ಸಾರಾಂಶ
ದಾಬಸ್‍ಪೇಟೆ: ಮುಸ್ಲಿಂ ಮದುವೆಯಲ್ಲಿ ತಿಲಕವಿಟ್ಟು ಊಟಕ್ಕೆ ಕುಳಿತ ಹಿಂದೂ ವ್ಯಕ್ತಿಯೊಬ್ಬರನ್ನು ಏಳಿಸಿ ಅವಮಾನ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಎದ್ದು ಹೋಗಿ ಎಂದು ಮದುಮಗನ ತಂದೆ ಸಮೀವುಲ್ಲಾ ಅವಮಾನ
ಅ.26ರಂದು ಮುಜಾಮಿಲ್ ಪಾಷ ಹಾಗೂ ಸಾನಿಯಾ ಎಂಬುವರ ಮದುವೆ ನಡೆದಿದೆ. ಈ ಮದುವೆಗೆ ಸಾನಿಯಾ ಸಂಬಂಧಿಕರೊಬ್ಬರು ರಾಜು ಎಂಬುವರಿಗೆ ಮದುವೆಗೆ ಆಹ್ವಾನಿಸಿದ್ದರು. ಈ ವ್ಯಕ್ತಿ ಹಣೆಗೆ ತಿಲಕ ಧರಿಸಿ ವಧುವರರಿಗೆ ಶುಭಾಶಯ ತಿಳಿಸಿ ಊಟಕ್ಕೆಂದು ಕುಳಿತಿದ್ದಾಗ, ನೀವು ತಿಲಕ ಇಟ್ಟಿದ್ದು, ನೀವು ಹಿಂದೂ ಹಾಗಾಗಿ ನಮ್ಮ ಮುಸ್ಲಿಂ ಧರ್ಮದ ಮದುವೆಯಲ್ಲಿ ನಿಮಗೆ ಊಟ ಹಾಕುವುದಿಲ್ಲ ಎದ್ದು ಹೋಗಿ ಎಂದು ಮದುಮಗನ ತಂದೆ ಸಮೀವುಲ್ಲಾ ಎನ್ನುವ ವ್ಯಕ್ತಿ ಅವಮಾನಿಸಿದ್ದಾರೆ.
ಈ ಘಟನೆಯ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಈ ಘಟನೆಯ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಮೀವುಲ್ಲಾನ ವರ್ತನೆಗೆ ಹಿಂದೂ ಧರ್ಮದ ಮುಖಂಡರು ಸೇರಿದಂತೆ ಮುಸ್ಲಿಂ ಧರ್ಮದ ಮುಖಂಡರು ಅಸಮಾಧಾನ ಹೊರ ಹಾಕಿದ್ದಾರೆ. ಊಟ ಹಾಕುವುದಲ್ಲೂ ಧರ್ಮವನ್ನು ಹುಡುಕುವ ನೀಚ ಮನಸ್ಸು ಒಳ್ಳೆಯದಲ್ಲ, ನಾವೆಲ್ಲಾ ಒಂದು ಎಂದು ಶಾಂತಿ, ಸಮಾನತೆ, ಸಹಬಾಳ್ವೆಯಿಂದ ಬಾಳುತ್ತಿರುವವರ ಮಧ್ಯೆ ಕೋಮು ದ್ವೇಷವನ್ನು ಹಚ್ಚುವವರಿಗೆ ದೇವರೇ ಬುದ್ಧಿ ಕಲಿಸುತ್ತಾನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
;Resize=(690,390))
;Resize=(128,128))
;Resize=(128,128))
;Resize=(128,128))
;Resize=(128,128))