ಭಾರತ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಮತದಾನದ ಹಕ್ಕಿದೆ. ಅದನ್ನು ಚಲಾಯಿಸುವುದು ಎಲ್ಲರ ಕರ್ತವ್ಯ
ಯಲಬುರ್ಗಾ: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಅರ್ಹ ಮತದಾರರನ್ನು ಕೈಬಿಡುವ ಉದ್ದೇಶವಿಲ್ಲ ಎಂದು ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಹೇಳಿದರು.
ಪಟ್ಟಣದ ಬುದ್ಧ ಬಸವ ಅಂಬೇಡ್ಕರ್ ಭವನದಲ್ಲಿ ಚುನಾವಣೆ ಆಯೋಗದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಬೂತ್ ಲೆವೆಲ್ ಏಜಂಟ್‌ಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.ಭಾರತ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಮತದಾನದ ಹಕ್ಕಿದೆ. ಅದನ್ನು ಚಲಾಯಿಸುವುದು ಎಲ್ಲರ ಕರ್ತವ್ಯ. ಸ್ವಾತಂತ್ರ್ಯ ನಂತರ ಇದುವರೆಗೆ ಒಟ್ಟು ೭ ಬಾರಿ ಮತದಾರರ ಪಟ್ಟಿ ಪರಿಷ್ಕರಣೆ ಆಗಿದೆ. ೮ನೇ ಬಾರಿ ಪರಿಷ್ಕರಣೆ ನಡೆಯುತ್ತಿದ್ದು, ಯಾವುದೇ ಮತದಾರರನ್ನು ಪಟ್ಟಿಯಿಂದ ಕೈಬಿಡುವ ದುರುದ್ದೇಶವಿಲ್ಲ. ಅರ್ಹರು ಮತದಾರರ ಪಟ್ಟಿಯಿಂದ ದೂರ ಉಳಿಯಬಾರದೆನ್ನು ಕಾರಣದಿಂದ ಪರಿಷ್ಕರಣೆ ನಡೆಸಲಾಗಿದ್ದು, ಈಗಾಗಲೇ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೨,೩೨,೫೫೦ ಮತದಾರರಿದ್ದು, ಈ ಪೈಕಿ ೨,೨೬೬೬ ಮತದಾರರ ಮ್ಯಾಪಿಂಗ್ ಆಗಿದೆ. ೬೪೮೪ ಬಾಕಿ ಇದೆ. ಈಗಾಗಲೇ ಶೇ.೯೭.೪೩ರಷ್ಟು ಮ್ಯಾಪಿಂಗ್ ಮಾಡಲಾಗಿದೆ. ಚುನಾವಣೆ ಆಯೋಗದಿಂದ ನಿಯೋಜನಗೊಂಡ ಬಿಎಲ್‌ಒಗಳಿಗೆ ಆಯಾ ಬೂತ್ ಮಟ್ಟದ ವಿವಿಧ ಪಕ್ಷಗಳ ಬಿಎಲ್‌ಎಗಳು ಮಾಹಿತಿ ನೀಡಬೇಕು ಎಂದರು.
ಬೇರೆ ಕಡೆ ಸ್ಥಳಾಂತರಗೊಂಡವರು, ಒಂದಕ್ಕಿಂತ ಹೆಚ್ಚು ಕಡೆ ಮತದಾನ ಪಟ್ಟಿಯಲ್ಲಿ ಇರುವವರು, ವಲಸೆ ಹೋದವರ ಮಾಹಿತಿ ನೀಡಲು ಆಯಾ ಬೂತ್ ಮಟ್ಟದ ಏಜಂಟರ್‌ಗಳು ಸಹಕರಿಸಬೇಕು. ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಯಾವುದೇ ಅನುಮಾನ ಬೇಡ. ಯಾವುದೇ ಕಾರಣಕ್ಕೂ ಅನರ್ಹರಿಗೆ ಪಟ್ಟಿಯಲ್ಲಿ ಅವಲಾಶ ಇರುವುದಿಲ್ಲ ಎಂದರು.ಎಸಿ ಕ್ಯಾ.ಮಹೇಶ ಮಾಲಗಿತ್ತಿ ಮಾತನಾಡಿದರು.
ಈ ಸಂದರ್ಭ ಯಲಬುರ್ಗಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ವಿಶ್ವನಾಥಗೌಡ, ತಹಸೀಲ್ದಾರ್‌ಗಳಾದ ಪ್ರಕಾಶ ನಾಶಿ, ಬಸವರಾಜ ಬೆಣ್ಣೆಶಿರೂರ, ಉಪತಹಸೀಲ್ದಾರ್ ವಿಜಯಕುಮಾರ ಗುಂಡೂರ, ತಾಪಂ ಇಒ ನೀಲಗಂಗಾ ಬಬಲಾದ, ಸಂತೋಷ ಪಾಟೀಲ್ ಬಿರಾದಾರ, ಪಿಡಬ್ಲುಡಿ ಎಇಇ ಮಲ್ಲಿಕಾರ್ಜುನ, ಪಪಂ ಮುಖ್ಯಾಧಿಕಾರಿ ನಾಗೇಶ ಸೇರಿದಂತೆ ಮತ್ತಿತರರು ಇದ್ದರು.