ಹಾಲು ಉತ್ಪಾದಕರ ಮಕ್ಕಳಿಗೆ 40 ರಿಂದ 50 ಸಾವಿರ ರು. ಪ್ರೋತ್ಸಾಹ ಧನ ನೀಡುತ್ತಿದೆ ಎಂದರು.
ಸಭೆಯಲ್ಲಿ ಮಾರ್ಗದ ವಿಸ್ತರಣಾಧಿಕಾರಿ ಜಗದೀಶ್ ಮಾತನಾಡಿದರು. ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಹಾಲು ಉತ್ಪಾದಕರು ಹಾಗೂ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘದ ಅಧ್ಯಕ್ಷೆ ಸುಂದ್ರಮ್ಮ ಸಭೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಚಂದ್ರಪ್ರಭ ಸ್ವಾಗತಿಸಿದರು, ಹಾಲು ಪರೀಕ್ಷಕಿ ರುಕ್ಮಿಣಿ ವಂದಿಸಿದರು.