ಎರಡುವರೆ ವರ್ಷಗಳಿಂದ ಜನರ ಯಾವುದೇ ಬೇಡಿಕೆ ಈಡೇರಿಲ್ಲ, ಕಾಂಗ್ರೆಸ್ ನಲ್ಲಿ ಒಳಜಗಳ ಕಚ್ಚಾಟ ಹೆಚ್ಚಾಗಿದೆ, ಕಾಂಗ್ರೆಸಿನ ಒಳಗೆ ಅವಿಶ್ವಾಸ ಗೊತ್ತುವಳಿ ವಾತಾವರಣ ಇದೆ, ಆದ್ದರಿಂದ ಮುಂದಿನ ಅಧಿವೇಶನ ಕುತೂಹಲ ಹುಟ್ಟಿಸಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಭಿಪ್ರಾಯಪಟ್ಟಿದ್ದಾರೆ.
ಉಡುಪಿ: ರಾಜ್ಯ ಕಾಂಗ್ರೆಸ್ ನಲ್ಲಿ ಮೋಡ ಕವಿದ ವಾತಾವರಣವಿದೆ, ಮಳೆ ಆಗುತ್ತೋ, ಗುಡುಗು ಆಗುತ್ತೋ ಜನ ನಿರೀಕ್ಷೆಯಲ್ಲಿದ್ದಾರೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದ್ದಾರೆ.
ಪ್ರಸಕ್ತ ರಾಜ್ಯ ರಾಜಕಾರಣ ವಿದ್ಯಮಾನಗಳ ಬಗ್ಗೆ ಉಡುಪಿಯಲ್ಲಿ ಪ್ರತಿಕ್ರಿಯಿರುವ ಶಾಸಕರು, ಎರಡುವರೆ ವರ್ಷಗಳಿಂದ ಜನರ ಯಾವುದೇ ಬೇಡಿಕೆ ಈಡೇರಿಲ್ಲ, ಕಾಂಗ್ರೆಸ್ ನಲ್ಲಿ ಒಳಜಗಳ ಕಚ್ಚಾಟ ಹೆಚ್ಚಾಗಿದೆ, ಕಾಂಗ್ರೆಸಿನ ಒಳಗೆ ಅವಿಶ್ವಾಸ ಗೊತ್ತುವಳಿ ವಾತಾವರಣ ಇದೆ, ಆದ್ದರಿಂದ ಮುಂದಿನ ಅಧಿವೇಶನ ಕುತೂಹಲ ಹುಟ್ಟಿಸಿದೆ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಾರಾ? ಅಥವಾ ಡಿಕೆಶಿಗೆ ಅಧಿಕಾರ ಬಿಟ್ಟುಕೊಟ್ಟು ನುಡಿದಂತೆ ನಡೆಯುತ್ತಾರಾ ? ಎಂಬುದು ಜನರ ಪ್ರಶ್ನಿಸುತ್ತಿದ್ದಾರೆ.ಇನ್ನಾದರೂ ಕಚ್ಚಾಟ ಬದಿಗಿಟ್ಟು ಜನರ ಕೆಲಸ ಮಾಡಿ, ಮಳೆ ಹಾನಿ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಿ, ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುವ ದಾಖಲೆ ಮಾಡಲು ಹೊರಟಿದ್ದಾರೆ, ಆದರೇ ದಾಖಲೆಯ ಸರದಾರರಾಗುವುದರ ಬದಲು ಜನರ ಸಮಸ್ಯೆಗೆ ಸ್ಪಂದಿಸಿ ಎಂದವರು ಒತ್ತಾಯಿಸಿದ್ದಾರೆ.
ಕಾಂಗ್ರೆಸಿನ ಬ್ರೇಕ್ ಫಾಸ್ಟ್ ಹ್ಯಾಶ್ ಟ್ಯಾಗ್ ಜನಪ್ರಿಯವಾಗುತ್ತಿದೆ, ಈ ಬ್ರೇಕ್ ಫಾಸ್ಟ್ ಸಭೆಗಳ ಅರ್ಥವಾದರೂ ಏನು ? ಕುರ್ಚಿಯಿಂದ ಇಳಿಸುವುದಾ ? ಅಥವಾ ಕೂರಿಸೋದಾ ? ಬ್ರೇಕ್ ಫಾಸ್ಟ್ ಸಭೆಗಳ ನಿಜ ಮರ್ಮ ಏನು ? ಕುರ್ಚಿಗಾಗಿ ಕಾದಾಟ ಯಾವಾಗ ಅಂತ್ಯವಾಗುತ್ತೋ ಗೊತ್ತಿಲ್ಲ, ಜನರು ಗೊಂದಲದ್ದಿದ್ದಾರೆ ಎಂದು ಯಶ್‌ಪಾಲ್ ಹೇಳಿದ್ದಾರೆ.