ಸಾರಾಂಶ
207ನೇ ಭೀಮ ಕೋರೆಗಾಂವ್ ವಿಜಯ ದಿವಸವನ್ನು ಆಲೂರು ತಾಲೂಕು ಚಲವಾದಿ ಮಹಾಸಭದ ವತಿಯಿಂದ ತಾಲೂಕು ಕಚೇರಿ ಮುಂಭಾಗವಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ವಿಜಯೋತ್ಸವ ದಿನವನ್ನು ಆಚರಿಸಲಾಯಿತು. ಯಾರೂ ಸಹ ಇತಿಹಾಸವನ್ನು ಯಾರು ಸಹ ಮರೆಯಬಾರದು ಎಂದು ಅವರು ಪ್ರತಿಯೊಬ್ಬರೂ ಅಂಬೇಡ್ಕರ್ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಸಂವಿಧಾನ ಬದ್ಧವಾಗಿ ನಡೆದುಕೊಳ್ಳಬೇಕೆಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಆಲೂರು
207ನೇ ಭೀಮ ಕೋರೆಗಾಂವ್ ವಿಜಯ ದಿವಸವನ್ನು ಆಲೂರು ತಾಲೂಕು ಚಲವಾದಿ ಮಹಾಸಭದ ವತಿಯಿಂದ ತಾಲೂಕು ಕಚೇರಿ ಮುಂಭಾಗವಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ವಿಜಯೋತ್ಸವ ದಿನವನ್ನು ಆಚರಿಸಲಾಯಿತು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಛಲವಾದಿ ಸಂಘದ ಗೌರವ ಅಧ್ಯಕ್ಷರಾದ ಎ ಟಿ ಮಲ್ಲೇಶ್ ಅವರು ಜನವರಿ 1 ದಿನಾಂಕವನ್ನು ನಾವೆಲ್ಲರೂ ಸ್ವಾಭಿಮಾನಿ ದಿವಸವೆಂದು ಆಚರಣೆ ಮಾಡಬೇಕು, ಈ ದಿನದಂದು 500 ಜನ ಸಿದ್ದನಾಯಕನ ಸೈನ್ಯ 28000 ಪೇಶ್ವಯರನ್ನ ಭೀಮ ನದಿಯ ತೀರದಲ್ಲಿ ಸಮರದಲ್ಲಿ ಸೋಲಿಸಿ ವಿಜಯೋತ್ಸವ ಆಚರಿಸಿದ ದಿವಸ ಜೊತೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅದರ ಜ್ಞಾಪಕ ಅರ್ಥಕವಾಗಿ ವಿಜಯಸ್ತಂಭಕ್ಕೆ ಮಾಲಾರ್ಪಣೆ ಮಾಡುತ್ತಿದ್ದರು. ಯಾರೂ ಸಹ ಇತಿಹಾಸವನ್ನು ಯಾರು ಸಹ ಮರೆಯಬಾರದು ಎಂದು ಅವರು ಪ್ರತಿಯೊಬ್ಬರೂ ಅಂಬೇಡ್ಕರ್ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಸಂವಿಧಾನ ಬದ್ಧವಾಗಿ ನಡೆದುಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಎ ಟಿ ಲೋಕೇಶ್ ಅವರು, ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ. ಹಾಗಾಗಿ ಸಿದ್ದನಾಯಕನ ಸೈನ್ಯ ಪೇಶ್ವೆಗಳನ್ನು ಸದೆ ಬಡಿದು ಭೀಮಾ ನದಿಯ ತೀರದಲ್ಲಿ ರಕ್ತದೋಕಳಿಯನ್ನೇ ಹರಿಸಿತು, ಹಾಗಾಗಿ ಈ ದಿನವನ್ನು ಭೀಮ ಕೋರೆಗಾಂವ್ ದಿವಸ ಎಂದು ಆಚರಣೆ ಮಾಡಬೇಕು ಎಂದು ತಿಳಿಸಿದರು.ತಾಲೂಕು ಅಧ್ಯಕ್ಷರಾದ ಲೋಹಿತ್ ಕುಮಾರ್ ರವರು ಮಾತನಾಡಿ ಜನವರಿ 1ಅನ್ನು- ಶೌರ್ಯ ದಿನವನ್ನಾಗಿ ಆಚರಿಸಬೇಕು, ಅಸ್ಪೃಶ್ಯತೆ ವಿರುದ್ಧ ಹೋರಾಡಿ ವಿಜಯ ಗಳಿಸಿದ ದಿನವನ್ನು ಎಲ್ಲರೂ ನೆನೆಯಬೇಕೆಂದರು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಮಲ್ಲೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜ್ಜನಹಳ್ಳಿ ಲೋಕೇಶ್, ತಾಲೂಕ ಅಧ್ಯಕ್ಷ ಲೋಹಿತ್ ಕುಮಾರ್, ತಾಲೂಕಿನ ಪದಾಧಿಕಾರಿಗಳು ಭಾಗವಹಿಸಿದ್ದರು.