ಸಾರಾಂಶ
ಕನಕಗಿರಿ ಪಟ್ಟಣದ ಗಂಗಾವತಿ ರಸ್ತೆಗೆ ಹೊಂದಿಕೊಂಡಿರುವ ಭೂಮಿಯು ದನಕರು ಮೇಯಿಸಲು ಮೀಸಲಾಗಿದೆ. ಆದರೆ, ಇಲ್ಲಿ ಕೆಲವರು ಯಾರ ಪರವಾನಗಿ ಇಲ್ಲದೆ ಕೆಲವರು ಶವ ಉಳುತ್ತಿದ್ದಾರೆ. ಹೀಗೆ ಹಲವು ವರ್ಷಗಳಿಂದ ಕಾನೂನು ಬಾಹಿರ ಚಟುವಟಿಕೆಗಳ ನಡೆಯುತ್ತಿವೆ.
ಕನಕಗಿರಿ:
ಪಟ್ಟಣದ ಸರ್ವೇ ನಂ. 156ರ ಗೋಮಾಳ ಹಾಗೂ 370ರ ವೆಂಕಟರಮಣ ದೇವಸ್ಥಾನದ ಜಾಗದಲ್ಲಿ ಶವ ಸಂಸ್ಕಾರಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಶುಕ್ರವಾರ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದರು.ವೇದಿಕೆಯ ಜಿಲ್ಲಾ ಸಂಚಾಲಕ ಅಯ್ಯನಗೌಡರೆಡ್ಡಿ ಅಳ್ಳಳ್ಳಿ ಮಾತನಾಡಿ, ಪಟ್ಟಣದ ಗಂಗಾವತಿ ರಸ್ತೆಗೆ ಹೊಂದಿಕೊಂಡಿರುವ ಭೂಮಿಯು ದನಕರು ಮೇಯಿಸಲು ಮೀಸಲಾಗಿದೆ. ಆದರೆ, ಇಲ್ಲಿ ಕೆಲವರು ಯಾರ ಪರವಾನಗಿ ಇಲ್ಲದೆ ಕೆಲವರು ಶವ ಉಳುತ್ತಿದ್ದಾರೆ. ಹೀಗೆ ಹಲವು ವರ್ಷಗಳಿಂದ ಕಾನೂನು ಬಾಹಿರ ಚಟುವಟಿಕೆಗಳ ನಡೆಯುತ್ತಿವೆ. ಇನ್ನೂ ಹಿರೇಹಳ್ಳದ ಬಸವೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿನ ವೆಂಕಟರಮಣ ದೇವಸ್ಥಾನವಿರುವ ಸರ್ವೇ ನಂ. 370ರಲ್ಲಿ ಯಲ್ಲಮ್ಮ, ಗೋಲಗೇರಪ್ಪ ದೇವಸ್ಥಾನ, ಸುವರ್ಣಗಿರಿ ಮೂಲ ಮಠ ಇನ್ನಿತರ ಪುರಾತನ ದೇಗುಲಗಳಿದ್ದು, ಇದೇ ಸ್ಥಳದಲ್ಲಿಯೇ ಶವ ಸಂಸ್ಕಾರ ಮಾಡುತ್ತಿದ್ದರಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಆರೋಪಿಸಿದರು.
ಆರ್‌ಎಸ್ಎಸ್ ಮುಖಂಡ ಹನುಮಂತರೆಡ್ಡಿ ಮಾತನಾಡಿ, ಸರ್ವೇ ನಂ.370ರ ಭೂಮಿಯು 1974ರಲ್ಲಿ ವಕ್ಫ್ ಬೋರ್ಡ್‌ಗೆ ಸೇರಿಸಲಾಗಿದೆ ಎಂದು ಉಲ್ಲೇಖಿಸಿ ಹಿಂದೂಗಳಿಗೆ ಮೇಲಿಂದ ಮೇಲೆ ವಕ್ಫ್ ಮಂಡಳಿಯಿಂದ ನೋಟಿಸ್ ನೀಡಿ ಬೆದರಿಕೆ ಹಾಕಲಾಗುತ್ತಿದೆ. ಹಿಂದೂ ಸ್ಮಾರಕಕ್ಕೆ ಹೊಂದಿಕೊಂಡು ಶವ ಸಂಸ್ಕಾರ ಮಾಡಲಾಗುತ್ತಿರುವ ಕುರಿತು ಅಧಿಕಾರಿಗಳ ಗಮನಕ್ಕೆ ತಂದಾಗ 2025ರ ಜನವರಿಯಲ್ಲಿ ಶವ ತೆರವುಗೊಳಿಸಿ ಸ್ಮಾರಕದ ಸಂರಕ್ಷಣೆ ಮಾಡಲಾಗಿತ್ತು. ಈ ಭೂಮಿಯನ್ನು ಕೂಡಾ ಮುಸ್ಲಿಂ ಸಮಾಜದವರು ಬಿಟ್ಟು ಕೊಡಲು ಒಪ್ಪಿಕೊಂಡಿದ್ದರು. ಆದರೆ, ಕೆಲ ಮತಾಂಧರು ವಕ್ಫ್‌ನಿಂದ ಹಿಂದೂ ಸಮಾಜದ ಹಿರಿಯರಿಗೆನೋಟಿಸ್ ನೀಡಲಾಗುತ್ತಿದೆ. ಈ ಬಗ್ಗೆ ಪರಿಶೀಲಿಸಿ ಸಮಸ್ಯೆ ತಿಳಿಯಾಗುವ ವರೆಗೂ ಈ ಎರಡು ಭೂಮಿಯಲ್ಲಿ ಶವ ಸಂಸ್ಕಾರ ಮಾಡಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಶಿರಸ್ತೇದಾರ ಶರಣಪ್ಪ ಮನವಿ ಸ್ವೀಕರಿಸಿದರು. ಈ ವೇಳೆ ಸಣ್ಣ ಕನಕಪ್ಪ, ದೊಡ್ಡ ಬಸವರೆಡ್ಡಿ ಸಾನಬಾಳ, ಅನಿಲ ಬಿಜ್ಜಳ, ಮಹಾಂತೇಶ ಸಜ್ಜನ, ಪೃಥ್ವಿ ಮ್ಯಾಗೇರಿ, ಹನುಮೇಶ ಡಿಶ್, ಅಂಬಣ್ಣ ಹೂಗಾರ, ವಿನೋದ ಮರಾಠಿ, ಜೀವಣ್ಣ ದುಮ್ಮಾಳ್, ಸಂಪತ್ ಹೋಟೆಲ್, ಶಿವಕುಮಾರ ಗಂಗಾಮತ, ನಾಗರಾಜ ಜೆಸಿಬಿ ಸೇರಿದಂತೆ ಇದ್ದರು.