ಅನಾಮಿಕ ತೋರಿಸಿದ ಇನ್ನೊಂದು ಜಾಗದಲ್ಲೂ ಶೋಧ: ಅಸ್ಥಿ ಸುಳಿವಿಲ್ಲ

| N/A | Published : Aug 15 2025, 01:00 AM IST / Updated: Aug 15 2025, 06:17 AM IST

ಅನಾಮಿಕ ತೋರಿಸಿದ ಇನ್ನೊಂದು ಜಾಗದಲ್ಲೂ ಶೋಧ: ಅಸ್ಥಿ ಸುಳಿವಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂಬ ಅನಾಮಿಕ ಸಾಕ್ಷಿದಾರನ ಆರೋಪಗಳ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಗುರುವಾರ ಇನ್ನೊಂದು ಸ್ಥಳದಲ್ಲಿ ಉತ್ಖನನ ನಡೆಸಿತು. ಆದರೆ, ಯಾವುದೇ ಕುರುಹು ಪತ್ತೆಯಾಗಿಲ್ಲ.

 ಬೆಳ್ತಂಗಡಿ :  ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂಬ ಅನಾಮಿಕ ಸಾಕ್ಷಿದಾರನ ಆರೋಪಗಳ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಗುರುವಾರ ಇನ್ನೊಂದು ಸ್ಥಳದಲ್ಲಿ ಉತ್ಖನನ ನಡೆಸಿತು. ಆದರೆ, ಯಾವುದೇ ಕುರುಹು ಪತ್ತೆಯಾಗಿಲ್ಲ.

ಅನಾಮಿಕ, ಒಟ್ಟು 30 ಸ್ಥಳಗಳಲ್ಲಿ ಹೆಣ ಹೂತಿರುವುದಾಗಿ ಮಾಹಿತಿ ನೀಡಿದ್ದು, ಇದರನ್ವಯ ಕನ್ಯಾಡಿಯ ನದಿ ಕಿನಾರೆಯಲ್ಲಿ ಉತ್ಖನನ ನಡೆಸಲಾಯಿತು. ಈ ಮಧ್ಯೆ, ದೂರುದಾರ ದೇವಸ್ಥಾನದ ಬಳಿ ಗೋದಾವರಿ ಮತ್ತು ಕಾವೇರಿ ವಸತಿಗೃಹದ ಮಧ್ಯಭಾಗದಲ್ಲಿ ಜಾಗ ತೋರಿಸಿದ್ದು, ಎಸ್‌ಐಟಿ ಅಧಿಕಾರಿಗಳು ಗುರುವಾರ ಇಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ, ಇಲ್ಲಿಯೂ ಉತ್ಖನನ ನಡೆಯುತ್ತಾ ಎಂಬ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ಮಧ್ಯೆ, ಹಳೆ ಬಸ್ ನಿಲ್ದಾಣದ ಪರಿಸರದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.ಮುಂದುವರಿದ ಉತ್ಖನನ ಪ್ರಕ್ರಿಯೆ:

ದೂರುದಾರ ನೀಡಿದ ಮಾಹಿತಿ ಮೇರೆಗೆ ಈಗಾಗಲೇ 16 ಗುಂಡಿಗಳನ್ನು ತೋಡಲಾಗಿದ್ದು, ಉತ್ಖನನ ನಿಲ್ಲಬಹುದು ಎಂದು ಸಾರ್ವಜನಿಕರು ಭಾವಿಸಿದ್ದರು. ಆದರೆ, ಗುರುವಾರವೂ ಅಗೆಯುವ ಪ್ರಕ್ರಿಯೆ ಮುಂದುವರಿಯಿತು. ಕಾರ್ಯಾಚರಣೆಯ 15ನೇ ದಿನ, ಧರ್ಮಸ್ಥಳ ಗ್ರಾಮದಲ್ಲಿ ದೂರುದಾರ ಗುರುತಿಸಿದ 17ನೇ ಸ್ಥಳದಲ್ಲಿ ಉತ್ಖನನ ನಡೆಯಿತು.

17ನೇ ಪಾಯಿಂಟ್‌, ಉಜಿರೆ-ಧರ್ಮಸ್ಥಳ ಮುಖ್ಯರಸ್ತೆಯ ಒಳಭಾಗದ ಕನ್ಯಾಡಿಯ ನದಿ ಕಿನಾರೆಯಲ್ಲಿ ಇದೆ. ಮುಖ್ಯರಸ್ತೆಯಿಂದ ಸುಮಾರು 1 ಕಿ.ಮೀ. ದೂರದಲ್ಲಿ, ಸ್ನಾನಘಟ್ಟದ ಬಳಿ, ನೇತ್ರಾವತಿ ನದಿಯ ಇನ್ನೊಂದು ಭಾಗದಲ್ಲಿದೆ. ಮಧ್ಯಾಹ್ನ 12 ಗಂಟೆಯಿಂದ ಸಂಜೆ 4ಗಂಟೆವರೆಗೆ ಕಾರ್ಯಾಚರಣೆ ನಡೆದಿದ್ದು, ಸುಮಾರು ಮೂರು ಅಡಿ ಗುಂಡಿ ತೋಡಲಾಯಿತು. ಆದರೆ, ಯಾವುದೇ ಕುರುಹು ಪತ್ತೆಯಾಗಿಲ್ಲ.

ಎಸ್‌ಐಟಿ ತಂಡ ಜು.28ರಂದು ಸ್ಥಳ ಗುರುತಿಸಲು ಇಲ್ಲಿಗೆ ಬಂದಾಗ ಸಂಜೆಯಾಗಿತ್ತು. ಜೊತೆಗೆ, ಭಾರೀ ಮಳೆ ಕೂಡ ಬರುತ್ತಿತ್ತು. ಹೀಗಾಗಿ, ಈ ಸ್ಥಳ ಗುರುತಿಸುವ ಕಾರ್ಯ ಮಾಡದೆ ಹಿಂದಿರುಗಿತ್ತು. ಗುರುವಾರ ಈ ಸ್ಥಳದಲ್ಲಿ ಉತ್ಖನನ ನಡೆಸುವುದರೊಂದಿಗೆ ಒಂದು ಹಂತದ ಸರಣಿ ಶೋಧ ಕಾರ್ಯ ಪೂರ್ಣಗೊಂಡಿದೆ.

ಈ ಮಧ್ಯೆ, ದೂರುದಾರ, ಒಟ್ಟು 30 ಸ್ಥಳಗಳಲ್ಲಿ ಹೆಣ ಹೂತಿರುವುದಾಗಿ ಮಾಹಿತಿ ನೀಡಿದ್ದು, ಇವು ಧರ್ಮಸ್ಥಳ ಗ್ರಾಮದ ನಾನಾ ಕಡೆ ಇವೆ. ಇಲ್ಲೆಲ್ಲ ಶೋಧ ಕಾರ್ಯಾಚರಣೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಇನ್ನು, ಶುಕ್ರವಾರ, ಸ್ವಾತಂತ್ರ್ಯ ದಿನಾಚರಣೆ ಇದ್ದು, ಉತ್ಖನನ ಕಾರ್ಯ ನಡೆಯುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.

ವಸತಿಗೃಹಗಳ ನಡುವೆ ಸ್ಥಳ ಮಹಜರು?:ಈ ಮಧ್ಯೆ, ಧರ್ಮಸ್ಥಳ ಮಂಜುನಾಥಸ್ವಾಮಿ ದೇವಸ್ಥಾನದ ಬಳಿ ಗೋದಾವರಿ ಮತ್ತು ಕಾವೇರಿ ವಸತಿಗೃಹಗಳ ಮಧ್ಯೆ ಇರುವ ಜಾಗವನ್ನು ದೂರುದಾರ ತೋರಿಸಿದ್ದು, ಯಾವ ಮಾಹಿತಿ ನೀಡಿದ್ದಾನೆ ಎಂಬುದು ತಿಳಿದು ಬಂದಿಲ್ಲ. ವಸತಿಗೃಹಗಳ ಪಕ್ಕದಲ್ಲೇ ಶೌಚಾಲಯಕ್ಕೆ ತೆರಳುವ ರಸ್ತೆಯ ಜಾಗ ಇದಾಗಿದೆ. ಕೆಲ ಸ್ವಚ್ಛತಾ ಕಾರ್ಮಿಕರಿಗೆ ಇಲ್ಲೇ ಉಳಿದುಕೊಳ್ಳಲು ಕೊಠಡಿ ನೀಡಲಾಗಿತ್ತು. ಈ ಅನಾಮಿಕ ಕೂಡ ಹೆಚ್ಚಾಗಿ ಇಲ್ಲೇ ಕಾಲ ಕಳೆಯುತ್ತಿದ್ದ ಎನ್ನಲಾಗುತ್ತಿದೆ.

ಎಸ್‌ಐಟಿ ಅಧಿಕಾರಿಗಳು ಗುರುವಾರ ಇಲ್ಲಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಇಲ್ಲಿಯೂ ಉತ್ಖನನ ನಡೆಯುತ್ತಾ ಎಂಬ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ಮಧ್ಯೆ, ಹಳೆ ಬಸ್ ನಿಲ್ದಾಣದ ಪರಿಸರದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.ದೂರುದಾರನಿಗೆ ಮಂಪರು ಪರೀಕ್ಷೆ?:

ಇದೇ ವೇಳೆ, ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ಅನಾಮಿಕ ದೂರುದಾರನನ್ನು ಮಂಪರು ಪರೀಕ್ಷೆಗೆ ಒಳಪಡಿಸುವ ಬಗ್ಗೆ ಎಸ್ಐಟಿ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ, ದೂರುದಾರ ಒಪ್ಪಿಗೆ ನೀಡಬೇಕಿದ್ದು, ಮುಂದಿನ ನಡೆಯೇನು ಎಂಬುದನ್ನು ಕಾದು ನೋಡಬೇಕಿದೆ.

ಗೋದಾವರಿ, ಕಾವೇರಿವಸತಿ ಗೃಹಗಳತ್ತ ಕರೆದೊಯ್ದ ದೂರುದಾರ

ಧರ್ಮಸ್ಥಳ ಮಂಜುನಾಥಸ್ವಾಮಿ ದೇವಸ್ಥಾನದ ಬಳಿ ಗೋದಾವರಿ ಮತ್ತು ಕಾವೇರಿ ವಸತಿಗೃಹಗಳ ಮಧ್ಯೆ ಇರುವ ಜಾಗವನ್ನು ದೂರುದಾರ ತೋರಿಸಿದ್ದು, ಯಾವ ಮಾಹಿತಿ ನೀಡಿದ್ದಾನೆ ಎಂಬುದು ತಿಳಿದು ಬಂದಿಲ್ಲ. ಈ ಸ್ಥಳ ವಸತಿಗೃಹಗಳ ಪಕ್ಕದಲ್ಲೇ ಇದ್ದು, ಶೌಚಾಲಯಕ್ಕೆ ತೆರಳುವ ರಸ್ತೆಯ ಜಾಗ ಇದಾಗಿದೆ. ಕೆಲ ಸ್ವಚ್ಛತಾ ಕಾರ್ಮಿಕರಿಗೆ ಇಲ್ಲೇ ಉಳಿದುಕೊಳ್ಳಲು ಕೊಠಡಿ ನೀಡಲಾಗಿತ್ತು. ಈ ಅನಾಮಿಕ ಕೂಡ ಹೆಚ್ಚಾಗಿ ಇಲ್ಲೇ ಕಾಲ ಕಳೆಯುತ್ತಿದ್ದ ಎನ್ನಲಾಗುತ್ತಿದೆ.

ಮುಸುಕುಧಾರಿ ರೀತಿವೇಷ ಧರಿಸಿ ಪ್ರತಿಭಟಿಸಿದೂರುದಾರ ಬಗ್ಗೆ ಅಣಕ

ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರಲಾಗುತ್ತಿದೆ ಎಂದು ಆರೋಪಿಸಿ ಮಂಡ್ಯದಲ್ಲಿ ಹಿಂದೂ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು. ಈ ವೇಳೆ ವ್ಯಕ್ತಿಯೊಬ್ಬ ಮುಸುಕುಧಾರಿ ರೀತಿ ವೇಷ ಧರಿಸಿ ಧರ್ಮಸ್ಥಳದಲ್ಲಿ ದೂರು ನೀಡಿರುವ ಅನಾಮಿಕನ ಬಗ್ಗೆ ಅಣಕ ಮಾಡಿದ್ದು ಗಮನಸೆಳೆಯಿತು.

Read more Articles on