ಬಿಎಲ್‌ಒ ಕೆಲಸಕ್ಕೆ ಶಿಕ್ಷಕರ ನಿಯೋಜನೆ ಬೇಡ

| Published : Sep 03 2025, 01:01 AM IST

ಸಾರಾಂಶ

ಬಿಎಲ್‌ಒ ಕೆಲಸಕ್ಕೆ‌‌ ಶಿಕ್ಷಕರ ನಿಯೋಜನೆ ಮಾಡುವುದನ್ನು ಕೈಬಿಡಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ‌‌ ಶಿಕ್ಷಕರ ಸಂಘ ರೋಣ ತಾಲೂಕು ಘಟಕ‌ ಪದಾಧಿಕಾರಿಗಳು ಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ‌‌ ಕಾರ್ಯಾಲಯಕ್ಕೆ ತೆರಳಿ‌ ಮನವಿ ಸಲ್ಲಿಸಿದರು.

ರೋಣ: ಬಿಎಲ್‌ಒ ಕೆಲಸಕ್ಕೆ‌‌ ಶಿಕ್ಷಕರ ನಿಯೋಜನೆ ಮಾಡುವುದನ್ನು ಕೈಬಿಡಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ‌‌ ಶಿಕ್ಷಕರ ಸಂಘ ರೋಣ ತಾಲೂಕು ಘಟಕ‌ ಪದಾಧಿಕಾರಿಗಳು ಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ‌‌ ಕಾರ್ಯಾಲಯಕ್ಕೆ ತೆರಳಿ‌ ಮನವಿ ಸಲ್ಲಿಸಿದರು.

ಬಿಎಲ್‌ಒ ಕೆಲಸಕ್ಕೆ ಶಿಕ್ಷಕರನ್ನು ನಿಯೋಜಿಸಿದ್ದರಿಂದ ಮುಖ್ಯ ಶಿಕ್ಷಕರಿಗೆ ಹಾಗೂ ಸಹ ಶಿಕ್ಷಕ , ಶಿಕ್ಷಕಿಯರಿಗೆ ದಿನನಿತ್ಯದ ಶೈಕ್ಷಣಿಕ ಬೋಧನಾ ಕಾರ್ಯಗಳಿಗೆ ಹಾಗೂ ಇನ್ನಿತರ ಆಡಳಿತದ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಜೊತೆಗೆ ಸಕಾಲಕ್ಕೆ ಪಾಠ ಬೋಧನೆ ಪೂರ್ಣಗೊಳಿಸಲು, ವಿದ್ಯಾರ್ಥಿಗಳ ಕಲಿಕಾ ಶೌಶಲ್ಯ ಹೆಚ್ಚಿಸುವಲ್ಲಿ ಶಿಕ್ಷಕರಿಗೆ ಸಮಯ ಸಾಲದೇ ಮಾನಸಿಕ ಒತ್ತಡವಾಗುತ್ತಿದೆ. ಆದ್ದರಿಂದ ಶಿಕ್ಷಕರಿಗೆ ಮಕ್ಕಳೊಂದಿಗೆ ಶೈಕ್ಷಣಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗುವಂತಾಗಬೇಕು. ಈ ದಿಶೆಯಲ್ಲಿ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ಬಿಎಲ್‌ಒ ಕೆಲಸಕ್ಕೆ ನಿಯೋಜಿಸಬಾರದು. ಇತರೆ ಇಲಾಖೆಯಲ್ಲಿರುವ ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಿ ಬಿಎಲ್‌ಒ ಕೆಲಸದಿಂದ ಶಿಕ್ಷಕರನ್ನು ಕೈಬೀಡುವ ಆದೇಶವನ್ನು ಮಾಡಬೇಕು. ಈ ಕುರಿತು ಶಿಕ್ಷಣ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಗಮನ ಹರಿಸಬೇಕು ಎಂದು ಮನವಿ ಮೂಲಕ ವಿನಂತಿಸಿದರು.

ಈ ವೇಳೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರೋಣ ತಾಲೂಕು ಅಧ್ಯಕ್ಷ ವೈ.ಡಿ.ಗಾಣಿಗೇರ, ಪ್ರಧಾನ ಕಾರ್ಯದರ್ಶಿ ಸಿ.ಕೆ. ಕೆಸರಿ, ಬಿ.ಎನ್. ಹಿರೇಮಠ, ಎಂ.ವೈ. ಜಕ್ಕರಸಾನಿ, ಸರ್ಕಾರಿ‌ ನೌಕರರ ಸಂಘದ ತಾಲೂಕು ಅಧ್ಯಕ್ಷ. ಎಸ್.ಜಿ. ದಾನಪ್ಪಗೌಡ್ರ ಮುಂತಾದವರಿದ್ದರು.