ಮೈಸೂರು ರಾಜರ ಬಳಿ ಸ್ವಂತ ಮನೆ ಇಲ್ಲ, ಆಸ್ತಿ ಬರೀ 5 ಕೋಟಿ!

| Published : Apr 02 2024, 01:02 AM IST / Updated: Apr 02 2024, 05:13 AM IST

ಮೈಸೂರು ರಾಜರ ಬಳಿ ಸ್ವಂತ ಮನೆ ಇಲ್ಲ, ಆಸ್ತಿ ಬರೀ 5 ಕೋಟಿ!
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಮಹಾರಾಜರಾಗಿದ್ದರೂ ಸ್ವಂತ ಮನೆ ಹೊಂದಿಲ್ಲ. ಯಾವುದೇ ರೀತಿಯ ಸ್ಥಿರಾಸ್ಥಿ ಕೂಡ ಅವರ ಬಳಿ ಇಲ್ಲ, ಸ್ವಂತ ವಾಹನವನ್ನೂ ಹೊಂದಿಲ್ಲ. ಅವರ ಒಟ್ಟಾರೆ ಆಸ್ತಿ ಮೌಲ್ಯ 4.99 ಕೋಟಿ ರು. ಮಾತ್ರ.

 ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಮಹಾರಾಜರಾಗಿದ್ದರೂ ಸ್ವಂತ ಮನೆ ಹೊಂದಿಲ್ಲ. ಯಾವುದೇ ರೀತಿಯ ಸ್ಥಿರಾಸ್ಥಿ ಕೂಡ ಅವರ ಬಳಿ ಇಲ್ಲ, ಸ್ವಂತ ವಾಹನವನ್ನೂ ಹೊಂದಿಲ್ಲ. ಅವರ ಒಟ್ಟಾರೆ ಆಸ್ತಿ ಮೌಲ್ಯ 4.99 ಕೋಟಿ ರು. ಮಾತ್ರ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ ಅವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು, ಚುನಾವಣಾಧಿಕಾರಿಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಅವರು ತಮ್ಮ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.

ತಾವು ಯಾವುದೇ ಬ್ಯಾಂಕ್‌ನಿಂದ ಸಾಲ ಪಡೆದಿಲ್ಲ, ಯಾವುದೇ ರೀತಿಯ ಆದಾಯ ತೆರಿಗೆ ಹಣ ಬಾಕಿ ಉಳಿಸಿಕೊಂಡಿಲ್ಲ, ತಮ್ಮ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದವರು ತಿಳಿಸಿದ್ದಾರೆ. ಇನ್ನು, ಯದುವೀರ್‌ ಬಳಿ 1 ಲಕ್ಷ ನಗದು ಹಣವಿದೆ. ವಿವಿಧ ಬ್ಯಾಂಕ್‌ ಗಳಲ್ಲಿನ ಉಳಿತಾಯ ಹಣ, ವಿವಿಧ ಕಂಪನಿಗಳು, ಹೋಟೆಲ್‌, ಉದ್ಯಮ ಸೇರಿ ಹಲವೆಡೆ ಹೂಡಿಕೆ ಮಾಡಿರುವ ಷೇರು ಸೇರಿ 1.36 ಕೋಟಿ, 4 ಕೆ.ಜಿ. ಚಿನ್ನ, 20 ಕೆ.ಜಿ. ಬೆಳ್ಳಿ ಸೇರಿ ಒಟ್ಟಾರೆ 4.99 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.

ಅವರ ಪತ್ನಿ ತ್ರಿಷಿಕಾ ಬಳಿ 2 ಕೆಜಿ ಚಿನ್ನ, 100 ಗ್ರಾಂ. ಗಟ್ಟಿ ಚಿನ್ನ ಮತ್ತು 10 ಕೆ.ಜಿ. ಬೆಳ್ಳಿ ಸೇರಿ ಒಟ್ಟಾರೆ 1.04 ಕೋಟಿ ಮೌಲ್ಯದ ಆಸ್ತಿ ಇದೆ.