ಎಷ್ಟೇ ಎಫ್‌ಐಆರ್ ಹಾಕಿದರೂ ಸತ್ಯ ಹೇಳುವುದನ್ನು ನಿಲ್ಲಿಸುವುದಿಲ್ಲ: ಸಿ.ಟಿ.ರವಿ

| Published : Sep 14 2025, 01:04 AM IST

ಎಷ್ಟೇ ಎಫ್‌ಐಆರ್ ಹಾಕಿದರೂ ಸತ್ಯ ಹೇಳುವುದನ್ನು ನಿಲ್ಲಿಸುವುದಿಲ್ಲ: ಸಿ.ಟಿ.ರವಿ
Share this Article
  • FB
  • TW
  • Linkdin
  • Email

ಸಾರಾಂಶ

ಎಫ್‌ಐಆರ್ ಬಗ್ಗೆ ನಮ್ಮ ವಕೀಲರ ತಂಡ ತಲೆಕೆಡಿಸಿಕೊಳ್ಳುತ್ತಾರೆ. ಆದರೆ, ನಾವು ಅದರಿಂದ ಹೆದರಿ ಹಿಂದೆ ಸರಿಯುವುದಿಲ್ಲ. ಗಣಪತಿ ಮೇಲೆ ಕಲ್ಲು ಹೊಡೆದರೆ ಸಹಿಸಿಕೊಳ್ಳಬೇಕಾ?, ಅವರ ಮೇಲೆ ಕಲ್ಲು ಹೊಡೆದರೆ ಅವರು ಸಹಿಸಿಕೊಳ್ಳುತ್ತಾರಾ. ಅದನ್ನು ಸಹಿಸಿಕೊಳ್ಳುವುದಾದರೆ ಸಹನೆ ಪಾಠ ಮಾಡಲಿ. ಆಕ್ಷನ್‌ಗೆ ರಿಯಾಕ್ಷನ್ ಇರುತ್ತದೆ ಅಷ್ಟೆ.

ಕನ್ನಡಪ್ರಭ ವಾರ್ತೆ ಮದ್ದೂರು

ಸತ್ಯ ಹೇಳಿದರೆ ಎಫ್‌ಐಆರ್ ಹಾಕುತ್ತಾರೆ ಅನ್ನುವುದಾದರೆ ಸತ್ಯ ಹೇಳುವುದನ್ನು ನಿಲ್ಲಿಸಲು ಆಗುತ್ತದೆಯೇ ಎಂದು ಶಾಸಕ ಸಿ.ಟಿ.ರವಿ ಪ್ರಶ್ನಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಫ್‌ಐಆರ್ ಬಗ್ಗೆ ನಮ್ಮ ವಕೀಲರ ತಂಡ ತಲೆಕೆಡಿಸಿಕೊಳ್ಳುತ್ತಾರೆ. ಆದರೆ, ನಾವು ಅದರಿಂದ ಹೆದರಿ ಹಿಂದೆ ಸರಿಯುವುದಿಲ್ಲ. ಗಣಪತಿ ಮೇಲೆ ಕಲ್ಲು ಹೊಡೆದರೆ ಸಹಿಸಿಕೊಳ್ಳಬೇಕಾ?, ಅವರ ಮೇಲೆ ಕಲ್ಲು ಹೊಡೆದರೆ ಅವರು ಸಹಿಸಿಕೊಳ್ಳುತ್ತಾರಾ. ಅದನ್ನು ಸಹಿಸಿಕೊಳ್ಳುವುದಾದರೆ ಸಹನೆ ಪಾಠ ಮಾಡಲಿ. ಆಕ್ಷನ್‌ಗೆ ರಿಯಾಕ್ಷನ್ ಇರುತ್ತದೆ ಅಷ್ಟೆ ಎಂದರು.

ಹಿಂದೂಗಳ ಗ್ರಂಥದ ಬಗ್ಗೆ ಎಸ್‌ಐಟಿ ಅಧ್ಯಯನ ನಡೆಸಲಿ. ಮತೀಯ ಗ್ರಂಥಗಳ ನಡುವಿನ ವ್ಯತ್ಯಾಸದ ಬಗ್ಗೆ ಅಧ್ಯಯನ ನಡೆಸಿ ಅದರಲ್ಲಿ ಏನಿದೆ ಎಂಬುದನ್ನು ಪತ್ತೆ ಹಚ್ಚಲಿ. ಮುಸ್ಲಿಮರ ದುರ್ಬೋದನೆ ನಿಲ್ಲಿಸದಿದ್ದರೆ ಶಾಂತಿ ಹೇಗೆ ನೆಲೆಸುತ್ತದೆ ಎಂದು ಪ್ರಶ್ನಿಸಿದರು.

ಮುಸ್ಲಿಮರ ಮತೀಯ ಗ್ರಂಥಗಳು ಕಲ್ಲು ಹೊಡೆಯುವಂತೆ ಬೋಧನೆ ಮಾಡುತ್ತವೆ. ಮತೀಯ ಗ್ರಂಥಗಳ ಬಗ್ಗೆ ಅಧ್ಯಯನ ನಡೆಸಿದರೆ ಅದರ ತಿರುಳು ಅರ್ಥವಾಗುತ್ತದೆ. ಹಿಂದೂಗಳ ಗ್ರಂಥವನ್ನು ಕೂಡ ಅಧ್ಯಯನ ಮಾಡಲಿ. ಅದೇ ನಮ್ಮ ಗ್ರಂಥಗಳನ್ನು ಅಧ್ಯಯನ ಮಾಡಿದರೆ ದೇವರಾಗುತ್ತಾರೆ. ಆದರೆ, ಮತೀಯ ಗ್ರಂಥವನ್ನು ಅಧ್ಯಯನ ಮಾಡಿದರೆ ಬಿನ್ ಲಾಡನ್ ಆಗುತ್ತಾರೆ ಎಂದರು.

ಈ ನೆಲದ ಮದ್ದೂರಮ್ಮ, ಗಣೇಶ, ಶಿವನಿಗೆ ಜಾಗ ಇಲ್ಲ. ಅವರ ಬಳಿ ಅಲ್ಲಾ ಒಬ್ಬನಿಗೆ ಮಾತ್ರ ಜಾಗ. ಉಳಿದೆಲ್ಲಾ ದೇವರುಗಳನ್ನು ದ್ವೇಷಿಸುವುದೇ ಸಮಸ್ಯೆ. ಅವರು ನಾಲ್ಕು ಸಂಖ್ಯೆ ಇದ್ದಾಗ ಒಂದು ರೀತಿ ನಲವತ್ತು ಇದ್ದಾಗಲೇ ಒಂದು ರೀತಿ. ನಾನೂರಾದಗಲೂ ಕತಲ್‌ಕರೋ ಎಂದು ಡೈರೆಕ್ಷನ್ ಕೊಡುತ್ತಾರೆ. ಇಂತಹ ಧೋರಣೆಯನ್ನು ಅವರು ಅನುಸರಿಸುತ್ತಾರೆ ಎಂದು ದೂರಿದರು.

ಮದ್ದೂರಿನಲ್ಲಿ ಪ್ರಗತಿಪರರ ಪ್ರತಿಭಟನಾ ರ್ಯಾಲಿ ಬಗ್ಗೆ ವಿರೋಧ ವ್ಯಕ್ತಪಡಿಸಿದ ಅವರು, ಮನೆ ಹಾಳು ಮಾಡೋದು, ದ್ವೇಷಿಸೋರ ಪರ ಕೆಲಸ ಮಾಡುವುದೇ ಪ್ರಗತಿಪರರ ಕೆಲಸ ಆಗಿದೆ. ಪ್ರಗತಿಪರರ ಜೊತೆ ಚರ್ಚೆಗೆ ನಾನೂ ಸಹ ಸಿದ್ಧನಿದ್ದೇನೆ. ಬೇಕಿದ್ದರೆ ಬರಲಿ ಎಂದು ಸವಾಲು ಹಾಕಿದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಸಿ.ಕೆ.ಸತೀಶ್, ಯುವ ಘಟಕದ ಅಧ್ಯಕ್ಷ ಸಂತೋಷ್, ಮುಖಂಡರಾದ ಕೆಂಪಬೋರಯ್ಯ, ಡಾಬಾ ಕಿಟ್ಟಿ, ಮಂಜು, ಅನಿಲ್ ಮತ್ತಿತರರಿದ್ದರು.