ಸಾರಾಂಶ
ಹಾವೇರಿ:ಹಿಂದಿನ ಎರಡುವರೆ ವರ್ಷದ ಅವಧಿಯಲ್ಲಿ ರಾಜ್ಯ ಸರ್ಕಾರದ ಯಾವ ಖುರ್ಚಿಯೂ ಅಲುಗಾಡಿಲ್ಲ, ಮುಂದಿನ ಎರಡೂವರೆ ವರ್ಷ ಕೂಡ ಅಲುಗಾಡಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು. ಹಾನಗಲ್ಲ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಏನು ಆಗುತ್ತೋ ಅದು ಆಗುತ್ತೆ. ಹಾವೇರಿ ಜಿಲ್ಲೆಗೆ ಸಚಿವ ಸ್ಥಾನ ಕೇಳೋದು ನೂರಕ್ಕೆ ನೂರು ತಪ್ಪಲ್ಲ. ಸಚಿವ ಸ್ಥಾನದ ಆಸೆ ಎಲ್ರಿಗೂ ಇರುತ್ತೆ, ಎಲ್ಲಾ ಜಿಲ್ಲೆಗೂ ಪ್ರಾತಿನಿಧ್ಯ ಸಿಗಬೇಕು. ಒಂದು ಕಾಲದಲ್ಲಿ ನಮ್ಮ ಜಿಲ್ಲೆಗೂ ಸಿಕ್ಕಿರಲಿಲ್ಲ. ನಾನೂ ಎಂ.ಬಿ.ಪಾಟೀಲ್ಲ ಇಬ್ಬರು ಇದ್ದರೂ ಸಿಕ್ಕಿರಲಿಲ್ಲ. ಹಾವೇರಿ ಜಿಲ್ಲೆಗೂ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗಲಿ ಎಂದರು.ಬಿಹಾರ್ ಚುನಾವಣೆಗೆ ಸಚಿವರಿಂದ ಹಣ ಕಲೆಕ್ಷನ್ ಎಂಬ ಬಿಜೆಪಿ ನಾಯಕರ ಆರೋಪ ವಿಚಾರಕ್ಕೆ ಮಾತನಾಡಿದ ಅವರು, ಬಿಜೆಪಿ ಅವರು ಏನು ಕೆಲಸ ಮಾಡಿದ್ದಾರೆ ? ಕೇಂದ್ರದಿಂದ ಅನುದಾನ ತಂದಿದ್ದಾರಾ? ಅತಿವೃಷ್ಟಿ ಆಯ್ತು ಅಂತ ಬಾಯಿ ಮಾತಲ್ಲಿ ಹೇಳ್ತಾರೆ. ಹಣ ಬಿಡುಗಡೆ ಮಾಡಿಸೋ ಪ್ರಯತ್ನ ಮಾಡಬೇಕಿತ್ತು ಎಂದ ಅವರು, ಕೇಂದ್ರಕ್ಕೆ 15500 ಕೋಟಿ ರು. ಅನುದಾನ ಕೇಳಿದ್ದೇವೆ. ಕೊಡಿಸುವ ಜವಾಬ್ದಾರಿ ಸಂಸದರ ಮೇಲಿದೆ. ಬೇರೆ ರಾಜ್ಯಗಳಿಗೂ ಕೊಟ್ಟಿದಾರೆ ಹಾಗೆ ನಮಗೂ ಅನುದಾನ ಕೊಡಬೇಕು ಎಂದು ಅವರು ಒತ್ತಾಯಿಸಿದರು.ಸಿಎಂ ದೆಹಲಿಗೆ ತೆರಳುವ ವಿಚಾರಕ್ಕೆ ಪ್ರತಿಕ್ರಿಯಿಸಿ, ದೆಹಲಿಗೆ ಯಾರು ಬೇಕಾದ್ರೂ ಹೋಗ್ತಾರೆ, ಅಲ್ಲಿ ಹೈಕಮಾಂಡ್ ಇದೆ. ಹಾಗಾಗಿ ಶಾಸಕರು, ಸಚಿವರು ಎಲ್ರೂ ಹೋಗ್ತಾರೆ, ನಮ್ಮ ಕಾರ್ಯಕರ್ತರೂ ಹೋಗ್ತಾರೆ ಎಂದರು.ಬೆಳೆಹಾನಿ ಸಮೀಕ್ಷೆಯಲ್ಲಿ ರೈತರಿಗೆ ವಂಚನೆ ವಿಚಾರವಾಗಿ ಪ್ರತಿಕ್ರಿಯಿಸಿ, ಮಳೆ ಆಶ್ರಿತ ಬೆಳೆಗಳಿಗೂ ನೀರಾವರಿ ಅಂತ ನಮೂದು ಮಾಡಿದ್ದಾರೆ. ಇಂತಹ ಪ್ರಕರಣ ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ತಗೊಳ್ತೀವಿ ಎಂದರು.ರಿಕವರಿ ಆಧಾರಿತವಾಗಿ ಕಬ್ಬಿಗೆ ದರ: ಮಹಾರಾಷ್ಟ್ರದಲ್ಲಿ ಹೈಯೆಸ್ಟ್ ರಿಕವರಿ ಜಿಲ್ಲೆಗಳಿವೆ. ಹೀಗಾಗಿ ಅಲ್ಲಿ ಕಬ್ಬಿಗೆ ಹೆಚ್ಚು ಬೆಲೆ ಸಿಗುತ್ತೆ. ನಮ್ಮಲ್ಲಿ ರಿಕವರಿ ಆಧಾರಿತವಾಗಿ ಹಣ ಕೊಡಲಾಗುತ್ತದೆ. ಎಲ್ಲಿ ಕಬ್ಬಿನ ರಿಕವರಿ ಕಡಿಮೆ ಇರುತ್ತೋ ಅಲ್ಲಿ ಕಬ್ಬಿಗೆ ಸಹಜವಾಗಿ ಬೆಲೆ ಕಡಿಮೆ ಸಿಗುತ್ತೆ. ಕೃಷ್ಣ ನದಿ ಪಾತ್ರದಲ್ಲಿ ಕಬ್ಬಿಗೆ 11 ರಿಕವರಿ ಇರುತ್ತೆ, ಅಲ್ಲಿ ಜಾಸ್ತಿ ಸಿಗುತ್ತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಹೇಳಿದರು.
;Resize=(128,128))
;Resize=(128,128))
;Resize=(128,128))