ಸಾರಾಂಶ
ಮಂಗಳವಾರ ಪಿಐ ಶ್ರೀಧರ ಎಸ್.ಆರ್. ನೇತೃತದಲ್ಲಿ ಚೌಡಗೇರಿ ಪೆಟ್ರೋಲ್ ಬಂಕ್‌ನಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಗೋಕರ್ಣ
ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್ ಜಾಗೃತಿ ಅಂಗವಾಗಿ ಈ ಹಿಂದೆ ಹಲವಾರು ಜಾಗೃತಿ ಕಾರ್ಯಕ್ರಮ ಪೊಲೀಸ್ ಇಲಾಖೆ ನಡೆಸಿದೆ. ಈಗ ಹೆಲ್ಮೆಟ್ ಇಲ್ಲದಿದ್ದರೆ ಪೆಟ್ರೋಲ್ ಇಲ್ಲ, (ನೋ ಹೆಲ್ಮೆಟ್, ನೋ ಪೆಟ್ರೋಲ್) ಅಭಿಯಾನ ಹಮ್ಮಿಕೊಂಡಿದ್ದು, ಇದರಂತೆ ಮಂಗಳವಾರ ಪಿಐ ಶ್ರೀಧರ ಎಸ್.ಆರ್. ನೇತೃತದಲ್ಲಿ ಚೌಡಗೇರಿ ಪೆಟ್ರೋಲ್ ಬಂಕ್‌ನಲ್ಲಿ ನಡೆಯಿತು.ಹೆಲ್ಮೆಟ್ ಧರಿಸದೆ ಬಂದವರಿಗೆ ಪೆಟ್ರೋಲ್ ನೀಡದೆ ವಾಪಸ್ ಹೋಗಲು ಸೂಚಿಸಿ, ನಂತರ ಒಮ್ಮೆ ತಿಳುವಳಿಕೆ ನೀಡಿ ಹೆಲ್ಮೆಟ್ ಧರಿಸಿದ ಬಳಿಕ ಪೆಟ್ರೋಲ್ ನೀಡಿ ಕಳುಹಿಸಲಾಯಿತು. ಅಲ್ಲದೆ ಪೊಲೀಸರೇ ಸ್ವತಃ ಚಿತ್ರಗುಪ್ತ ಹಾಗೂ ಯಮನ ವೇಷಧಾರಿಗಳಾಗಿ ನಿಂತು ಹೆಲ್ಮೆಟ್ ಹಾಕಿದವರಿಗೆ ಭೇಷ್ ಹೇಳುತ್ತಾ ಹೂವು ನೀಡಿ ಸ್ವಾಗತಿಸಿದ್ದು, ಹೆಲ್ಮೆಟ್ ಧರಿಸದೆ ಬಂದವರಿಗೆ ಯಮ ಪಾಷ ಹಾಕಿ ಚಿತ್ರಗುಪ್ತ ಇವ ನಮ್ಮ ಕಡೆ ಬರುವವ ಎಂದು ತಿಳಿಸುತ್ತಾ, ನಿಮ್ಮ ಜೀವದ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಿ ಎಂದು ತಿಳುವಳಿಕೆ ನೀಡಿದ್ದು, ವಿಶೇಷವಾಗಿತ್ತು. ನಂತರ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಿಗೆ ಸುರಕ್ಷತೆ ದೃಷ್ಟಿಯಿಂದ ಹೆಲ್ಮೆಟ್ ಧರಿಸುವಂತೆ ತಿಳಿಸಿದರು.
ಪಿ.ಎಸ್.ಐ. ಖಾದರ ಬಾಷಾ, ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು. ಚಿತ್ರಗುಪ್ತರಾಗಿ ಹವಾಲ್ದಾರ ಅನುರಾಜ ನಾಯ್ಕ, ಯಮನಾಗಿ ಸಿಬ್ಬಂದಿ ವಸಂತ ಕಲ್ಪಾಡಿ, ಕಿಂಕರರಾಗಿ ಪೊಲೀಸ್ ಸಿಬ್ಬಂದಿ ಪರಮೇಶ್ವರ, ಸ್ಥಳೀಯರಾದ ಸುರೇಶ ಆಗೇರ ಪಾತ್ರ ನಿರ್ವಹಿಸಿದ್ದರು.ಇದರಂತೆ ಮಹಾಬಲೇಶ್ವ ಮಂದಿರದ ಬಳಿ ಸಹ ಜಾಗೃತಿ ಕಾರ್ಯಕ್ರಮ ನಡೆಯಿತು.
ಒಂದು ದಿನ ತಿಳುವಳಿಕೆ ನಂತರ ಕಟ್ಟುನಿಟ್ಟಿನ ಜಾರಿ: ಮೊದಲ ದಿನ ತಿಳುವಳಿಕೆ ನೀಡುವ ಸಲುವಾಗಿ ಪೆಟ್ರೋಲ್ ಬಂಕ್‌ನಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಮುಂದಿನ ದಿನದಲ್ಲಿ ಹೆಲ್ಮೆಟ್ ಧರಿಸಿ ಬಂದರೆ ಮಾತ್ರ ಪೆಟ್ರೋಲ್ ನೀಡುವಂತೆ ಸೂಚಿಸಿದ್ದು, ಈ ನಿಯಮ ಕಟ್ಟುನಿಟ್ಟಾಗಿ ಪಾಲನೆಯಾಗಲಿ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.;Resize=(128,128))
;Resize=(128,128))
;Resize=(128,128))
;Resize=(128,128))