ಸಾರಾಂಶ
ಹೈದರಾಬಾದ ಕರ್ನಾಟಕದ ೩೭೧ಜೆ ಪ್ರಮಾಣ ಪತ್ರ ಪಡೆಯಲು ಇನ್ನು ಮುಂದೆ ಅಲೆಯಬೇಕಾದ ಅವಶ್ಯಕತೆ ಇರುವುದಿಲ್ಲ.
ಕನ್ನಡಪ್ರಭ ವಾರ್ತೆ ಹನುಮಸಾಗರ
ಹೈದರಾಬಾದ ಕರ್ನಾಟಕದ ೩೭೧ಜೆ ಪ್ರಮಾಣ ಪತ್ರ ಪಡೆಯಲು ಇನ್ನು ಮುಂದೆ ಅಲೆಯಬೇಕಾದ ಅವಶ್ಯಕತೆ ಇರುವುದಿಲ್ಲ ಎಂದು ಕಂದಾಯ ನಿರೀಕ್ಷಕ ಉಮೇಶಗೌಡ ಮಾಲಿಪಾಟೀಲ ಹೇಳಿದರು.ಗ್ರಾಮದ ಸರ್ಕಾರಿ ಕಾಲೇಜಿನಲ್ಲಿ ಗುರುವಾರ ನಡೆದ ವಿದ್ಯಾರ್ಥಿಗಳಿಗೆ ೩೭೧ಜೆ ಪ್ರಮಾಣಪತ್ರ ಅಭಿಯಾನದಲ್ಲಿ ಮಾತನಾಡಿದರು.
ಒಂದನೆ ತರಗತಿಯಿಂದ ಹತ್ತನೆ ತರಗತಿಯವರೆಗೆ ಕಲಿತ ಶಾಲಾ ದಾಖಲಾತಿ, ನಿಮ್ಮ ಆಧಾರ್ ಕಾರ್ಡ್, ತಂದೆಯ ಆಧಾರ್ ಕಾರ್ಡ್, ೧೦ ವರ್ಷ ಹಿಂದಿನ ಮನೆಯ ಉತಾರ, ಹೊಲ ಇದ್ದರೆ ಹೊಲದ ಉತಾರ ಹಚ್ಚಿ ನಿಮ್ಮ ಶಾಲೆಯ ಪ್ರಾಶುಪಾಲರಿಗೆ ಒಪ್ಪಿಸಬೇಕು. ಕಂದಾಯ ಇಲಾಖೆಯಿಂದ ಅದನ್ನು ಪರಿಶೀಲಿಸಿ ತೆಗೆದುಕೊಂಡು ಹೋಗುತ್ತೇವೆ. ಇದರ ಸರ್ಕಾರಿ ವೆಚ್ಚ ₹೪೦ ಕೊಡಬೇಕು. ಕೆಲವೇ ದಿನಗಳಲ್ಲಿ ನಿಮ್ಮ ೩೭೧ ಜೆ ಪ್ರಮಾಣ ಪತ್ರವನ್ನು ನಿಮ್ಮ ಶಾಲೆಗೆ ತಂದು ವಿತರಿಸಲಾಗುವುದು ಎಂದರು.ರೈತ ಸಂಘದ ಕರ್ನಾಟಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಜೀರಸಾಬ ಮೂಲಿಮನಿ ಮಾತನಾಡಿ, ಹೈದರಾಬಾದ ೩೭೧ ಜೆ ಪ್ರಮಾಣಪತ್ರ ತೆಗೆದುಕೊಳ್ಳಲು ಕಚೇರಿ ಅಲೆದಾಟ ತಪ್ಪಿಸಲು ಕಂದಾಯ ಇಲಾಖೆಯವರು ಈ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು. ಇದೇ ಸಂದರ್ಭ ರೈತ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಅನುಬಂಧ ಸಿ ಪ್ರಮಾಣ ಪತ್ರ ವಿತರಿಸಲಾಯಿತು.
ಆರ್‌ಐ ಅಭಿಶೇಕ ಕರಡಿ, ಪ್ರಾಚಾರ್ಯ ಸಾಹೇಬಗೌಡ ಬಿರಾದಾರ, ಲಕಪತಿ ರಾಠೋಡ, ಶರಣಪ್ಪ ಬಂಜತ್ರಿ, ಚನ್ನಬಸಪ್ಪ ಬಂಡೆಪ್ಪನವರ, ವನಜಾ, ಶರಣಪ್ಪ ಗೊಡೆಕಾರ, ಉಮೆಶ ದೊಟಿಹಾಳ, ಶರಣಪ್ಪ ಬಾಚಲಾಪೂರ ಇತರರಿದ್ದರು.